ಹನೂರು ತಾಲೂಕಿನ ಶ್ರೀ ಮೇಲೆ ಮಹದೇಶ್ವರ ಬೆಟ್ಟದ ದೇವಸ್ಥಾನ ದಲ್ಲಿ ದಿನಾಂಕ 07.03.2023 ರಲ್ಲಿ ಅಂದರೆ ನೆನ್ನೆ ನಡೆದ ಹುಂಡಿ ಎಣಿಕೆ ಕಾರ್ಯಕ್ರಮದಲ್ಲಿ
ಶ್ರೀ ಮಲೆ ಮಹದೇಶ್ವರ ಬೆಟ್ಟ ದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಕಣ್ಗಾವಲಿನಲ್ಲಿ ಹಾಗೂ ಪೊಲೀಸ್ ಬಂದೋಬಸ್ತ್ ಹುಂಡಿಯ ಏಣಿಕೆ ಕಾರ್ಯಕ್ರಮ ನಡೆಯಿತು.
ಚಾಮರಾಜನಗರ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸುಮಾರು ಲಕ್ಷಾಂತರ ಮಂದಿ ಮಾದಪ್ಪನ ಭಕ್ತಾದಿಗಳು ಕಾಲ್ನಡಿಗೆ ಹಾಗೂ ವಾಹನಗಳಲ್ಲಿ ಆಗಮಿಸಿದರು.
ದಿನಾಂಕ 9.2.2023 ರಿಂದ 06.03. 2023 ರವರಿಗೆ ಸುಮಾರು 26 ದಿನಗಳ ಕಾಲ ನಡೆದ ಅಮಾವಾಸ್ಯೆ ಯ ಶಿವರಾತ್ರಿ ಜಾತ್ರಾ ಮಹೋತ್ಸವ ರಜಾದಿನಗಳ ಸೇರಿ ಶ್ರೀ ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಸುಮಾರು 1,82,30,192, 00 ರೂಪಾಯಿಗಳು ನಗದು 85 ಗ್ರಾಂ ಚಿನ್ನ,ಬೆಳ್ಳಿ 1 ಕೆಜಿ 60 ಗ್ರಾಂ ಸಂಗ್ರಹವಾಗಿದೆ. ಎಂದು ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರ ತಿಳಿಸಿದೆ…
ಈ ಸಂಧರ್ಭದಲ್ಲಿ ಅಪರ ಜಿಲ್ಲಾಧಿಕಾರಿ,ಹಾಗೂ ಮಹದೇಶ್ವರ ಬೆಟ್ಟಅಭಿವೃದ್ಧಿ ಪ್ರಧೀಕಾರ ಕಾರ್ಯದರ್ಶಿ ಕಾತ್ಯಾಯಿನಿ ದೇವಿ, ಉಪ ಕಾರ್ಯದರ್ಶಿ ಬಸವರಾಜು, ಸ್ಟೇಟ್ ಬ್ಯಾಂಕ್ ಸಿಬ್ಬಂದಿಗಳು, ಪ್ರಾಧಿಕಾರದ ಸಿಬ್ಬಂದಿಗಳು ಹಾಗೂ ಪೊಲೀಸರು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್