ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ದ ತಾಲೂಕ ಕ್ರೀಡಾಂಗಣದಲ್ಲಿ 2023 ರ ಸಾಲಿನ ಗಣರಾಜ್ಯೋತ್ಸವ ಅದ್ದೂರಿಯಾಗಿ ನಡೆಯಿತು.
ತಾಲೂಕ ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಆದ ಶ್ರೀ ಶಂಕರ್ ಗೌಡಿ ಅವರು ದ್ವಜಾರೋಹಣ ನೆರವೇರಿಸಿದರು.
ಗಣರಾಜ್ಯೋತ್ಸವ
ಕಾರ್ಯಕ್ರಮ ವೇಳೆ ಮಾಜಿ ಶಾಸಕರಾದ ವಿ ಎಸ್ ಪಾಟೀಲ್,
ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಲ್ ಟಿ ಪಾಟೀಲ್, ಸಿಪಿಐ ಸಿದ್ದಪ್ಪ ಸಿಮಾನಿ,ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಜಯಸುದಾ ಭೋವಿ, ಉಪಾಧ್ಯಕ್ಷರಾದ ಶ್ರೀಕಾಂತ್ ಸಾನು, ಬಿಇಒ ಜ್ಯೋತಿ ಅವರು ಉಪಸ್ಥಿತರಿದ್ದರು.
ಧ್ವಜಾರೋಹಣ ನಂತರ ನಡೆದ ಪಥಸಂಚಲನ ವೇಳೆ ಪೊಲೀಸ್ ಇಲಾಖೆ, ಗೃಹ ರಕ್ಷಕ ದಳ, ಸ್ಕೌಟ್ಸ್ ಮತ್ತು ಗೈಡ್ಸ್,ಹಾಗೂ ತಾಲೂಕಿನ ನಗರ ಭಾಗದ ಎಲ್ಲ ಶಾಲೆಯ ಮಕ್ಕಳು ಶಿಸ್ತು ಬದ್ದವಾಗಿ ಪಾಲ್ಗೊಂಡಿದ್ದರು
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ಶ್ರೀ ಶಂಕರ್ ಗೌಡಿ ದೇಶ ವರ್ಷಗಳು ಕಳೆದಂತೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ, ವಿಜ್ಞಾನ ,ಕ್ರೀಡೆ ,ರಕ್ಷಣೆ , ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರ ಗಳಲ್ಲಿಯೂ ಸ್ವಾವಲಂಬನೆ ಸಾಧಿಸುತ್ತಿದ್ದು ಎಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ ಎಂದು ದೇಶದ ಅಭಿೃವೃದ್ಧಿಯ ಕುರಿತು ವಿವರಿಸಿದರು
ಇದೆ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರನ್ನು ಸನ್ಮಾನಿಸಲಾಯಿತು