ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಳೆ ಪ್ರಾಪ್ತಿಗಾಗಿ ಅಮ್ಮನ ಉತ್ಸವ : ವಿಶೇಷ ಪೂಜೆ, ಪುನಸ್ಕಾರ ಸೇರಿದಂತೆ ನಾನಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳು

ಬಳ್ಳಾರಿ / ಕಂಪ್ಲಿ : ಮುಂಗಾರು ಮಳೆ ಪ್ರಾರ್ಥಿಸಿ, ಪಟ್ಟಣದಲ್ಲಿರುವ ಸಹಸ್ರಾರು ಭಕ್ತರ ಆರಾಧ್ಯ ದೇವತೆ ಶ್ರೀ ಗ್ರಾಮ ದೇವತೆ ಮಾರೆಮ್ಮ ದೇವಸ್ಥಾನದ ಹೊರಗಡೆಯಲ್ಲಿ ಸಣ್ಣದೊಂದು ಚಪ್ಪರ ಹಾಕಿ, ಮಾರೆಮ್ಮ ದೇವಿಯ ಒರಗಿನ ಅಮ್ಮನನ್ನು ಕೂರಿಸಿ, ವಿಶೇಷ ಪೂಜೆ, ಉತ್ಸವ ಮೂಲಕ ವಿವಿಧ ಧಾರ್ಮಿಕ ಕಾರ್ಯಕ್ರಮ ಮಂಗಳವಾರ ಶ್ರದ್ದಾಭಕ್ತಿಯಿಂದ ನೆರೆವೇರಿದವು.
ಮಳೆ ಪ್ರಾಪ್ತಿ ಮತ್ತು ಲೋಕಕಲ್ಯಾಣಕ್ಕಾಗಿ ಶ್ರೀ ಗ್ರಾಮ ದೇವತೆ ಮಾರೆಮ್ಮ ದೇವಿಯ ಸಕಲ ಸದ್ಭಕ್ತ ಮಂಡಳಿಯವರು ಹಾಗೂ ಭಕ್ತರು ಇಲ್ಲಿನ ತುಂಗಭದ್ರಾ ನದಿಗೆ ಬೆಳಗಿನ ಜಾವ ತೆರಳಿ, ನಂತರ ಗಂಗಾದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ತನಗೊಡ ಒತ್ತು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೆರವಣಿಗೆ ಶ್ರದ್ಧೆಯಿಂದ ನಡೆಸಿದರು. ತದ ನಂತರ ಮಾರೆಮ್ಮ ದೇಗುಲದ ಹೊರಭಾಗದಲ್ಲಿ ಚಪ್ಪರ ಹಾಕಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಸರ್ವ ಸಮುದಾಯದವರು ದೇವಿಗೆ ಹೋಳಿಗೆ ನೈವೇದ್ಯವನ್ನು ಸಮರ್ಪಿಸಿದರು. ನಂತರ ದೇವಿಯ ತನುಗೊಡದ ಜೊತೆಗೆ ಅಲ್ಲಿನ ಪ್ರತಿಯೊಂದು ವಸ್ತುಗಳನ್ನು ಚೀಲಗಳಲ್ಲಿ ತುಂಬಿಕೊಂಡು ಅವುಗಳನ್ನು ಡೊಳ್ಳು ಮತ್ತು ಜಾನಪದ ಕಲಾತಂಡಗಳೊಂದಿಗೆ ಪಟ್ಟಣದ ಹೊರವಲಯದ ಹೊರಮ್ಯಾರೆಗೆ ಬಿಟ್ಟು ಬರಲಾಯಿತು.
ಮಳೆ, ಬೆಳೆಯೊಂದಿಗೆ ರೈತರು, ನಾಡಿನ ಜನರು ನೆಮ್ಮದಿ ನೀಡಲೆಂದು ಬೇಡಿಕೊಂಡರು.
ನಂತರ ಮುಖಂಡ ಎಂ. ಗೋಪಾಲ ಮಾತನಾಡಿ, ಈ ಬಾರಿಯ ಮುಂಗಾರು ಮಳೆಗಳು ಕಣ್ಮರೆಯಾಗಿವೆ. ಇದರಿಂದ ನಾಡಿನಲ್ಲಿ ಸಮೃದ್ಧ ಮಳೆ ಪ್ರಾರ್ಥಿಸಿ, ಕಳೆದ ಹನ್ನೊಂದು ದಿನ ಗುಡ್ಡೇಕಲ್ಲಿಗೆ ಮಡಿಯೊಂದಿಗೆ ನೀರೆರೆಯಲಾಗಿದೆ. ಹನ್ನೊಂದನೇ ದಿನವಾದ ಮಂಗಳವಾರದಂದು ತನುಗೊಡದೊಂದಿಗೆ ಉತ್ಸವ ಮೆರವಣಿಯೊಂದಿಗೆ ಒರಗಿನ ಅಮ್ಮನ ಪುಜೆ, ಪುನಸ್ಕಾರ ನೆರವೇರಿಸಲಾಗಿದೆ. ಒರಗಿನ ಅಮ್ಮ ನಮ್ಮ ಪ್ರಾರ್ಥನೆ ಆಲಿಸಿ, ಮಳೆಯನ್ನು ದಯಪಾಲಿಸಲಿ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಎನ್.ಯಲ್ಲಪ್ಪ, ಎನ್.ನಾಗರಾಜ, ದೊಡ್ಡಶೇಖಣ್ಣ, ನಾಗಪ್ಪ, ಎನ್.ದ್ಯಾವಣ್ಣ, ಮಲ್ಲಯ್ಯ, ವಿರುಪಣ್ಣ, ವೆಂಕಟಾಪತಿ, ವೆಂಕಟರಮಣ, ಈರಣ್ಣ ಸೇರಿದಂತೆ ಮಾರೆಮ್ಮ ದೇವಿಯ ಸದ್ಭಕ್ತರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!