ಮೀಸಲಾತಿ ವಿರುದ್ಧ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಚನ್ನಳಿ ಗ್ರಾಮದ ಬಂಜಾರ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.ಬಂಜಾರ ಸಮುದಾಯದವರು, ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಮ್ಮ ಸ್ವ ಗ್ರಾಮದ ರಸ್ತೆ ತಡೆದು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಇದೆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜು ಈ ಬಿಜೆಪಿ ಸರ್ಕಾರ ಸದಾಶಿವ ಆಯೋಗ ಜಾರಿ ಮಾಡಿ ನಮ್ಮ 108 ಜಾತಿಯರ ಮಧ್ಯ ಭಿನ್ನಾಭಿಪ್ರಾಯ ಉಂಟುಮಾಡಿದೆ ಈ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿರುವ ಈ ಆಯೋಗವನ್ನು ನಮ್ಮ ಬಂಜಾರ ಸಮುದಾಯ ಖಂಡಿಸುತದೆ
ಲಂಬಾಣಿ ಜನಾಂಗವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದೂಳಿದಿದೆ ಇಂದಿಗೂ ಕೂಡ ಲಮಾಣಿ ಸಮಾಜವು ತಮ್ಮ ಹೊಟ್ಟೆ ಹೊರಿಯಲು ಅನೇಕ ಜಿಲ್ಲಾ ರಾಜ್ಯದ ಕಡೆ ವಲಸೆ ಹೋಗಿದ್ದಾರೆ
ಈ ಸರ್ಕಾರಕ್ಕೆ ಸರಿಯಾದ ಉತ್ತರವನ್ನು 2023 ಚುನಾವಣೆಗೆ ಕೊಡುತ್ತೇವೆ ನಮ್ಮ ಚನ್ನಲಿ ಗ್ರಾಮಕ್ಕೆ ಯಾವುದೇ ರಾಜಕೀಯ ಮುಖಂಡರುಗಳು ಆಗಲಿ ಚುನಾವಣೆ ಅಧಿಕಾರಿ ಆಗಲಿ ಯಾರೂ ಕೂಡಾ ಹೆಜ್ಜೆ ಇಡುವಂತಿಲ್ಲ ನಾವು ಈ ಸಾರಿ ಯಾರಿಗೂ ಮತ ಚಲಾಯಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಗ್ರಾಮದ ಯೋಗೇಶ್ ಲಮಾಣಿ, ಯುವರಾಜ್ ಲಮಾಣಿ ಷಣ್ಮುಕಪ್ಪ ಲಮಾಣಿ,ಮೊಟ್ಲೆಪ್ಪ ಲಮಾಣಿ, ಪ್ರತಿಭಟನೆಯಲ್ಲಿ ಭಾಗಿ ಆಗಿದ್ದರು.
ಹಿರೇಕೆರೂರ