ಮೈಸೂರಿನ ಕೃಷ್ಣ ಮೂರ್ತಿಪುರಂನಲ್ಲಿರುವ ಸೋಸಲೆ ಶ್ರೀ ವ್ಯಾಸರಾಜ ಮಠದ ಚಿನ್ನದ ತಟ್ಟೆಗಳನ್ನು ಗಿರವಿಯಿಟ್ಟ ಪ್ರಕರಣದಲ್ಲಿ ಮಠದ ಹಿಂದಿನ ಶ್ರೀಗಳೂ ಸೇರಿದಂತೆ ಮೂವರನ್ನು ಅಪರಾಧಿಗಳು ಎಂದು ಮೈಸೂರಿನ 6 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ರ್ತೀಪು ನೀಡಿ ಇವರಿಗೆ ತಲಾ 5 ಸಾವಿರ ರೂ ದಂಡ ವಿಧಿಸಿದ್ದು
ಇದರಲ್ಲಿ ಹಿಂದಿನ ಆಡಳಿತ ಮಂಡಳಿಯ ಬಿ.ಆರ್ ನಟರಾಜ ಜೋಯಿಸ್ ಕೂಡ ಅಪರಾಧಿಗಳೆಂದು ಪರಿಗಣಿಸಿದೆ ಆರೋಪಿಗಳಿಗೆ ತಲಾ 50 ಸಾವಿರ ರೂ . ಬಾಂಡ್ ಅನ್ನು ನೀಡಬೇಕು ಅಪರಾಧಿಗಳು ಭಾರತೀಯ ದಂಡ ಸಂಹಿತೆ 406 , 408 ಮತ್ತು 420 ರಡಿ ತಪ್ಪಿತಸ್ಥರೆಂದು ಸಾಬೀತಾಗಿದ್ದು
ಇತ್ತೀಚಿನ ದಿನಗಳಲ್ಲಿ ಕೆ.ಆರ್ ಕ್ಷೇತ್ರದ ಹಾಲಿ ಶಾಸಕರ ಮೇಲೆ ಹಿರಿಯ ಮುಸ್ಸದ್ದಿ ಮಾಜಿ ಮುಖ್ಯಮಂತ್ರಿಗಳಾದ “ಬಿ,ಎಸ್, ಯಡಿಯೂರಪ್ಪ” ಅವರ ಹತ್ತಿರ ಹೋಗಿ ದೂರು ಹೇಳಿದ್ದು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಈ ನಟರಾಜ್ ಜೋಯಿಸ್ ಗೆ ಯಾವ ನೈತಿಕತೆಯ ಆಧಾರದಲ್ಲಿ ಹೋಗಿದ್ದರು ಎಂಬುದು ಇಲ್ಲಿನ ಪ್ರಶ್ನೆ ?
ಬಿ.ಆರ್ ನಟರಾಜ್ ಜೋಯಿಸ್ ಅವರಿಗೆ 2017 ರಂದು ಜಿಲ್ಲಾಡಳಿತದಿಂದ ಜಿಲ್ಲಾ ರಾಜ್ಯೋತ್ಸವ ಪ್ರಯುಕ್ತ ಪುರಸ್ಕಾರ ನೀಡಿದ್ದು ಜಿಲ್ಲಾಡಳಿತ ಕೂಡಲೇ ಹಿಂಪಡೆಯಬೇಕು
ಸಂಘ ಸಂಸ್ಥೆಗಳ ನೊಂದಣಿ ಕಾಯ್ದೆ ಅಡಿಯಲ್ಲಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಬೇಕು
ಆದ್ದರಿಂದ ಜಿಲ್ಲಾ ಸಾಹಿತ್ಯ ಪರಿಷತ್ತಿನವರು “ಬಿ ಆರ್ ನಟರಾಜ್ ಜೋಯಿಸ್” ಅವರ ಪರಿಷತ್ತಿನ ಆಜೀವ ಸದಸ್ಯತ್ವ ರದ್ದು ಮಾಡಿ ಪರಿಷತ್ತಿನ ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸಬಾರದು ಎಂದು ಮೈಸೂರಿನಲ್ಲಿ ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.