ದಿನಾಂಕ 24-3-2023 ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೈಲಾಸ ನಗರದ ನಿವಾಸಿಗಳು 45 ವರ್ಷಗಳಿಂದ ವಾಸಿಸುತ್ತಿದ್ದರು ಮನುಷ್ಯನಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳಿಂದ ವಂಚಿತಾಗಿರುವ ಕಾರಣದಿಂದಾಗಿ ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾ ಘಟಕದ ಮನವಿ ಮೇರೆಗೆ, ಸ್ವಾಭಿಮಾನಿ ಸೇನೆಯ ಮಹಿಳಾ ರಾಜ್ಯ ಕಾರ್ಯದ್ಯಕ್ಷರು ಎನ್ ಎಸ್ ಸುವರ್ಣಮ್ಮನವರು ಮಾಹಿತಿ ಆಧಾರದ ಮೇರೆಗೆ ಸ್ಥಳ ಪರಿಶೀಲಿಸಿ ಪ್ರತಿ ಮನೆಯ ತೊಂದರೆಗಳಾದ ಶೌಚಾಲಯ ಇಲ್ಲದಿರುವುದು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು, ಸುತ್ತ ಮುತ್ತ ಜಾಲಿ ಬೆಳೆದಿರುವುದು ಮಹಿಳೆಯರಿಗೆ ಯಾವುದೇ ಭದ್ರತೆ ಇರುವುದಿಲ್ಲ, ಮಹಿಳೆಯರು ಬಯಲು ಶೌಚಾಲಯಕ್ಕೆ ಹೋಗಬೇಕಾಗುತ್ತದೆ ಇಲ್ಲೂ ಗಂಡಸರು ತೊಂದರೆ ಕೊಡುತ್ತಾರೆ, ಸರಿಯಾದ ಸ್ವಚ್ಛತೆ ಕೊರತೆಯಿಂದ ಕೆಲ ಜನರು ಹಾವು ಕಚ್ಚಿ ಸತ್ತಿರುವುದು ಹೀಗೆ ಅನೇಕ ಸಮಸ್ಯೆಗಳೇ ತುಂಬಿಕೊಂಡಿರುತ್ತದೆ, ಇಲ್ಲಿವರೆಗೂ ಯಾವುದೇ ರಾಜಕಾರಿಣಿಗಳು ಚುನಾವಣೆಯ ಮತ ಚಲಾಯಿಸುವ ಸಂದರ್ಭ ಹೊರತುಪಡಿಸಿ ಯಾವುದೇ ಕೆಲಸಗಳನ್ನು ಮಾಡಿಲ್ಲ ಹೀಗೆ ಎಲ್ಲವನ್ನೂ ಕೇಳಿದ ನಂತರ ಎಲ್ಲಾ ಜನರಿಗೆ ಸೂಕ್ತ ಮಾಹಿತಿ ಕೊಟ್ಟು ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧಿಕರಿಯವರಿಗೆ ಮೂಲಭೂತ ಸೌಕರ್ಯ, ಮನೆ ಕಟ್ಟಿ ಕೊಡುವ ಬಗ್ಗೆ ಮನವಿ ಕೊಡುವುದನ್ನು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು, ಹಾಗೂ ಕರವೇ ಸ್ವಾಭಿಮಾನಿ ಸೇನೆಗೆ ಕೈಲಾಸ ನಗರದ ನೂರಾರು ನಿವಾಸಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಾದ ಗೀತಮ್ಮ, ಲಲಿತಮ್ಮ, ಸುಮಾ, ಶಾಂತಮ್ಮ, ವಿನೋದಮ್ಮ, ರಂಜಿತ, ಅನ್ನಪೂರ್ಣಮ್ಮ, ಉಷಾ ಹಾಗೂ ಇತರರು
ಉಪಸ್ಥಿತರಿದ್ದರು.