ಮೈಸೂರು: ವಾರ್ಡ ನಂಬರ್ 51ರ ರಾಮಾನುಜ ರಸ್ತೆಯ ಮಡಿವಾಳ ಸ್ವಾಮಿ ಮಠದ ಎದುರುಗಡೆ ಇರುವ ಅಕ್ಕ ಮಣ್ಣಿ ಆಸ್ಪತ್ರೆಯ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣ ವಾಗಿದ್ದು
ಆ ಕಟ್ಟಡಕ್ಕೆ ಶ್ರೀ ರಾಮಾನುಜಾಚಾರ್ಯ ಹಿರಿಯ ನಾಗರಿಕರ ಡೇ ಕೇರ್ ಸೆಂಟರ್ ಎಂಬ ಹೆಸರಿಡಲಾಗಿದೆ
ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದು 2013ರಿಂದ2018ರ ವರೆಗಿನ ಅಧಿಕಾರ ಅವಧಿಯಲ್ಲಿ ಅಗ್ರಹಾರ ವಾರ್ಡಿನ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸಿ ಕಳೆದ ವರ್ಷ ಕಾಲವಾದ “ಅಗ್ರಹಾರ ವಾರ್ಡಿನ ಅಭಿವೃದ್ಧಿಯ ಹರಿಕಾರ ಎನ್, ಸುನೀಲ್ ಕುಮಾರ್ ರವರ ಹೆಸರು ಇಡಬೇಕೆಂದು ಒತ್ತಾಯಿಸಿದ್ದಾರೆ,
ಆದರೆ ಈಗಾಗಲೇ ನಗರ ಪಾಲಿಕೆ ಸದಸ್ಯರಾದ “ಬಿ,ವಿ, ಮಂಜುನಾಥ್” ರವರು ಕ್ಷೇತ್ರದ ಶಾಸಕರಾದ “ಎಸ್ ಎ ರಾಮದಾಸ್” ರವರನ್ನು ಕರೆಸಿ ಶ್ರೀ ರಾಮಾನುಜ ಚರ್ಯರ ಹೆಸರಿನ ಡೇ ಕೇರ್ ಸೆಂಟರ್ ಉದ್ಘಾಟನೆ ಮಾಡಿಸಿದ್ದಾರೆ,
ಸದರಿ ನಗರ ಪಾಲಿಕೆ ಸದಸ್ಯರಾದ ಬಿ,ವಿ, ಮಂಜುನಾಥ್ ರವರು ಮತ್ತೋಮ್ಮೆ ಸ್ಥಳಿಯ ನಾಗರಿಕರ ಜೊತೆ ಚರ್ಚಿಸಿ ಸುನೀಲ್ ಕುಮಾರ್ ರವರ ಹೆಸರನ್ನು ಮರುನಾಮಕರಣ ಮಾಡಬೇಕೆಂದು ತೇಜಸ್ವಿ ರವರು ಒತ್ತಾಯಿಸಿದ್ದಾರೆ
ಅಲ್ಲದೆ ಈಗಾಗಲೇ ಪಕ್ಕದಲ್ಲೇ ಇರುವ ಸ್ಥಳದಲ್ಲಿ (ರಾಮಾನುಜ ಚರ್ಯರ ಪ್ರತಿಮೆ) ಸ್ಥಾಪಿಸುತ್ತಿದ್ದಿರಿ ಅದಕ್ಕೆ ನಮ್ಮ ವಿರೋಧ ಇಲ್ಲ
ಆದರೆ ಹಿರಿಯ ನಾಗರಿಕರ ಡೇ ಕೇರ್ ಸೆಂಟರ್ ಗೆ ದಿವಂಗತ ಸುನೀಲ್ ಕುಮಾರ್ ಹೆಸರನ್ನು ಮರುನಾಮಕರಣ ಮಾಡಿ ಪ್ರಸ್ತುತ ಸ್ಥಳಕ್ಕೆ “ಅಕ್ಕಮಣ್ಣಿ” ಯವರ “ಉದ್ಯಾನವನ” ಎಂದು ನಾಮಕರಣ ಮಾಡ ಬೇಕೆಂದು “ತೇಜಸ್ವಿ ನಾಗಲಿಂಗ ಸ್ವಾಮಿ” ಒತ್ತಾಯಿಸಿದ್ದಾರೆ
ಒಂದು ವೇಳೆ ಹೆಸರು ಬದಲಾವಣೆ ಮಾಡದೆ ಇದ್ದಲ್ಲಿ ಹೋರಾಟದ ಹಾದಿ ಹಿಡಿದು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಗುತ್ತಾದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.