ಉತ್ತರ ಕನ್ನಡ/ಮುಂಡಗೋಡ:
ಕರ್ನಾಟಕ ವಿಧಾನಸಭೆಯ ಎಂಟನೆಯ ಅಧಿವೇಶನದಲ್ಲಿ
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020 ಮಂಡನೆ ಆಗಿದ್ದರೂ ಮುಂಡಗೋಡದಲ್ಲಿ ಕಾಯ್ದೆ ಮಾತ್ರ ಇನ್ನೂ ಸಂಪೂರ್ಣವಾಗಿ ಅನುಷ್ಠಾನ ವಾಗದೇ ಗೋಮಾಂಸ ಮಾರಾಟ ಎಗ್ಗಿಲ್ಲದೆ ಯಾರ ಭಯ ಭೀತಿ ಇಲ್ಲದೆ ಸಾಗಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ
ಕೈಗನ್ನಡಿಯಾಗಿದೆ.ಮುಂಡಗೋಡ ಗ್ರಾಮೀಣ ಭಾಗ ಹಾಗೂ ನಗರ ಪ್ರದೇಶಗಳಲ್ಲಿ ಗೋಮಾಂಸ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ ಸರಕು ಸಾಗಣೆ ವಾಹನಗಳಲ್ಲಿ ತಂದರೆ ದಾಳಿಯಾಗುತ್ತದೆ ಎಂಬ ಭೀತಿಯಿಂದ ಐಷಾರಾಮಿ ಕಾರುಗಳು ಹಾಗೂ ದ್ವಿಚಕ್ರ ವಾಹನ ಹಾಗೂ ಸೋಮವಾರದ ಸಂತೆಯ ತರಕಾರಿ ವಾಹನಗಳಲ್ಲಿ ಕೂಡಾ ಗೋಮಾಂಸ ಸಾಗುತ್ತಿರುವುದು ಕಂಡುಬರುತ್ತಿದೆ ಮಾಂಸ ಮಾರಾಟಕ್ಕೆ ಕೆಲವೊಂದು ಡೆಲಿವರಿ ಪಾಯಿಂಟ್ ಮಾಡಿಕೊಂಡಿರುವ ಮಾರಾಟಗಾರರು ಶುಕ್ರವಾರ ಮಂಗಳವಾರ ದಿನಗಳಲ್ಲಿ ಮನೆ ಮನೆಗೆ ಹೋಗಿ ವಿತರಣೆ ಮಾಡುತ್ತಾರೆ, ಗೋಮಾಂಸ ತುಂಬಿದ ಚೀಲಗಳನ್ನು ಬೈಕ್ ನಲ್ಲಿ ಇಟ್ಟು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದು,ಇವರನ್ನು ಕಾನೂನುಬದ್ಧವಾಗಿ ನಿಯಂತ್ರಿಸುವ ಕೆಲಸ ಆಗಬೇಕಿದೆ.ಸವಣೂರು, ಕಲಘಟಗಿ, ಗುಂಜವತಿ, ಮುಂಡಗೋಡ ದ ಗ್ರಾಮೀಣ,ಯಲ್ಲಾಪುರ ಭಾಗಗಳಿಂದ ಕಾರು, ಬೈಕ್ , ಸಂತೆಯ ವಾಹನಗಳಲ್ಲಿ ಪ್ಯಾಕ್ ಮಾಡಲಾದ ಗೋಮಾಂಸ ಸಾಗಿಸುತ್ತಿದ್ದಾರೆ,ಹೊರ ಭಾಗಗಳಲ್ಲಿ ವಧೆ ಮಾಡಿ ಅವುಗಳನ್ನು ಪ್ಲಾಸ್ಟಿಕ್ ಪೊಟ್ಟಣದಲ್ಲಿ ಪಾರ್ಸೆಲ್ ಮೂಲಕ ವಿತರಣೆ ಮಾಡುತ್ತಿದ್ದಾರೆ. ಗೋಮಾಂಸ ಮಾರಾಟದ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕರು ಮಾರಾಟಗಾರರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅಮಾಯಕ ಗೋವುಗಳ ವಧೆಯನ್ನು ನಿಲ್ಲಿಸುವಂತೆ ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರಗಳು ತಂದ ಕಾನೂನುಗಳು ಸಂಪೂರ್ಣವಾಗಿ ಅನುಷ್ಠಾನ ವಾಗಬೇಕಾದರೆ ಸಂಬಂಧ ಇಲಾಖೆಗಳು ಸರಿಯಾಗಿ ಕೆಲಸ ಮಾಡಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.
-ಕರುನಾಡ ಕಂದ