ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೀಗೆಯೇ ಹಲವು ಬಾರಿ ಗ್ರಾಮ ಸಭೆಗಳು ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಯಾವುದೇ ತರಹದ ನೋಟಿಸ್ ಸದಸ್ಯರಿಗೆ ನೀಡುವುದಿಲ್ಲ ಹಾಗೂ ಪಂಚಾಯಿತಿ ಸದಸ್ಯರ ಗಮನಕ್ಕೆ ಹಾಗೂ ಗ್ರಾಮದಲ್ಲಿ ಯಾರಿಗೂ ಸರಿಯಾದ ರೀತಿ ಮಾಹಿತಿ ನೀಡದೆ ಗ್ರಾಮ ಸಭೆ ಇಂದು ಮಾಡಿಕೊಂಡಿರುವುದು ಎಷ್ಟು ಸರಿ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸೆಲ್ವಂ ತನ್ನ ಅಳಲು ತೋರಿಕೊಂಡರು ಹಾಗೂ ಈ ಪಂಚಾಯಿತಿ ಪಿಡಿಓ ಗಂಗಾಧರ್ ಯಾವುದೇ ಸಭೆಗಳು ಮಾಡಿದರೆ ದಿನಾಂಕ ನಿಗದಿ ಮಾಡುತ್ತಾರೆ ಸದಸ್ಯರಿಗೆ ತಿಳಿಸುತ್ತಾರೆ ,ಆದರೆ ಸಭೆ ರದ್ದು ಮಾಡಿದಾಗ ತಿಳಿಸುವುದಿಲ್ಲ ಆಗ ಸದಸ್ಯರು ಅಭಿವೃದ್ಧಿ ಅಧಿಕಾರಿಯನ್ನು ಕರೆ ಮಾಡಿ ಕೇಳಬೇಕು ಹೀಗೆಯೇ ಹತ್ತು ಹಲವು ಬೇಜವಾಬ್ದಾರಿ ಕೆಲ್ಸ ಮಾಡುತ್ತಾರೆ ಆದ ಕಾರಣ ಈ ಕೂಡಲೇ ಇವರನ್ನು ಮೇಲಧಿಕಾರಿಗಳು ಎಚ್ಚರಿಸಿ ಗ್ರಾಮಭಿರುದ್ಧಿ ಗೆ ಸಹಕರಿಸುವಂತೆ ಹೇಳ ಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಇದೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಸೆಲ್ವಂ ಕೇಳಿಕೊಂಡರು.
ವರದಿ ಉಸ್ಮಾನ್ ಖಾನ್.
