ಸಿಂಧನೂರು//ಮಾ.30. ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಕಾರಟಗಿ ತಾಲೂಕಿನ ಪನ್ನಾಪುರ ಗ್ರಾಮದ ದಿ. ಮಹಾದೇವಮ್ಮಗಂ/ಬಸನಗೌಡ ಇವರ ಆರನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ದಿವಂಗತರ ಪುತ್ರರಾದ ರುದ್ರಗೌಡ ಪಾಟೀಲ್ ಪನ್ನಾಪುರ ಅವರು ಆಶ್ರಮದ ಸೂಕ್ತ ಭದ್ರತೆಗಾಗಿ ಮೆಸ್ ವಿತರಿಸಿ ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಮತ್ತು ವಿವಿಧ ರೀತಿಯ ಸೇವೆ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ನೆರವೇರಿತು. ಈ ಕಾರ್ಯಕ್ರಮದಲ್ಲಿ ದಿ. ಮಹಾದೇವಮ್ಮ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಮಾತನಾಡಿದ ರುದ್ರಗೌಡ ಪಾಟೀಲ್ ಪನ್ನಾಪುರ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ತಂದೆ-ತಾಯಿಗಳೇ ಮೊದಲನೆಯ ದೇವರಾಗಿದ್ದಾರೆ ದೇವತೆಯಂತಹ ನನ್ನ ತಾಯಿಯು ಯಾವಾಗಲೂ ದಾನ ಧರ್ಮ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವುದು ಸಮಾಜದ ಬಗ್ಗೆ ಚಿಂತನೆ ಮಾಡುವುದನ್ನು ಅರಿತುಕೊಂಡು ಆ ತಾಯಿಯ ಆದರ್ಶವನ್ನು ಮೈಗೂಡಿಸಿಕೊಂಡಿದ್ದೇನೆ. ಆದರೆ ಇಂದಿನ ಈ ಯುಗದಲ್ಲಿ ತಂದೆ ತಾಯಿಗಳನ್ನು ದೂರವಿಡುವ ಸಮಾಜ ಇಂತಹ ಆಶ್ರಮ ಹುಟ್ಟಲಿಕ್ಕೆ ಕಾರಣವಾಗಿದೆ ಕಾರುಣ್ಯ ಆಶ್ರಮ ನನ್ನ ಸ್ವಂತ ಕುಟುಂಬ ಇದ್ದ ಹಾಗೆ ಹೋದ ವರ್ಷವೂ ಕೂಡ ನಾನು ಆಶ್ರಮಕ್ಕೆ ದೊಡ್ಡ ಮಟ್ಟದ ಪಾತ್ರೆಗಳನ್ನು ವಿತರಿಸಿದ್ದೆ ಇಂದಿನ ಈ ವರ್ಷದಲ್ಲಿ ಆಶ್ರಮಕ್ಕೆ ಅವಶ್ಯಕತೆ ಇರುವ ಮೆಸ್ ವಿತರಿಸಿ ನನ್ನ ತಾಯಿಯ ಆತ್ಮಕ್ಕೆ ಶಾಂತಿ ಸಿಗಲೆಂದು ಇಲ್ಲಿ ನೆಲೆಸಿರುವ ಎಲ್ಲಾ ಹಿರಿಯ ಜೀವಿಗಳು ಹಾಗೂ ವಯಸ್ಕರ ಬುದ್ಧಿಮಾಂದ್ಯ ಜೀವಿಗಳ ಮೂಲಕ ಪ್ರಾರ್ಥನೆ ಮಾಡುವುದರ ಮೂಲಕ ಬೇಡಿಕೊಳ್ಳುತ್ತಿದ್ದೇನೆ. ಬಹಳ ಕಷ್ಟದ ನಡುವೆ ನನ್ನನ್ನು ಬೆಳೆಸಿದ್ದನ್ನು ಇವತ್ತಿಗೂ ಮರೆಯಲಾಗುತ್ತಿಲ್ಲ. ಸಮಾಜದ ಪ್ರತಿಯೊಬ್ಬರೂ ಕೂಡ ತಂದೆ ತಾಯಿಗಳನ್ನು ಗೌರವಿಸಬೇಕು ಮಕ್ಕಳ ಬಗ್ಗೆ ಹಲವಾರು ಕನಸುಗಳನ್ನು ಹೊತ್ತಿರುವ ತಂದೆ-ತಾಯಿಗಳು ಮಕ್ಕಳ ಶ್ರೇಯಸ್ಸನ್ನು ನೋಡಿ ಸಂತೋಷವಾಗಿರಬೇಕೆಯೇ ಹೊರತು ಚಿಂತಿಸಬಾರದು ನಾನು ಪ್ರತಿ ವರ್ಷವೂ ಕೂಡ ನನ್ನ ಸ್ವಂತದ ಕಾರುಣ್ಯ ಆಶ್ರಮಕ್ಕೆ ನನ್ನ ತಾಯಿಯ ಹೆಸರಿನಲ್ಲಿ ಸೇವೆಗೈಯ್ಯುತ್ತೇನೆ. ಇಲ್ಲಿ ಆಶ್ರಯ ಪಡೆದಿರುವ ಎಲ್ಲಾ ಜೀವಿಗಳ ಆಶೀರ್ವಾದ ನನ್ನ ಕುಟುಂಬದ ಮೇಲಿರಲಿ ಸದಾವಕಾಲ ಇವರನ್ನೆಲ್ಲಾ ಕಾಪಾಡುವುದು ನನ್ನ ನನ್ನ ಜವಾಬ್ದಾರಿ ಇಂದು ನನ್ನ ತಂದೆ ತಾಯಿಗಳ ಆಶೀರ್ವಾದದಿಂದ ನನ್ನ ಕುಟುಂಬವನ್ನು ಸುಖವಾಗಿಡುವುದಲ್ಲದೆ ಇಂತಹ ನೊಂದು ಬೆಂದ ಜೀವಿಗಳಿಗೆ ಸಹಾಯ ಮಾಡುವ ಶಕ್ತಿ ದೊರೆತಿದೆ ಎಂದು ಮಾತನಾಡಿ ದಿವಂಗತರಿಗೆ ಮೌನಚರಣೆಯ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದಯ ಗೌಡ ಗಿಣಿವಾರ ಮಾಜಿ ತಾ. ಪಂ. ಸದಸ್ಯರು ಒಳಬಳ್ಳಾರಿ ಕ್ಷೇತ್ರ. ಶ್ರೀಮತಿ ನಿರ್ಮಲಾ. ಶ್ರೀಮತಿ ಪಾರ್ವತಮ್ಮ ರುದ್ರಗೌಡ ಪಾಟೀಲ್ ಪನ್ನಾಪುರ. ಕು.ದೊಡ್ಡನಗೌಡ ಗಿಣಿವಾರ ಮತ್ತು ಅವರ ಅಪಾರ ಕುಟುಂಬ ವರ್ಗ ಹಾಗೂ ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಸುಜಾತ ಹಿರೇಮಠ ಇಂದುಮತಿ ಏಕನಾಥ ಮರಿಯಪ್ಪ. ಶರಣಮ್ಮ ಕರಿಯಪ್ಪ ಹರ್ಷವರ್ಧನ ಅನೇಕರು ಉಪಸ್ಥಿತರಿದ್ದರು.
ವರದಿ// ವೆಂಕಟೇಶ.H. ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.