ಮೈಸೂರು:ಕೃಷ್ಣರಾಜ ಕ್ಷೇತ್ರದ ಆಶ್ರಯ ಮನೆ ನಿವಾಸಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕರ್ನಾಟಕ ಪ್ರಜಾ ಪ್ರಾರ್ಟಿ ಅಭ್ಯರ್ಥಿ ತೇಜಸ್ವಿ ನಾಗಲಿಂಗಸ್ವಾಮಿ ಶುಕ್ರವಾರ ಉಪವಾಸ ಸತ್ಯಾಗ್ರಹ ಮಾಡಿದರು.
ಮೈಸೂರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಉಪಾಸ ಸತ್ಯಾಗ್ರಹ ಮಾಡಿದ ತೇಜಸ್ವಿಯವರು ಕಳೆದ 20 ವರ್ಷಗಳಿಂದ ಅಲ್ಲಿನ ನಿವಾಸಿಗಳು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದಾರೆ ಆದರೆ ಇದುವರೆಗೆ ಹಕ್ಕುಪತ್ರವನ್ನಾಗಲಿ ಮತ್ತು ಹಕ್ಕು ಖುಲಾಸೆ ಪತ್ರವನ್ನಾಗಲಿ ನೀಡಿಲ್ಲವೆಂದು ದೂರಿದರು.
2003 ಮತ್ತು 2004 ನೇ ಸಾಲಿನಲ್ಲಿ 850 ಮಂದಿ ಫಲಾನುಭವಿಗಳನ್ನು ಗುರುತಿಸಿ ಅವರುಗಳಿಂದ ತಲಾ ಹತ್ತು ಸಾವಿರ ರೂಗಳನ್ನು ಕಟ್ಟಿಸಿಕೊಳ್ಳಲಾಗಿದೆ.
ಸದರಿ ಫಲಾನುಭವಿಗಳಿಗೆ ಆಶ್ರಯ ಸಮಿತಿ ಅಧಿಕಾರಿಗಳು ಸರ್ವೆ ನಂಬರ್ ಮತ್ತು ಸೈಟ್ ನಂಬರ್ ಗಳನ್ನು ಹಾಕಿ ಅಳತೆ ಮಾಡಿಸಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದಾರೆ ಎಂದು ತಿಳಿಸಿದರು
ಆದರೆ ಈ ಫಲಾನುಭವಿಗಳಿಗೆ ಮನೆ ನೀಡುವುದರಲ್ಲಿ ಕೃಷ್ಣರಾಜ ಆಶ್ರಯ ಸಮಿತಿ ವಿಫಲವಾಗಿದೆ, ಆದ್ದರಿಂದ ಕೂಡಲೇ ಈ ಫಲಾನುಭವಿಗಳಿಗೆ ಹಕ್ಕು ಪತ್ರ ಮತ್ತು ಹಕ್ಕು ಖುಲಾಸೆ ಪತ್ರವನ್ನು ನೀಡಬೇಕೆಂದು ಮೈಸೂರು ನಗರ ಪಾಲಿಕೆ ಆಯುಕ್ತರನ್ನು ತೇಜಸ್ವಿ ಒತ್ತಾಯಿಸಿದರು.
ಸತ್ಯಾಗ್ರಹದ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ಬಹಳಷ್ಟು ಮಂದಿ ಹಾಜರಿದ್ದರು. ಅಲ್ಲದೆ ಕರ್ನಾಟಕ ಪ್ರಜಾ ಪಾರ್ಟಿಯ ರಾಜ್ಯಾಧ್ಯಕ್ಷ ಡಾ.ಶಿವಣ್ಣ ಅವರು ತೇಜಸ್ವಿ ಅವರಿಗೆ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ಯ ಮೈಸೂರು ಜಿಲ್ಲಾಧ್ಯಕ್ಷ ಕುಮಾರ ಸ್ವಾಮಿ, ಮೈಸೂರು ಮಾಜಿ ಜಿಲ್ಲಾಧ್ಯಕ್ಷ ಲೋಕೇಶ್, ಗುರುದತ್ತ,ಸಿದ್ದಲಿಂಗ ಮೂರ್ತಿ,ಶೈಲೇಶ್, ಜೀವನ್,ಪಳನಿ ಸ್ವಾಮಿ,
ಕೃಷ್ಣ ರಾಜ ಕ್ಷೇತ್ರದ ಯುವ ಘಟಕದ ಅಧ್ಯಕ್ಷ ರವಿಕಾಳೇ ಗೌಡ ಹಾಗೂ ಕಾರ್ಯಕರ್ತರು ಹಾಜರಿದ್ದರು.