ಗಂಗಾವತಿ:ತಾಲೂಕಿನ ಹೊಸಕೆರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಆಕಾಲಿಕ ಮರಣ ಹೊಂದಿದ ರೈತರಿಗೆ ಬಳ್ಳಾರಿ
ರಾಯಚೂರು ವಿಜಯನಗರ ಮತ್ತು ಕೊಪ್ಪಳ ಹಾಲು ಒಕ್ಕೂಟದ ರೈತ ಕಲ್ಯಾಣ ಸೇವಾ ಟ್ರಸ್ಟ್ ವತಿಯಿಂದ ಹಾಲು ಉತ್ಪಾದಕರ ಸಹಕಾರ ಸಂಘ ಹೊಸಕೆರ ಗ್ರಾಮದ ಸೋಮವಾರ ಮಧ್ಯರಾತ್ರಿ ಅಕಾಲಿಕ ಮರಣ ಹೊಂದಿದ ಸೋಮಲಿಂಗಪ್ಪ ಗದ್ದಿ ಅವರ ಕುಟುಂಬಸ್ಥರಿಗೆ ಮಂಗಳವಾರ ಸಂಘದ ಕಾರ್ಯಕಾರಿ ಮಂಡಳಿ ನೇತೃತ್ವದಲ್ಲಿ ಅಧ್ಯಕ್ಷರಾದ ಎಚ್ ಉಮೇಶ್ ಹತ್ತು ಸಾವಿರ ರೂಪಾಯಿಗಳನ್ನು ಸ್ಥಳದಲ್ಲಿ ಪರಿಹಾರ ನೀಡಿದರು. ನಂತರ ಮಾತನಾಡಿ ಕೆಎಂಎಫ್ ಒಕ್ಕೂಟದಿಂದ ಅಕಾಲಿಕ ಮರಣ ಹೊಂದಿ ರೈತರಿಗೆ 20 ಸಾವಿರ ಕೊಡುತ್ತಿದ್ದು, ಸ್ಥಳದಲ್ಲಿ ಒಕ್ಕೂಟದಿಂದ 10,000 ಪರಿಹಾರವನ್ನು ಸಂಘದಿಂದ ನೀಡುತ್ತಿದ್ದೇವೆ,ಇದು ಬಡ ರೈತರಿಗೆ ಬಹಳಷ್ಟು ಅನುಕೂಲವಾಗಿದೆ, ರೈತರು, ಹೈನುಗಾರಿಕೆಯ ಸಹಕಾರದಿಂದ ಈ ಒಂದು ಕೆಎಂಎಫ್ ಸಹಾಯ ಹಸ್ತ ನೀಡುತ್ತಿದೆ, ರೈತರು ಸಹಾಯ ಮತ್ತು ಸಹನಭೂತಿಯಿಂದ ಒಕ್ಕೂಟಕ್ಕೆ ಕೈಜೋಡಿಸಿ ಒಕ್ಕೂಟದ ಸೌಲಭ್ಯವನ್ನು ಪಡೆದುಕೊಳ್ಳಿ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ವೈ ಮಲ್ಲಿಕಾರ್ಜುನ, ಸಂಘದ ಕಾರ್ಯದರ್ಶಿ ಎಚ್ ಚೆನ್ನಬಸವ,ಸದಸ್ಯರಾದ ಕೆ ಮಂಜುನಾಥ್, ಕೆ.ಗೋವಿಂದರಾಜು,ಕೆ.ಮಲ್ಲಿಕಾರ್ಜುನ,ಸಂಘದ ಸದಸ್ಯರು ಹಾಗೂ ಊರಿನ ಹಿರಿಯರು ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.