ಹನೂರು ವಿಧಾನಸಭಾ ಕ್ಷೇತ್ರದ ಮತ್ತಿಪುರ ಗ್ರಾಮದಲ್ಲಿ ಈ ದಿನ ಡಾ.ಎಸ್.ದತ್ತೇಶ್ ಕುಮಾರ್ ಸಾರಥ್ಯದ ಮಾನಸ ಫೌಂಡೇಶನ್(ರಿ) ಸೇವಾ ರಥವು ಸಂಚರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಾದ ಸಂಧ್ಯಾ ಸುರಕ್ಷಾ ಯೋಜನೆ, ಇಂದಿರಾಗಾಂಧಿ ವೃದ್ಯಾಪ ವೇತನ, ವಿಧವಾ ವೇತನ, ಮನಸ್ವಿನಿ ಯೋಜನೆ, ಅಂಗವಿಕಲತೆಯ ಯೋಜನೆ ಇನ್ನೂ ಮುಂತಾದ ಯೋಜನೆಗಳ ಸೌಲಭ್ಯ ಪಡೆಯಲು ಸರ್ಕಾರದ ಸೇವಾ ಸಿಂಧು ಅಡಿಯಲ್ಲಿ ಪ್ರಚಾರ ಮಾಡಿ ಅರ್ಹ ಫಲಾನುಭವಿಗಳಿಂದ ಸಂಬಂಧಪಟ್ಟ ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸುವ ಸಲುವಾಗಿ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲಾಯಿತು.
ವಿನಂತಿ:ಈ ಎಲ್ಲಾ ಸೇವೆಗಳನ್ನು ಮಾನಸ ಫೌಂಡೇಶನ್ ವತಿಯಿಂದ ಉಚಿತವಾಗಿ ಮಾಡಿಸಿ ಕೊಡಲಾಗುವುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. ದೂರವಾಣಿ ಸಂಖ್ಯೆ 08224- 200199
9980112241
ವರದಿ ಉಸ್ಮಾನ್ ಖಾನ್