ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ ಕಾಂಗ್ರೆಸ್.ಜೆಡಿಎಸ್
.ಪಕ್ಷಗಳು ಜಿದ್ದಾಜಿದ್ದಿನ ಪೈಪೋಟಿಗೆ ಅಭ್ಯರ್ಥಿಗಳು ಗೊಂದಲ ಮಾಡಿಕೊಂಡು ಪಕ್ಷಾಂತರ ಪರ್ವ ಆರಂಭಿಸಿದ್ದಾರೆ ಕೆಲವರು ಗೆಲುವು ಸಾಧಿಸುವ ನಿಟ್ಟಿನಲ್ಲಿ ಪಕ್ಷ ಬದಲಾಯಿಸಿದರೆ ಕೆಲವರು ಪಕ್ಷದ ಮೇಲಿನ ಜನರ ವ್ಯಾಮೋಹ ಕಂಡು ಬದಲಾವಣೆ ಮಾಡುತ್ತಿದ್ದಾರೆ ಇನ್ನೂ ಕೆಲವರು ಟಿಕೆಟ್ ಯಾವ ಪಕ್ಷ ನೀಡುವುದೋ ಆ ಕಡೆಗೆ ತಮ್ಮ ನಿಲುವನ್ನು ಬದಲಾಯಿಸುತ್ತಿದ್ದಾರೆ ಒಟ್ಟಾರೆಯಾಗಿ ಇದು ಎಲ್ಲಾ ಚುನಾವಣೆಯಲ್ಲಿ ಸಹಜ ಎಂದೆನಿಸಿದರೂ ಈ ಸಲ ತುಸು ಹೆಚ್ಚಾಗಿ ಮತದಾರನ ಮೇಲೆ ಗಂಭೀರ ಪರಿಣಾಮ ಬೀರಬಹುದು ಕಾರಣ ಏನೆಂದರೆ ಇಲ್ಲಿಯವರೆಗೆ ಜನರ ಮನದಲ್ಲಿ ಆಯಾ ಪ್ರದೇಶದಲ್ಲಿ ಒಂದೊಂದು ಬಗೆಯ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ ಇದರ ಒಟ್ಟಾರೆ ಪರಿಪಾಲನೆ ಹೇಗಾಗಿದೆ ಎಂದರೆ ಯಾರು ಎಲ್ಲಿ ಹೇಗೆ ಗೆಲುವು ಸಾಧಿಸುತ್ತಾರೆ ಎಂಬುವುದು ನಿಗೂಢವಾಗಿದೆ ಇದರ ಜೊತೆಗೆ ಚುನಾವಣಾ ಫಲಿತಾಂಶದ ನಂತರ ಯಾರು ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ತಮ್ಮತನವನ್ನು ಸಮರ್ಥಿಸಿಕೊಳ್ಳುತ್ತಾರೆ ಎಂಬುವುದನ್ನು ಕಾದುನೋಡಬೇಕಿದೆ ಸಧ್ಯದಮಟ್ಟಿಗೆ ಇರುವ ಲೆಕ್ಕಾಚಾರ ಒಂದಾದರೆ ಇನ್ನೂ ಪಕ್ಷದ ಅಭ್ಯರ್ಥಿಗಳ ಹೊಂದಾಣಿಕೆಯ ರಾಜಕಾರಣ ಮತದಾರರನ್ನು ಮೂಲೆಗುಂಪಾಗಿಸುವುದು
ಸಹಜವಾಗಿಯೇ ಎದ್ದು ಕಾಣುತ್ತಿದೆ ಇದರ ಮಧ್ಯೆ ನಾಯಕರ ಮಾರ್ಗದರ್ಶನದ ಕೊರತೆ ಯೋಜನೆಯಿಲ್ಲದ ಲೆಕ್ಕಾಚಾರ ಜನರ ಸಹಕಾರ ಗೊಂದಲದ ವಾತಾವರಣ ನಿರ್ಮಾಣವಾಗಿದೆ ಅದಕ್ಕಾಗಿಯೇ ಆಮಿಷಗಳು ರಾಜ್ಯ ರಾಜಕೀಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬ ಗುಮಾನಿ ಜನರಲ್ಲಿ ಜಾಗೃತಿ ಮಾಡುತ್ತಿದೆ ಇವುಗಳ ಮಧ್ಯೆ ಯಾವ ರೀತಿಯ ಯೋಜನೆಗಳು ಗರಿಗೆದರುತ್ತವೆ ಎಂಬುವುದು ಸಧ್ಯದ ಕೂತುಹಲವಾಗಿದೆ..
ವರದಿಗಾರ ದಿನೇಶಕುಮಾರ ಅಜಮೇರಾ