ಗಂಗಾವತಿ: ಜಿಲ್ಲಾ ಪಂಚಾಯತ್ ಕೊಪ್ಪಳ, ಸಮಾಜ ಕಲ್ಯಾಣ ಇಲಾಖೆ , ಕೊಪ್ಪಳ ಹಾಗೂ ಪರಿಶಿಷ್ಟ ವರ್ಗಾಗಳ ಕಲ್ಯಾಣ ಇಲಾಖೆ, ಗಂಗಾವತಿ ಇವರ ಸಂಯುಕ್ತ ಆಶ್ರಯದಲ್ಲಿ ಗಂಗಾವತಿ ನಗರದ ಕ್ರೀಯೇಟಿವ್ ಪಾರ್ಕ್ ಹತ್ತಿರ ಕನಕಗಿರಿ ರಸ್ತೆ ಬಳಿ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದ ಭೂಮಿ ಪೂಜಾ ಕಾರ್ಯಕ್ರಮವನ್ನು ಶಾಸಕ ಭೂಮಿ ಪೂಜೆ ನೆರವೇರಿಸಿದರು, ಬಳಿಕ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿಯವರು ಮುಂದಿನ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ಅನುವು ಮಾಡಿಕೊಟ್ಟರು. ಬೊಮ್ಮಾಯಿ ನೇತ್ರತ್ವದ ಸರ್ಕಾರ, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ, ಕಂಕಣ ಬದ್ಧವಾಗಿದೆ, ವಿಶೇಷವಾಗಿ ಪರಿಶಿಷ್ಟ ಜಾತಿಯ, ವಿದ್ಯಾರ್ಥಿಗಳು, ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳುವ, ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬರಬೇಕೆಂದು ತಿಳಿಸಿದರು
ಈ ಸಂದರ್ಭದಲ್ಲಿ ಶ್ರೀ ಗ್ಯಾನನ ಗೌಡ, ತಾಲೂಕ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು, ಶ್ರೀ ರಮೇಶ ಕಚೇರಿ ಅಧಿಕ್ಷಕರು ಹಾಗೂ ವಾರ್ಡನ್ಗಳಾದ ಗೋವಿಂದ ದುಬೆ, ಹನುಮಂತ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಶ್ರೇಷ್ಠಿ, ಯೋಜನಾ ಪ್ರಾಧಿಕಾರದ ಸದಸ್ಯರಾದ ಶಿವಪ್ಪ ಮಾದಿಗ, ಭಾಜಪಾ ನಗರ ಮಂಡಲ ಅಧ್ಯಕ್ಷರಾದ ಕಾಶೀನಾಥ ಚಿತ್ರಗಾರ, ಗ್ರಾಮೀಣ ಮಂಡಲ ಅಧ್ಯಕ್ಷರಾದ ಚನ್ನಪ್ಪ ಮಳಗಿ ವಕೀಲರು, ಭಾಜಪಾ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಶಿವುಕುಮಾರ್ ಅರಿಕೇರಿ, ನಗರಸಭೆ ವಿರೋಧ ಪಕ್ಷದ ನಾಯಕರಾದ ನವೀನ್ ಮಾಲಿಪಾಟೀಲ್, ನಗರಸಭೆ ಸದಸ್ಯರಾದ ರಮೇಶ ಚೌಡ್ಕಿ, ರಮೇಶ ಹತ್ತಿಮರದ್, ಮಾಜಿ ನಗರಸಭೆ ಅಧ್ಯಕ್ಷರಾದ ಹನುಮಂತಪ್ಪ ನಾಯಕ, ಪ್ರಮುಖರಾದ ಜೋಗದ್ ನಾರಯಣಪ್ಪ ನಾಯಕ, ವೀರಭದ್ರಪ್ಪ ನಾಯಕ, ಮಾಜಿ ನಗರ ಪ್ರಾಧಿಕಾರ ಅಧ್ಯಕ್ಷರ ಮಲ್ಲೇಶಪ್ಪ ನಾಯಕ ಸಂತೋಷ್ ಕೆಲೋಜಿ, ಹನುಮಂತಪ್ಪ ಚೌಡ್ಕಿ ಹಾಗು ಇತರೆ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.