ಬಳ್ಳಾರಿ/ಸಿರುಗುಪ್ಪ: ಸ್ವಾತಂತ್ರ್ಯ ಬಂದು 75ವರ್ಷಗಳಾದರೂ ಇನ್ನು ಮೂಲಭೂತ ಸೌಲಭ್ಯಗಳಲ್ಲಿ ಪ್ರಮುಖ ಅಗತ್ಯವಾಗಿರುವ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿಲ್ಲ. ನೀರು ಪೂರೈಸುವುದು ಆಡಳಿತ ವ್ಯವಸ್ಥೆಯ ಆದ್ಯ ಕರ್ತವ್ಯ . ಜನ ಸಾಮಾನ್ಯರೂ ಶುದ್ಧ ನೀರು ಕುಡಿಯುವಂತಾಗಬೇಕೆಂದು ಸರ್ಕಾರ ಗ್ರಾಮೀಣ ಭಾಗದಲ್ಲಿಯೂ ಕೆರೆಗಳನ್ನು ನಿರ್ಮಿಸಿ ಬಡ ಜನಗಳಿಗೆ ಶುದ್ಧ ಕುಡಿಯುವ ನೀರು ಕೊಡುವ ಉದ್ದೇಶವಾಗಿದೆ . ಆದರೆ ಐದು ವರ್ಷ ಕಳೆದರೂ ಇಲ್ಲಿನ ಜನರು ಕೆರೆ ನೀರು ಕುಡಿಯಲೇ ಇಲ್ಲ, ಕೋಟಿಗಟ್ಟಲೆ ಕೆರೆ ಇದ್ದು ಇಲ್ಲದಂತಾಗಿದೆ, ಕೆರೆ ನೀರು ನಿಂತಲ್ಲೇ ನಿಂತು ಕೊಳಚೆ ನೀರಿನಂತೆ ಕಾಣುತ್ತಿದೆ, ಉಪಯೋಗಕ್ಕೆ ಬಾರದ ನೀರು ಕೇವಲ ಹೆಸರಿಗಷ್ಟೇ ಸೀಮಿತ. ಇದು ಸಿರುಗುಪ್ಪ ತಾಲ್ಲೂಕಿನ ಉತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ದುಸ್ಥಿತಿ ಹೌದು ಮಾಟಸೂಗೂರು, ಕೂರಿಗನೂರು ಮತ್ತು ಉತ್ತನೂರು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಕೆರೆಯ ನೀರು ಪಾಚು ಗಟ್ಟಿ ಕೊಳಚೆ ನೀರಿನಂತೆ ಹಳದಿ ಬಣ್ಣಕ್ಕೆ ತಿರುಗಿ ಕೆರೆ ಗಬ್ಬುನಾರುತ್ತಿದೆ.
ಕೋಟಿಗಟ್ಟಲೆ ಖರ್ಚು ಮಾಡಿ ಉತ್ತನೂರು ಗ್ರಾಮದ ವರ ವಲಯದಲ್ಲಿ ಕೆರೆಯನ್ನು ನಿರ್ಮಿಸಲಾಗಿದೆ ಇಲ್ಲಿನ ಗ್ರಾಮಗಳ ಜನರಿಗೆ ಕುಡಿಯುವ ನೀರು ಒದಗಿಸುವ ಈ ಕೆರೆ ನಿರ್ವಹಣೆ ಇಲ್ಲದೇ ಪ್ರದರ್ಶನಕಷ್ಟೇ ಸೀಮಿತವಾಗಿದೆ.
2013-14ನೇ ಸಾಲಿನ 13ನೇ ಹಣಕಾಸು ಯೋಜನೆ ಅಡಿಯಲ್ಲಿ ನಿರ್ಮಿಸಿದ ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ 2018 ರಲ್ಲಿ ಈ ಕೆರೆ ಉದ್ಘಾಟನೆಗೊಂಡಿತ್ತು. 5 ವರ್ಷ ಈ ಕೆರೆ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಗುತ್ತಿಗೆದಾರರಿಗೆ ನೀಡಲಾಗಿತ್ತು.ಪ್ರತಿವರ್ಷಕ್ಕೆ ನಿರ್ವಹಣೆಗೆ ಲಕ್ಷಗಟ್ಟಲೆ ಹಣ ಖರ್ಚು ಮಾಡುತ್ತಾರೆ. ಆದರೆ ಇದುವರೆಗೂ ಈ ಮೂರು ಊರುಗಳಿಗೆ ಕೆರೆಯ ಕುಡಿಯುವ ನೀರು ಸರಬರಾಜು ಹಾಗೇ ಇಲ್ಲ. ಕೆರೆಯ ನೀರು ನಿಂತಲ್ಲೇ ನಿಂತು ಪಾಚಿ ಕಟ್ಟಿ ನೀರು ಕೊಳಕು ನೀರಿನಂತೆ ಕಾಣುತ್ತಿದೆ.
ಕೆರೆ ನೀರು ಇಲ್ಲದೆ , ಅತ್ತ ನಳನೀರು ಸೇವಿಸುವ ಗ್ರಾಮದ ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ಕಾಲುವೆಗೆ ನೀರು ಇದ್ದರು ಕೆರೆಗೆ ನೀರು ಭರ್ತಿ ಮಾಡುತ್ತಿಲ್ಲ , ನೀರು ತುಂಬಿಸುವ ಹಾಗೂ ಹೊರ ಬಿಡುವ ವ್ಯವಸ್ಥೆ ಇಲ್ಲದೆ ನೀರು ಪಾಚು ಗಟ್ಟಿ ಹಳದಿ ಬಣ್ಣಕ್ಕೆ ಬದಲಾಗಿದೆ. ನೀರನ್ನು ಗ್ರಾಮಗಳಿಗೆ ಸರಬರಾಜು ಮಾಡುವ ಉದ್ದೇಶದಿಂದ 4 ನೀರಿನ ಟ್ಯಾಂಕ್ ನಿರ್ಮಿಸಿ ಸುಮಾರು 4-5ವರ್ಷ ಕಳೆದರೂ ನೀರು ಸರಬರಾಜು ಮಾಡದೇ ಕೆರೆ ಮತ್ತು ನೀರಿನ ಟ್ಯಾಂಕುಗಳು ಇದ್ದು ಇಲ್ಲದಂತಾಗಿದೆ.ಕೆರೆಯ ನೀರು ಕುಡಿದರೆ ಅನಾರೋಗ್ಯಕ್ಕೆ ತುತ್ತಾಗುವುದಂತೂ ಸತ್ಯ. ಅಧಿಕಾರಿಗಳು ಕುಡಿಯುವ ನೀರು ಒದಗಿಸಲು ಏಕೆ ನಿರ್ಲಕ್ಷ ತೋರುತ್ತಿದ್ದಾರೆ.ಕೆರೆ ಕೇವಲ ಹೆಸರಿಗೆ ಅಷ್ಟೇ ಸೀಮಿತ ಎಂದಿದ್ದಾರೆ ಇಲ್ಲಿನ ಜನಗಳು.
ಕೆರೆಯ ನಿರ್ವಹಣೆ ಪಂಚಾಯಿತಿ ಆಧೀನದಲ್ಲಿ ಇಲ್ಲದೆ ಗುತ್ತಿಗೆದಾರನ ಕೈಯಲ್ಲಿರುವುದು ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಎನ್ನಲಾಗಿದೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಕೆರೆಯ ನೀರನ್ನು ಸ್ವಚ್ಛಗೊಳಿಸಿ ಶುದ್ಧ ಕುಡಿಯುವ ನೀರನ್ನು ಗ್ರಾಮಗಳ ಜನರಿಗೆ ಒದಗಿಸಿಕೊಡಬೇಕೆಂದು ಇಲ್ಲಿನ ಜನರ ಆಶಯ.
ಕೆರೆ ನಿರ್ಮಿಸಿ ಐದು ವರ್ಷಗಳಾದರೂ ಕೆರೆ ನೀರು ಊರಲ್ಲಿ ಬಂದಿಲ್ಲ,ಕೆರೆ ಇದ್ದರು ಉಪಯೋಗವಿಲ್ಲ, ಕೆರೆ ನೀರು ಕಪ್ಪು ಬಣ್ಣದಂತಾಗಿದೆ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎನ್ನುತ್ತಾರೆ
ಗ್ರಾಮಸ್ಥರಾದ , ರವಿ, ಅಯ್ಯಪ್ಪ, ಬಂಗಾರಪ್ಪ, ಹನುಮಯ್ಯ ಮತ್ತು ಯುವಕರು.
ಕೆರೆಯನ್ನು ಗುತ್ತಿಗೆ ತೆಗೆದುಕೊಂಡ ಗುತ್ತಿಗೆದಾರರಿಗೆ ತಿಳಿಸಬೇಕು ಹೋಗಿ ಗುತ್ತಿಗೆದಾರರಿಗೆ ತಿಳಿಸುತ್ತೇವೆ ಎನ್ನುತ್ತಾರೆ ರಮೇಶ್ ಪಿ.ಡಿ.ಒ,ಗ್ರಾ.ಪಂ. ಉತ್ತನೂರು ಇವರು.