ಗದಗ:ಸಂಚಾರಿ ಡಿಜಿಟಲ್ ತಾರಾಲಯ ಕಾರ್ಯಕ್ರಮವು ಸರ್ಕಾರದ ವಿನುತನ ಯೋಜನೆಯಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ಇದರ ನಿರ್ವಹಣಾ ಸಂಸ್ಥೆಯಾದ “ವರ್ಣಾಜ್ ಟೆಕ್ನಾಲಜಿಸ್” ಸಂಸ್ಥೆಯು ಕಳೆದ 2017 ರಿಂದ ಈ ಯೋಜನೆ ಯನ್ನು ನಿರ್ವಹಿಸುತ್ತಿದ್ದು ಇಲ್ಲಿಯವರೆಗೆ 15ಲಕ್ಷ ಮಕ್ಕಳಿಗೆ ಹಾಗೂ ಸುಮಾರು 60 ಸಾವಿರ ಶಿಕ್ಷಕರಿಗೆ ಖಗೋಳಶಾಸ್ತ್ರದ ಬಗ್ಗೆ, ನಕ್ಷತ್ರ ಪುಂಜಗಳು, ನಕ್ಷತ್ರಗಳು, ಆಕಾಶ ಕಾಯಗಳ ಪರಿಚಯ ಹಾಗೂ ನಭೋಮಂಡಲದ ಕೌತುಕಗಳನ್ನು ತಾರಾಮಂಡಲದಲ್ಲಿ ತಿಳಿಸಲಾಗುತ್ತದೆ.
ಭಾರತದ ಜಮ್ಮು, ಕಾಶ್ಮೀರ, ಲಡಾಕ, ಹಿಮಾಚಲ್ ಪ್ರದೇಶ, ಕರ್ನಾಟಕ ಸೇರಿ ಇನ್ನೂ ಹಲವಾರು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿನಿತ್ಯ ಜಿಲ್ಲೆ ತಾಲೂಕು ಹಳ್ಳಿಯ ಶಾಲೆಗಳಿಗೆ ಈ ನಮ್ಮ ಸಂಚಾರಿ ತಾರಾಲಯವು ತೆರಳಿ ಅಲ್ಲಿ ಒಂದು ಕೊಠಡಿಯಲ್ಲಿ ಡೋಮ್ ಸೆಟ್ ಅಪ್ ಮಾಡಿ 360° ಸಿಸ್ಟಮ್ ಪ್ರೊಜೆಕ್ಟರ್ ಮೂಲಕ ಶಾಲೆಯ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸೌರಮಂಡಲದ ಕುರಿತು ವಿಥೌಟ್ ಗ್ಲಾಸ್ 3D ಎಫೆಕ್ಟ್ ನ ವಿಡಿಯೋ ಗಳನ್ನು ತೋರಿಸಲಾಗುವದು, ಈ ಕಾರ್ಯಕ್ರಮವು ಶಾಲಾ ಮಕ್ಕಳ ಪರೀಕ್ಷೆ ಹಾಗೂ ಬೇಸಿಗೆ ರಜೆ ಸಮೀಪಸುತ್ತಿರುವ ಕಾರಣ ಈ ನಮ್ಮ ವಿನುತನ ಕಾರ್ಯಕ್ರಮ ವನ್ನು ಇನ್ನಿತರ ಸಂಘ ಸಂಸ್ಥೆ ಹಾಗೂ ವಿಶೇಷ ಕಾರ್ಯಕ್ರಮಗಳಲ್ಲಿ ಆಯೋಜಿಸಲು ಇಚ್ಛೆಸಿರುತ್ತೇವೆ ಆದ ಕಾರಣ ಇದರ ಸದುಪಯೋಗ ವನ್ನು ಉಚಿತವಾಗಿ ಪಡೆದುಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8431077106 ಸಂಪರ್ಕಿಸಬೇಕಾಗಿ ವಿನಂತಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.