ಹಿಂಗ್ಯಾಕಾತೋ ಇದು ಹಿಂಗ್ಯಾಕಾತೋ ಕೇಳಿಲಿಲ್ಲ ನಾ ಹಿರಿಯರ ಮಾತೋ ಇದು ಹಿಂಗ್ಯಾಕಾತೋ !
ವಿದ್ಯೆ ಕಲಿಲಕ ಕಳಸ್ಕಾರ ಪ್ಯಾಟಿಗಿ
ಓದು ಬರಹ ಬಿಟ್ಟು ಮಾಡಿದಿ ನೀ ಮೋಜು,ಮಸ್ತಿ ಬಂದಿದ ಉದ್ದೇಶ ನೀ ಮರೆತಿ ಎಲೇ ಕೊಡಿ,
ಹಿಂಗ್ಯಾಕಾತೋ ಇದು ಹಿಂಗಾಕಾತೋ ಕೇಳಿಲಿಲ್ಲ ನಾ ಹಿರಿಯರ ಮಾತೋ ಇದು ಹಿಂಗ್ಯಾಕಾತೋ!
ಮನಸ್ಸಿನ್ಯಾಗ ನೂರಾರು ಆಸೆಯ ಹೊತ್ತು, ಕಾಯಕೊಂಡ ಕುಂತಾರ ನಿನ್ನ ಹಾದಿ,ನೀ ಮರೆತು ಬಿಟ್ಟಿ ನೀ ಬಂದ ದಾರಿ
ಹಿಂಗ್ಯಾಕಾತೋ ಇದು ಹಿಂಗ್ಯಾಕಾತೋ
ಕೇಳಿಲಿಲ್ಲ ನಾ ಹಿರಿಯರ ಮಾತೋ ಇದು ಹಿಂಗ್ಯಾಕಾತೋ!
ಮೋಸದ ಪ್ರೀತಿಯ ಬಲೆಗೆ ಬಿದ್ದು ಮಾರಕೊಂಡಿ ನೀ ನಿನ್ನ ಮಾನ ಮರವಾದಿ, ಜೂಜು,ಮೊಜು, ಹೆಂಡಕ್ಕೆ ದಾಸನಾಗಿ
ಹಿಡಿದಿದಿ ನೀ ಅಡ್ಡ ದಾರಿ
ಹಿಂಗ್ಯಾಕಾತೋ ಇದು ಹಿಂಗ್ಯಾಕಾತೋ ಕೇಳಿಲಿಲ್ಲ ನಾ ಹಿರಿಯರ ಮಾತೋ ಇದು ಹಿಂಗ್ಯಾಕಾತೋ !
ತಪ್ಪಿನ ಅರಿವಾಗಿ ಹಿಡದಾನ ಊರ ದಾರಿ ಗುರು-ಹಿರಿಯರ ಕಾಲಿಗೆ ಬಿದ್ದು ಕೇಳ್ತಾರ ಸಾರಿ ಮುಂದೆ ಮಾಡೋದಿಲ್ಲಾ ಈ ತಪ್ಪು ಮತ್ತೊಂದಿ ಬಾರಿ, ಹಿಡಿತಿನಿ ಇನ್ನೊಂದೇ ನೀವು ತೋರಿಸಿದ ಹಾದಿ..!
ಹಿಂಗ್ಯಾಕಾತೋ ಇದು ಹಿಂಗ್ಯಾಕಾತೋ ಕೇಳಿಲಿಲ್ಲ ನಾ ಹಿರಿಯರ ಮಾತೋ ಇದು ಹಿಂಗ್ಯಾಕಾತೋ !
-ದಯಾನಂದ.ಎಮ್.ಜಿ.