ಯಾದಗಿರಿ: ಶಹಾಪುರ ತಾಲೂಕಿನ ಸಗರನಾಡಿನ ಆರಾಧ್ಯ ದೇವರು ಬೆಟ್ಟದ ಗವಿ ರಂಗನಾಥ ಸ್ವಾಮಿ ದೇವರು ಭಕ್ತರ ಪಾಲಿನ ಇಷ್ಟಾರ್ಥ ಬೇಡಿಕೆ ಈಡೇರಿಸುವ ದೇವರು ಎಂದೇ ಭಕ್ತರು ಹೇಳುತ್ತಾರೆ.
ಬಹು ಹಳೆಯದಾದ ದೇವಸ್ಥಾನ ಶ್ರೀ ಗವಿ ರಂಗನಾಥ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ಸಗರನಾಡಿನ ಭಕ್ತರು ಸಹಕಾರದಿಂದ ಮುನ್ನೂರರಡ್ಡಿ ತುಳೆರ್ ಸಮಾಜದ ವತಿಯಿಂದ ವಿಜೃಂಭಣೆಯಿಂದ ನಡೆಯಿತು.
ಶನಿವಾರ ನಗರದಲ್ಲಿ ಮೂರ್ತಿ ಭವ್ಯ ಮೆರವಣಿಗೆಯ ಮೂಲಕ ಶ್ರೀ ಬೆಟ್ಟದ ಗವಿ ರಂಗನಾಥ ಸ್ವಾಮಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ರಾಮಾಚಾರ್ಯ ಪಾಲ್ಮೂರು , ಪಂ.ಶ್ರೀನಿದಿ ಆಚಾರ್ಯ, ವೆಂಕಟೇಶಾಚಾರ್ಯ ಅವರಿಂದ ಶ್ರೀ ಬೆಟ್ಟದ ಗವಿ ರಂಗನಾಥ ಸ್ವಾಮಿಗೆ ವಿಶೇಷ ಪೂಜೆ ವಿಜೃಂಭಣೆಯಿಂದ ಜರಗಿತು. ರವಿವಾರ ಗಣಪತಿ ಪೂಜೆ. ಪ್ರತಿಷ್ಠಾಪನಾ ಹಾಗೂ ಹೋಮ ಹವನ ನಡೆಯಿತು. ಸೋಮವಾರ ಬೆಳಗ್ಗೆ ಪೂರ್ಣಾಹುತಿ, ಪೂರಕ ಪ್ರಾಣ ಪ್ರತಿಷ್ಠಾಪನೆ, ದೇವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ನೈವಿಧ್ಯ, ಮಾಹಮಂಗಳಾರತಿ, ವಿಶೇಷ ಭಜನಾ ಸೇವಾ ಜರಗಿತು. ಶಹಾಪುರ ನಗರದ ಭಕ್ತಾದಿಗಳು ಪಾಲ್ಗೊಂಡು ಶ್ರೀ ಬೆಟ್ಟದ ಗವಿ ರಂಗನಾಥ ಸ್ವಾಮಿ ಕೃಪೆಗೆ ಪಾತ್ರರಾದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ವರದಿ-ರಾಜಶೇಖರ ಮಾಲಿ ಪಾಟೀಲ್ ಶಹಾಪುರ