ಬಳ್ಳಾರಿ / ಕಂಪ್ಲಿ : ಈ ಮೂಲ ಜ್ಯೋತಿರ್ಲಿಂಗವು ಗಾಳಿಯಲ್ಲಿ ತೇಲುತ್ತಿತ್ತು ಎಂದು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಈ ಶಿಲೆಯ ಕೇಂದ್ರ ಭಾಗ ಅತ್ಯಂತ ಪ್ರಬಲವಾದ ಕ್ರಾಂತಿಯ ಶಕ್ತಿಯಿಂದ ಕೂಡಿದೆ. ಶಿವಲಿಂಗದ ಭಾಗಗಳನ್ನು ಅಗ್ನಿಹೋತ್ರಿ ಪುರೋಹಿತರು ರಹಸ್ಯವಾಗಿ ತಮ್ಮ ಬಳಿ ಸಂರಕ್ಷಿಸಿದರು. ಅವರು ಈ ಚೂರುಗಳಿಗೆ ಶಿವಲಿಂಗದ ಆಕಾರವನ್ನು ನೀಡಿದರು ಮತ್ತು ಸುಮಾರು ಸಾವಿರ ವರ್ಷಗಳ ಕಾಲ ತಲೆ-ತಲಾಂತರದಿಂದ ಇದನ್ನು ಸಂರಕ್ಷಿಸಿಕೊಂಡು ಬಂದರು.
ಈ ಶಿವಲಿಂಗವನ್ನು ಪೂಜಿಸುವಾಗ ಆಗ್ನಿಹೋತ್ರಿಗಳು ಒಂದು ಅಪರೂಪದ ವಿದ್ಯಮಾನವನ್ನು ಗಮನಿಸಿದರು. ಈ ಶಿಲೆಗಳು ಆಯಸ್ಕಾಂತೀಯ ಗುಣಗಳನ್ನು ಹೊಂದಿದ್ದವು. ಸಾಮಾನ್ಯವಾಗಿ ವಸ್ತುವಿನ ಧ್ರುವಗಳಲ್ಲಿ ಕಾಂತೀಯ ಶಕ್ತಿಯು ಕಂಡುಬರುತ್ತದೆ. ಆದರೆ, ಅಪರೂಪವಾಗಿ ಈ ಶಿಲೆಯ ಕೇಂದ್ರದಲ್ಲಿ ಬಲವಾದ ಕಾಂತೀಯತೆ ಇರುವುದು ವೈಜ್ಞಾನಿಕ ಪರೀಕ್ಷೆಯಲ್ಲಿ ಖಚಿತವಾಯಿತು. ಭೂ ವಿಜ್ಞಾನಿಗಳು ಇಂತಹ ವಸ್ತುವನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.
1924ರಲ್ಲಿ ಕಂಚಿ ಶಂಕರಾಚಾರ್ಯರು ಈ ಅಗ್ನಿಹೋತ್ರಿಗಳಿಗೆ ಈ ಶಿವಲಿಂಗಗಳನ್ನು ನೂರು ವರ್ಷಗಳ ಕಾಲ ಗುಪ್ತವಾಗಿ ಸಂರಕ್ಷಿಸುವಂತೆ ತಿಳಿಸಿದರು ಮತ್ತು ಅದನ್ನು ಗುರುದೇವರಿಗೆ ನೀಡುವಂತೆ ಸೂಚಿಸಿದ್ದರು. ಅದೇ ರೀತಿ ಜನವರಿ 2025 ರಲ್ಲಿ ಅಗ್ನಿಹೋತ್ರಿಗಳು ಈ ಶಿವಲಿಂಗವನ್ನು ಗುರುದೇವರಿಗೆ ಹಸ್ತಾಂತರಿಸಿದರು. ಮಹಾಶಿವರಾತ್ರಿಯಂದು ಜೋತಿರ್ಲಿಂಗದ ಈ ಭಾಗಗಳನ್ನು ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ, ಒಂದು ಸಾವಿರ ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ವೀಕ್ಷಣೆಗೆ ಮತ್ತು ದರ್ಶನಕ್ಕೆ ಮುಕ್ತಗೊಳಿಸಲಾಗಿದೆ.
ಕಂಪ್ಲಿಯಲ್ಲಿ ಜೋತಿರ್ಲಿಂಗ ದರ್ಶನ:
ಕಂಪ್ಲಿ ಜನರು ಈ ಅದ್ಭುತ ಜೋತಿರ್ಲಿಂಗದ ದರ್ಶನ ಪಡೆದುಕೊಳ್ಳಬೇಕೆನ್ನುವ ಗುರೂಜಿಯವರ ಇಚ್ಚೆಯಂತೆ ಹಾಗೂ ಕಂಪ್ಲಿ ಭಾಗದ ಹಲವು ಸಂಘ, ಸಂಸ್ಥೆ ಹಾಗೂ ಸಂಘಟನೆಗಳ, ಪ್ರಮುಖ ಮುಖಂಡರುಗಳ ಹಾಗೂ ಆರ್ಟ್ ಆಫ್ ಲಿವಿಂಗ್‌ನ ಸ್ವಯಂಸೇವಕರ ಇಚ್ಛಾಶಕ್ತಿಯ ಮೇರೆಗೆ ದಿನಾಂಕ: 10-03-2026ರ ಬೆಳೆಗ್ಗೆ 08:30 ರಿಂದ 11:00 ಗಂಟೆಯವರೆಗೆ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನ, ಕಂಪ್ಲಿಯಲ್ಲಿ ಮತ್ತು ಸಾಯಂಕಾಲ 04:30 ರಿಂದ 07:00 ಗಂಟೆಯವರೆಗೆ ಕಮ್ಮವಾರಿ ಭವನ, ಕಂಪ್ಲಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ರುದ್ರಪೂಜೆ:
ಬೆಳೆಗ್ಗೆ 11:30 ರಿಂದ ಮಧ್ಯಾಹ್ನ 12:45ರ ವರೆಗೆ ಕಮ್ಮವಾರಿ ಭವನ ಕಂಪ್ಲಿಯಲ್ಲಿ ಸಾಮೂಹಿಕ ರುದ್ರ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ. ರುದ್ರ ಪೂಜೆ ಮಾಡಿಸಿಕೊಳ್ಳುವವರು ಮುಂಚಿತವಾಗಿ ಸ್ಕ್ಯಾನರ್ ಮುಖೇನ ನೋಂದಾಯಿಸಿಕೊಂಡು ಪೂಜೆಯಲ್ಲಿ ಪಾಲ್ಗೊಂಡು ಜೋತಿರ್ಲಿಂಗದ ಸನ್ನಿದಿಯಲ್ಲಿ ಸಂಕಲ್ಪವನ್ನು ಸಲ್ಲಿಸಬಹುದಾಗಿದೆ.
ಎಂದು ಆರ್ಟ್ ಆಫ್ ಲಿವಿಂಗ್ ನ ಸದಸ್ಯರು ತಿಳಿಸಿದ್ದಾರೆ.
ರುದ್ರ ಪೂಜೆಗೆ ನೋಂದಾಯಿಸಲು
ಮೊ.ನಂ: 9945355816, 8861289431 ಸಂಪರ್ಕಿಸಲು ಕೋರಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್




















