ಕಲಬುರ್ಗಿ:ಕಾಳಗಿ ತಾಲೂಕಿನ ನಡೆದ 12 ನೇ ಶತಮಾನದ ಶ್ರೀ ಅಂಬಿಗರ ಚೌಡಯ್ಯನವರು ದೋಣಿಯಲ್ಲಿ ಕುಳಿತ ನಂಬಿಕಸ್ಥ ಜನರಿಗೆ ಪ್ರಾಮಾಣಿಕವಾಗಿ ದಡ ಸೇರಿಸುತ್ತಾರೋ ಹಾಗೆ 21ನೇ ಶತಮಾನದಲ್ಲಿ ನಂಬಿದ ಮನುಷ್ಯನಿಗೆ ಯಾವತ್ತಿಗೂ ಕೈ ಬಿಡದ ನೀಜ ಶರಣನ ಮಕ್ಕಳು ಎಂದು ಜಿಲ್ಲಾ ಕೋಲಿ ಸಮಾಜದ ಅಧ್ಯಕ್ಷ ರವಿರಾಜ ಕೋರವಿಯವರು ಹೇಳಿದರು.
ಕಾಳಗಿ ತಾಲ್ಲೂಕಿನ ಚಿಂಚೋಳಿ ಹೆಚ್ ಗ್ರಾಮದಲ್ಲಿ ನೀಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಅವರ ನಡೆ, ನುಡಿ ವಿಶಿಷ್ಟವಾಗಿರುವುದನ್ನು ಗಮನಿಸಬಹುದಾಗಿದೆ. ಇರುವುದನ್ನು ಇದ್ದ ಹಾಗೆ ಹೇಳುವ ವ್ಯಕ್ತಿತ್ವ ಅವರದ್ದು. ತಮ್ಮ ವಚನಗಳ ಮೂಲಕ ಸಮಾಜದ ಅವ್ಯವಸ್ಥೆ, ಅಂಧಕಾರ ಹೋಗಲಾಡಿಸಲು ಪ್ರಯತ್ನಿಸಿದರು ಅವರ 233 ವಚನಗಳು ಸಿಕ್ಕಿವೆ ಸಿಕ್ಕಿರುವ ವಚನಗಳು ಹಸಿ ಗೋಡೆಯಲ್ಲಿ ಹಳ್ಳ ಹೊಡೆದಂತಿವೆ,ಅವರು ಹೇಳಿರುವ ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.
ಶಾಸಕ ಡಾ||ಅವಿನಾಶ್ ಜಾಧವ ಮಾತನಾಡಿ,ಶರಣ ಶತಮಾನದ ನೀಜ ಶರಣ ಅಂಬಿಗರ ಚೌಡಯ್ಯನವರಿಗೆ ನೈಜವಾಗಿ ನಾನು ಕಂಡಿಲ್ಲ. ರವಿರಾಜ ಕೋರವಿ ಅವರಂತೆ ಇದ್ದಿರಬಹುದು ಎಂದು ಹೇಳಿದರು.
ರಟಕಲ ವಿರಕ್ತ ಮಠದ ಸಿದ್ದರಾಮ ಶ್ರೀಗಳು,ಗೌರಿ ಗುಡ್ಡದ ರೇವಣಸಿದ್ದ ಶರಣರು ಆರ್ಶಿವಚನ ನೀಡಿದರು. ರೇವಣಸಿದ್ದಪ್ಪ ಮಾಸ್ಟರ,ಮಲ್ಲಿನಾಥ ಪಾಟೀಲ, ಮಲ್ಲು ಮರಗುತ್ತಿ, ಲಚ್ಚಪ್ಪ ಜಮಾದರ, ಅನೀಲ ಜಮಾದರ ಹುಡದಳ್ಳಿ, ಬಸವರಾಜ ರಾಕಾ, ಸಿದ್ದರಾಮ ಟೆಂಗಳಿ, ಮೂರ್ತಿ ದಾನಿ ಸಂಜುಕುಮಾರ ತೇಲಿ, ಶಿವಶರಣಪ್ಪ ಬಡಿಗೇರ, ಜಗನ್ನಾಥ ತೇಲಿ, ರಾಜೇಶ್ ತೇಲಿ, ದೇವಿಂದ್ರಪ್ಪ ಹೆಬ್ಬಾಳ, ಚಿಂತನ ರಾಠೋಡ, ಮಲ್ಲು ಮರಗುತ್ತಿ, ಭೀಮಶಾ ನಡಗೇರಿ, ರಾಚಣ್ಣಾ ರಾಕಾ, ಪ್ರಶಾಂತ ಕದಂ, ಜಗನ್ನಾಥ ತೇಲಿ,ಅನವೀರಪ್ಪ ಮ್ಯಾಳಗಿ, ಬಸಪ್ಪ ಮ್ಯಾಳಗಿ, ರವಿ ಮಲಘಾಣ, ಶಿವು ತಳವಾರ, ಮಲ್ಲು ತೇಲಿ, ನಾಗೇಶ್ ಐನೋಳ್ಳಿ, ಶಿವರಾಯ ದೇಗಲ್, ಶಿವು ನಡಗೇರಿ, ಹಣಮಂತ ಕೂಪನೂರ್, ರೇವಣಸಿದ್ಧ ತೇಲಿ, ಮಂಜುನಾಥ್ ತಳವಾರ, ಸುಭಾಷ್ ಕೌನಳ್ಳಿ, ಜಗನ್ನಾಥ ಟೆಂಗಳಿ, ಬಸವರಾಜ್ ರಾಕಾ, ಚಂದ್ರಶೇಖರ ಟೆಂಗಳಿ, ಪ್ರಕಾಶ್ ಗಂಜಿ, ಲಕ್ಷ್ಮಣ್ ಮಾರುನ, ಉಮೇಶ ತೇಲಿ, ಗಂಗಪ್ಪ ಪರಿಟ್ ಇದ್ದರು. ವಿದ್ಯಾರ್ಥಿ ಸೋನಿ ಪ್ರಾರ್ಥನೆ ಗೀತೆ ಹಾಡಿದರು,ರಮೇಶ ತೇಲಿ ನಿರೂಪಿಸಿ ವಂದಿಸಿದರು.
ವರದಿ:ರಾಜಶೇಖರ ಮಾಲಿ ಪಾಟೀಲ್ ಶಹಾಪುರ