ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬೆಳಗುರ್ಕಿ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ 74ನೇ ಗಣರಾಜ್ಯೋತ್ಸವ ದಿನಾಚರಣೆ ನೆರವೇರಿತು. ಧ್ವಜಾರೋಹಣವನ್ನು SDMC ಅಧ್ಯಕ್ಷರಾದ ಶ್ರೀ.ಪರಸಪ್ಪನವರು ನೆರವೇರಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ನಿರೂಪಣೆ ಸುನೀಲ್ ಸರ್, ಪ್ರಾಸ್ಥಾವಿಕವಾಗಿ ತಿಮ್ಮರೆಡ್ಡಿ ಶಿಕ್ಷಕರು, ವಂದನಾರ್ಪಣೆಯನ್ನು ಮೀನಾಕ್ಷಿ ಮೇಡಮ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಅಗಮಿಸಿದಂತಹ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಸಾಂಸ್ಕೃತಿಕ ಮತ್ತು ಕೃಷಿ ಸಂಘದ ರಾಯಚೂರು ಜಿಲ್ಲೆಯ ನಿರ್ಧೆಶಕರಾದ ಈರೇಶ್ ಇಲ್ಲೂರು ವಕೀಲರು ಮಾತನಾಡಿ ಶಾಲೆಯ ಅಭಿವೃದ್ದಿಯಲ್ಲಿ ಸಮುದಾಯ ಮತ್ತು ಸಂಘ ಸಂಸ್ಥೆಗಳು ಪ್ರಮುಖವಾದ ಪಾತ್ರವಹಿಸುತ್ತದೆ. ಅವುಗಳನ್ನು ಶಾಲೆಗಳು ಬಳಕೆಮಾಡಿಕೊಂಡು ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಬೇಕೆಂದರು. ಈ ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಸಾಂಸ್ಕೃತಿಕ ಹಾಗೂ ಕೃಷಿ ಸಂಘ ಕಲ್ಬುರ್ಗಿ ವತಿಯಿಂದ ಶಾಲೆಗೆ ಸ್ಮಾರ್ಟ ಕ್ಲಾಸ್ ಟಿವಿ ಯನ್ನು ಕೊಡುಗೆಯಾಗಿ ನೀಡಿ ಚಾಲನೆ ಕೂಡಾ ಮಾಡಲಾಯಿತು ಹಾಗೂ ಗ್ರಾಮದ ಹಳೆಯ ವಿದ್ಯಾರ್ಥಿಯಾದ ಹರೀಶ ಶೆಟ್ಟಿ ಬೆಳಗುರ್ಕಿಯವರು ಮಕ್ಕಳಿಗೆ ಕುಳಿತು ಕೊಳ್ಳಲು ಚೇರ ಟೇಬಲಗಳನ್ನು ಶಾಲೆಗೆ ನೀಡಿದರು ಹಾಗೂ ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ಸಿಬ್ಬಂದಿಯರು, SDMCಸದ್ಯಸರು, ಗ್ರಾ.ಪ ಸದ್ಯಸರು, ಗ್ರಾಮದ ಮುಖಂಡರು , ಬೆಳಗುರ್ಕಿ ಸಂಘ ಸಂಸ್ಥೆಯವರು, ಅಂಗನವಾಡಿ ಅಶಾ ಕಾರ್ಯಕರ್ತರು, ಬಿಸಿಊಟ ಅಡಿಗೆ ಸಿಬ್ಬಂದಿಯವರು, ಭೀಮಣ್ಣ ಹಡಪದ, ಬೆಳಗುರ್ಕಿ ಮಲ್ಲಯ್ಯಶೆಟ್ಟಿ, ಗುರುರಾಜ, ಪ್ರಭುಲಿಂಗಯ್ಯ ಸ್ವಾಮಿ, ಗೋವಿಂದ ಮೇಸ್ತ್ರಿ, ಚನ್ನ ಬಸವ ಹಾಗೂ ಗೆಳಯರು ಬಳಗ, ಬಸವರಾಜ, ಹನುಮಂತ ,ಗಂಗಾಧರ, ರಾಜ, ಗ್ರಾಮದ ಶಿಕ್ಷಣ ಪ್ರೇಮಿಗಳು ಉಪಸ್ಥಿತಿಯಲ್ಲಿದ್ದರು. ವರದಿ:- ವೆಂಕಟೇಶ. ಹೆಚ್. ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.