ವಿಜಯನಗರ ಜಿಲ್ಲೆ ಕೊಟ್ಟೂರು
ತಾಲೂಕು ಕೋಗಳಿ ಗ್ರಾಮದಲ್ಲಿ ನಶಿಸಿ ಹೋಗುತ್ತಿರುವ ತಳ ಸಮುದಾಯದ ವಿಶಿಷ್ಟ ಕಲೆಗಳಾದ ಜಾನಪದ ಮತ್ತು ಸೋಬಾನ ಪದಗಳ ತರಬೇತಿ ಶಿಬಿರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗ್ರಾಮದ ಶಿವಕೊಟ್ಯಾಚಾರ್ಯ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ವಿ.ರವಿ.ಕಾರ್ಯದರ್ಶಿ ಪ.ಸ.ಸಂಘ ಕೋಗಳಿಯವರು ದೀಪ ಹಚ್ಚುವುದರ ಮೂಲಕ ಚಾಲನೆ ನೀಡಿ ಮಾತನಾಡಿ ಅವರು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮೇಲಿ ಕೀಳು ಎಂಬ ಮನೋಭಾವನೆ ಜನರಲ್ಲಿದ್ದು ಜಾತಿಯತೇ ಹೊಗಲಾಡಿಸಿ ಸೌಹರ್ಯದತೆಯಿಂದ ಕೋಗಳಿ ಗ್ರಾಮದಲ್ಲಿ ಪ್ರತಿಭೆಗಳಿವೆ ಅವರನ್ನು ಗುರುತಿಸುವ ಕೆಲಸವಾಗ ಬೇಕು ಜಾನಪದ ಕಲೆ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕೆಂದರು ಮತ್ತು ಜಾನಪದ ಉಳೆಯಬೇಕಾದರೆ ಕಲಾವಿದರನ್ನು ಪ್ರೋತ್ಸಾಹಿಸಬೇಕು ಇಲ್ಲಾವಾದಲ್ಲಿ ಜಾನಪದ ಕಲೆ ನಶಿಸಿ ಹೋಗುತ್ತವೆ ಸೋಬಾನೆ,ಗೀಗಿ ಪದಗಳು ಸೇರಿದಂತೆ ಎಲ್ಲಾ ಜಾನಪದ ಕಲೆಗಳು ಉಳಿಯಬೇಕಾಗಿದೆ ಈಗ ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮದಾಗಿದೆ ಹಾಗು ಸರ್ಕಾರ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಶಿಸಿ ಹೋಗುತ್ತಿರುವ ಜಾನಪದ ಸೋಭಾನ ಕಲೆಗಳ ಬಗ್ಗೆ ೨೦ ದಿನ ತರಬೇತಿ ಶಿಬರವನ್ನು ಶಿವ ಕೊಟ್ಯಾಚಾರ್ಯ ಸಮುದಾಯ ಭವನದಲ್ಲಿ ನೀಡಲಾಗುತ್ತದೆ ಗ್ರಾಮದ ಹೆಚ್ಚಿನ ಮಹಿಳೆಯರು ಈ ತರಬೇತಿಯನ್ನು ಪಡೆದು ಕೊಳ್ಳಬೇಕೆಂದು ಎಂದು ತಿಳಿಸಿದರು.ಈ ಸಂಧರ್ಭದಲ್ಲಿ ಮೋಟಮ್ಮನವರು,ಕರಿಬಸಪ್ಪ.ಜಿ.ಶಿವಪುತ್ರ ಮುಖ್ಯಕಾರ್ಯನಿರ್ವಾಹಕರು ಹಾ. ಉ. ಸ. ಸಂಘ ಕೋಗಳಿ. ಜಿ. ಕೊಟ್ರೇಶ್ ದೊಡ್ದಾಟ ಕಲಾವಿದರು, ಒ. ಶಿವಪ್ಪ ಹಾರ್ಮೋನಿಯಂ, b. ಉಮೇಶ್. ಸೋಬಾನ ಸಂಘದ ಅಧ್ಯಕ್ಷರು ಕೆ.ರೇವಕ್ಕ. ಮತ್ತು ಬಿ. ದ್ಯಾಮವ್ವ. ಹೆಚ್. ಎಂ.ಕೊಟ್ರಮ್ಮ,ಓ.ವೀರಮ್ಮ ಮತ್ತು ಸಂಗಡಿಗರು ಇದ್ದರು
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.