ಕೊಪ್ಪಳ:ಗಣರಾಜ್ಯೋತ್ಸವ ದಿನ, ಪ್ರತಿಯೊಬ್ಬ ಭಾರತೀಯ ಪ್ರಜೆಯು ಹೆಮ್ಮೆ ಪಡುವ ದಿನವಾಗಿದೆ. ಪ್ರತಿ ವರ್ಷ ಭಾರತದಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದು ತಾ.ಪಂ ಇಒ ಮಹಾಂತಗೌಡ ಪಾಟೀಲ್ ಅವರು ಹೇಳಿದರು.
ತಾಲೂಕು ಪಂಚಾಯತಿ ಆವರಣದಲ್ಲಿ 74 ನೇ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
ಭಾರತದ ಇತಿಹಾಸದಲ್ಲೇ ಗಣರಾಜ್ಯೋತ್ಸವ ದಿನ ಮಹತ್ವದ ದಿನವಾಗಿದೆ. ಈ ದಿನದಂದು ಇಡೀ ದೇಶವೇ ಸಂಭ್ರಮಿಸುತ್ತದೆ. ಈ ದಿನವು ದೇಶ ಸ್ವಾತಂತ್ರ್ಯೋತ್ತರ ಗಣರಾಜ್ಯ ದೇಶವಾದ ಐತಿಹಾಸಿಕ ದಿನ ಮತ್ತು ಸಂವಿಧಾನ ಜಾರಿಗೆ ಬಂದ ದಿನವಾಗಿದೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ ಯೋಜನಾಧಿಕಾರಿಗಳಾದ ಗುರುಪ್ರಸಾದ್ ಎಸ್, ವ್ಯವಸ್ಥಾಪಕರಾದ ಶಾಂತವೀರಯ್ಯ, ಪಂಚಾಯತ ರಾಜ್ ನೋಡಲ್ ಅಧಿಕಾರಿ ಸುರೇಶ್ ಉಪ್ಪಾರ, ಸಹಾಯಕ ಲೆಕ್ಕಾಧಿಕಾರಿಗಳಾದ ಚನ್ನಬಸವ,
ಸೇರಿದಂತೆ ತಾ.ಪಂ ವಿವಿಧ ಯೋಜನೆಗಳ ವಿಷಯ ನಿರ್ವಾಹಕರು, ಸಿಬ್ಬಂದಿಗಳು ಇದ್ದರು.