ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಾ ಒಂದ್ ವೋಟ್ ಹಾಕದಿದ್ರ ಏನ್ ಆಕ್ಕೈತಿ?

ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಅತ್ಯಂತ ಮಹತ್ವದ ಸ್ಥಾನಮಾನಗಳಿವೆ.ನನ್ನ ಒಂದು ಮತ:ನನ್ನ,ನನ್ನ ಕುಟುಂಬದ,ಪ್ರದೇಶದ, ರಾಜ್ಯದ ಮತ್ತು ದೇಶದ ಮುಂದಿನ ಐದು ವರ್ಷಗಳ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬ ಅಂಶವು ನಮಲ್ಲಿ ಎಲ್ಲಿಯವರೆಗೆ ಜಾಗೃತವಾಗುವುದಿಲ್ಲವೋ ಅಲ್ಲಿಯವರೆಗೆ ದೇಶ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಹೊಂದಲಾರದು.
ನನ್ನ ಒಂದು ಮತ ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ಸಂಬಂಧಿಸಿದ ಅಧಿಕಾರಕ್ಕೆ ಹುದ್ದೆಗೆ ಕಳುಹಿಸದೇ ಆ ಭಾಗದ ಜನತೆಯ ಕನಸು, ಭವಿಷ್ಯ ಆ ಕ್ಷೇತ್ರದ ಅಭಿವೃದ್ಧಿ ಎಲ್ಲವನ್ನು ಅವನೊಟ್ಟಿಗೆ ಕಳುಹಿಸಿ ಕೊಟ್ಟಿರುತ್ತೇವೆ. ಗಣತಂತ್ರ ವ್ಯವಸ್ಥೆಯಡಿಯಲ್ಲಿ ಸಂಖ್ಯೆ ೫೧ ಅಂದರೆ ೧೦೦ ಇದ್ದಂತೆ ೪೯ ಅಂದರೆ ೦೦ ಇದ್ದಂತೆ ಎಂಬುದು ತಮಗೆಲ್ಲ ತಿಳಿದ ಸಂಗತಿ. ಎಲ್ಲ ದಾನಕ್ಕಿಂತ ಮತದಾನ ಅತ್ಯಂತ ಶ್ರೇಷ್ಠವಾದ ದಾನ ಏಕೆಂದರೆ ನಾವು ಯಾವುದಾದರೂ ಹಣಕಾಸು,ಕಾಳು-ಕಡಿ, ಎತ್ತು ಚಕ್ಕಡಿ,ಟ್ರಾಕ್ಟರ್ ಟಿಲ್ಲರ್,ಯಾವುದೇ ಒಂದು ದಾನವನ್ನು ಕೇವಲ ಒಬ್ಬ ವ್ಯಕ್ತಿಗೆ ಅಥವಾ ಕೆಲವೇ ಕೆಲವು ವ್ಯಕ್ತಿಗಳ ಗುಂಪಿಗೆ ಮಾಡಬಹುದು. ಆದರೆ ನಾವು ನೀಡುವ ಒಂದೊಂದು ಮತ ಒಟ್ಟಾರೆ ಆ ಕ್ಷೇತ್ರದ ಸರ್ವೋತೋಮುಖ ಅಭಿವೃದ್ಧಿಯನ್ನೇ ಒಳಗೊಂಡಿರುತ್ತದೆ ಆದರೆ ನಾವು ಆಯ್ಕೆ ಮಾಡುವ ವ್ಯಕ್ತಿ ನಿಷ್ಪಕ್ಷಪಾತ, ದೂರದೃಷ್ಟಿಯುಳ್ಳ,ಸರ್ವ ಜನಾಂಗಗಳನ್ನು ಒಗ್ಗೂಡಿಸಿಕೊಂಡು ಸಮಾಜದಲ್ಲಿ ಸ್ವಾಥ್ಯವನ್ನು ಕಾಪಾಡಿಕೊಂಡು ನಿರಂತರ ಅಭಿವೃದ್ಧಿ ಪರ ತುಡಿತವನ್ನು ಹೊಂದಿರುವವನಾಗಿರಬೇಕು ಅಷ್ಟೇ ಆದರೆ ಇತ್ತಿಚಿನ ದಿನಗಳಲ್ಲಿ ಜಾತಿಯತೆ ರಾಜಕೀಯದಲ್ಲಿ ತಾಂಡವಾಡುತ್ತಿರುವುದು ನಿಜವಾಗಿಯೂ ಖೇಧನೀಯ.“ಬ್ಯಾಲೆಟ್ ಇಸ್ ಸ್ಟ್ರಾಂಗರ್ ದ್ಯಾನ್ ಬುಲೆಟ್”-ಅಬ್ರಾಹಿಂ ಲಿಂಕನ್ ಎಂಬ ಒಬ್ಬ ಮಹಾನುಭಾವ ತಿಳಿಸಿರುವುದು ಅದೆಷ್ಟು ಅರ್ಥಗರ್ಭಿತ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳೋಣ.

ನಾವು ಆಯ್ಕೆ ಮಾಡುವ ವ್ಯಕ್ತಿಯ ಮನೋಧರ್ಮ,ದಕ್ಷತೆ,ಸಾಮರ್ಥ್ಯ, ಪ್ರಾಮಾಣಿಕತೆ,ಸಮಾಜದ ಜನತೆಯ ಬಗ್ಗೆ ಆತನಲ್ಲಿರುವ ತುಡಿತ ಆ ಕ್ಷೇತ್ರವನ್ನು ಸಂಪೂರ್ಣವಾಗಿ ಬದಲಾಯಿಸಿ ಬಿಸಾಡುತ್ತದೆ ನಮ್ಮದು ಯುವ ಭಾರತ ನಮಗೆ ಬೇಕಿರುವುದು ಅತೀ ಹೆಚ್ಚಿನ ಉದ್ಯೋಗವಕಾಶಗಳು ಮತ್ತು ಪ್ರತಿಭೆಗಳಿಗೆ ಸೂಕ್ತ ಅವಕಾಶವ ಸ್ಥಾನಮಾನಗಳು ಇಂದು ನಮಲ್ಲಿ ಪ್ರತಿಭಾ ಪಲಾಯನವಾಗುತ್ತಿರುವುದು ತಮಗೆಲ್ಲ ತಿಳಿಯದಿರುವ ಸಂಗತಿಯೇನಲ್ಲ.ಕೃಷಿ, ಕೈಗಾರಿಕೆ,ಸೇವೆಗಳು,ನೀರಾವರಿ, ಸಂಶೋಧನೆಗಳು ಆ ರಾಷ್ಟ್ರದ ಚಿತ್ರಣವನ್ನು ಜಗತ್ತಿನ ಮುಂದೆ ತೆರೆದಿಡುತ್ತವೆ.ಇಂದು ನಾವೆಲ್ಲ ವಿಶ್ವಕ್ಕೆ ಗುರುವಾಗುವ ತನಕ ತಲುಪಿಸಿರುವ ಸ್ಥಿತಿಗೆ ಕಾರಣ ನಾವುಗಳು ನೀಡಿರುವ ಒಂದೇ ಒಂದು ಅತ್ಯಮೂಲ್ಯ ಮತವೇ ಹೊರತು ಮತ್ತೇನು ಅಲ್ಲ. “ಸರ್ಕಾರಗಳು ಜನತೆಗೆ ಅಂಜಬೇಕೇ:ವಿನಹಃ ಜನತೆ ಸರ್ಕಾರಕ್ಕೆ ಅಂಜಬಾರದು”-ಅಲಾನ್ ಮೂರೆ “ಮತದಾನ ಮಾಡದೇ ಇರುವುದು ಪ್ರತಿಭಟನೆಯಲ್ಲ ಅದೊಂದು ಹೇಡಿತನದ ಕೃತ್ಯ”-ಕೇಥ್ ಇಲ್ಲಿಸನ್ “ಯಾವಾಗ ನಾವು ಮತದಾನವನ್ನು ಮಾಡುವುದಿಲ್ಲವೋ ಆಗ ಆರೋಪಿಸುವ ಅಧಿಕಾರವನ್ನು ಕಳೆದುಕೊಳ್ಳುತ್ತೇವೆ”-ಜಾರ್ಜ ಕರ‍್ಲಿನ್. ಹೀಗೆ ಮತದಾನದ ಪಾವಿತ್ರತೆಯನ್ನು ವಿವಿಧ ತತ್ವಜ್ಞಾನಿಗಳು ಅನುಭವಸ್ಥರು ತಮ್ಮದೇ ಶೈಲಿಯಲ್ಲಿ ತಮ್ಮ ಜೀವಮಾನದ ಅನುಭವವನ್ನು ಸಮೀಕರಿಸಿ ನೀಡಿದ್ದಾರೆ. ಅದೆಷ್ಟೋ ಮಹಾನ್ ಪುರುಷರು ರಾಜಕೀಯದಲ್ಲಿ ನಮಗೆಲ್ಲ ಮಾದರಿಯಾಗಿದ್ದಾರೆ ಅಂತಹ ಮಹಾನ್ ಪುರುಷರ ತತ್ವ ಸಿದ್ದಾಂತಗಳನ್ನು ನಾವು ಕೂಡ ನಮ್ಮ ಬದುಕಿನಲ್ಲಿ ಅಳವಡಿಕೊಳ್ಳೋಣ.

ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ, ಮಹಾನ್ ಹೋರಾಟಗಾರರು,ಆದರ್ಶ ಪುರುಷರು,ತತ್ವ ಮತ್ತು ಸಿದ್ದಂತಗಳನ್ನು ಮೈಗೂಡಿಕೊಂಡು ತಮ್ಮನ್ನು ತಾವುಗಳು ಸಮಾಜಕ್ಕಾಗಿ ಸಮರ್ಪಣೆ ಮಾಡಿಕೊಂಡವರನ್ನು ಪ್ರಜಾಪ್ರಭುತ್ವದ ದೇಗುಲಕ್ಕೆ ಕಳುಹಿಸುತ್ತಿದ್ದೇವು ಅದರೆ ಇಂದು ಅದರ ಕಥೆಯೇ ಬೇರೆ ಬಿಡಿ ಹರ್ಷದ ಗಂಜಿಗಾಗಿ ವರ್ಷದ ಗಂಜಿಯನ್ನು ಕಳೆದುಕೊಳ್ಳುವಂತಾಗಬಾರದು. ಚುನಾವಣೆಯಲ್ಲಿ ಯಾವುದೇ ಆಸೆ ಆಮೀಷ ಜಾತಿ ಮತ ಪಂಥ ಎಲ್ಲವನ್ನು ಮೀರಿ ಯಾವ ವ್ಯಕ್ತಿಯಿಂದ ಜನತೆಯ ಆಶೋತ್ತರಗಳು ಅನುಷ್ಠಾನಕ್ಕೆ ಬರುತ್ತವೆಯೋ ಅಂತಹ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡುವ ಕಾರ್ಯ ಕೇವಲ ಮತದಾರರಿಂದ ಮಾತ್ರ ಸಾಧ್ಯ ಮತದಾನದ ಪ್ರಮಾಣ ಎಷ್ಟು ತಗ್ಗುತ್ತದೆಯೋ ಅಷ್ಟು ಪ್ರಮಾಣದಲ್ಲಿ ಪ್ರಜಾಪ್ರಭುತ್ವದ ಶಕ್ತಿ ತಗ್ಗುತ್ತದೆ ಎಂದು ಭಾವಿಸೋಣ ಇಲ್ಲಿಯರೆಗೂ ೧೦೦% ಮತದಾನ ಆಗಿಯೇ ಇಲ್ಲ ಕಡ್ಡಾಯ ಮತದಾನಕ್ಕೆ ಸರ್ಕಾರ ವಿವಿಧ ಕ್ರಮಗಳನ್ನು ನಿರಂತರವಾಗಿ ಸಂಶೋಧನೆ ಮಾಡುತ್ತಲೇ ಇದೆ,ಆದರೂ ಕೂಡ ಅದರಲ್ಲಿ ಯಶಸ್ಸು ಕಂಡಿಲ್ಲ. ಸಮಾಜ ಅಧೋಗತಿಗೆ ಇಳಿಯುವುದು ದುಷ್ಟ ದುರುಳರ ಹಾವಳಿಯಿಂದಲ್ಲ ಬದಲಾಗಿ ಸಶಕ್ತರು, ಜ್ಞಾನಿಗಳು ಪ್ರಜ್ಞಾವಂತರು ಸುಮ್ಮನೆ ಕೂರುವುದರಿಂದ, ಅದರಂತೆ ಅದೆಷ್ಟೊ ವಿದ್ಯಾವಂತರು/ ಪ್ರಜ್ಞಾವಂತರು ಮತದಾನವನ್ನು ಮಾಡುವುದೇ ಇಲ್ಲ ಅದು ವಿಶೇಷವಾಗಿ ನಗರ ಪ್ರದೇಶಗಳಲ್ಲಿ, ನಿಮ್ಮ ಅಮೂಲ್ಯ ಸಮಯದ ಉಳಿತಾಯಕ್ಕೆ ನೀವು ಮತದಾನ ಮಾಡದೇ ಇರುವುದರಿಂದ ಆ ಕ್ಷೇತ್ರದ ಲಕ್ಷಾಂತರ ಬಡವರ,ರೈತರ, ನಿರ್ಗತಿಕರ,ನಿರುದ್ಯೋಗಿಗಳ ಕನಸುಗಳು ಕೇವಲ ಕನಸುಗಳಾಗಿ ಉಳಿಯುತ್ತವೆ ಅಷ್ಟೇ. ನಮಗೆ ನಾವೇ ಶತ್ರುಗಳುವುದು ಬೇಡ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡೋಣ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಹಕರಿಸೋಣ.
-ಸೋಮಣ್ಣ ಉಪನಾಳ,
ಲಕ್ಷ್ಮೇಶ್ವರ,ಗದಗ ಜಿಲ್ಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ