ವಿಜಯನಗರ ಜಿಲ್ಲೆ ಕೊಟ್ಟೂರು
ತಾಲೂಕು ಹಿರೇವಡ್ಡರಹಳ್ಳಿ ಗ್ರಾಮದ ಕೆರೆ
ಕೆರೆ ವಿಸ್ತೀರ್ಣ ಸುಮಾರು 251 ಎಕ್ಕರೆ ಇದ್ದು ಕೆರೆಯ ಒಟ್ಟು ಎರಡುವರೆ ಕಿಲೋಮೀಟರ್ ಇರುತ್ತದೆ ಇದಕ್ಕೆ ಯಾವುದೇ ರೀತಿಯ ನಾಮ ಫಲಕವಾಗಲಿ ಇರುವುದಿಲ್ಲ.
ಹಿರೇವಡ್ರಳ್ಳಿ ಗ್ರಾಮದ ಊರಿನ ಮುಖಂಡರಿಗೂ ಹಾಗೂ ಬಾವಿ ತೋಟಮ್ಮ ಕೆರೆ ಅಭಿವೃದ್ಧಿ ಸಂಘಕ್ಕು ಗಮನವಿಲ್ಲದೆ. ಇವರ ಮನ ಬಂದಂತೆ ಇದ್ದ ಏರಿಯನ್ನು ಕಿತ್ತುಹಾಕಿ ಜಂಗಲ್ ಕಟಿಂಗ್ ಆಗಿಲ್ಲ ಈ ತರ ಕಳಪೆ ಕಾಮಗಾರಿಕೆಯಿಂದ ಇಲ್ಲಿ ಸಾವಿರಾರು ಎಕ್ಕರೆ ರೈತರ ಭೂಮಿಗಳಿವೆ ಕೆರೆ ವಡ್ದು ಒಡೆದರೆ ರೈತರಿಗೆ ಅಪಾರ ನಷ್ಟವಾಗುತ್ತದೆ.
ಹೀಗಾಗಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಳಪೆ ಕಾಮಗಾರಿಯ ಬಗ್ಗೆ ಮೇಲಾಧಿಕಾರಿಗಳು ಗಮನ ಹರಿಸುವಂತೆ ಇಲ್ಲಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂ ಕುಮಾರಸ್ವಾಮಿ ತಾಲೂಕು ದಂಡಾಧಿಕಾರಿಗಳು ಹಾಗೂ ಅಧಿಕಾರಿಗಳಾದ ರುದ್ರೇಶ್ ಇಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ಕೊಡಬೇಕು.ಇಲ್ಲದಿದ್ದರೆ ರೈತರಲ್ಲ ಸೇರಿ ಉಗ್ರವಾದ ಹೋರಾಟ ಮಾಡುತ್ತೇವೆ.
ಈ ಸಂದರ್ಭದಲ್ಲಿ ಪ್ರಮುಖ ಮುಖಂಡರು ಗೋಪಿನಾಥ್,ಕಲ್ಲೇಶ್ ಗೌಡ್ರು,ದಂಡಪ್ಪ,ರುದ್ರೇಶ್ ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ವರದಿ ಚಿಗಟೇರಿ ಜಯಪ್ಪ