ಯಾದಗಿರಿ: ಶಹಾಪುರ ನಗರದಲ್ಲಿ ನಿನ್ನೆ ಸಿ,ಎಂ, ಇಬ್ರಾಹಿಂ ತಮ್ಮ ಮಾತಿನ ಶೈಲಿಯಲ್ಲಿ ಬಸವಣ್ಣ ವಚನಗಳು ಹೇಳುವ ಮುಖಾಂತರ ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡು ಪಕ್ಷಗಳಿಗೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ನೈತಿಕತೆ ಇಲ್ಲ ಕಾಂಗ್ರೆಸ್ ಪಕ್ಷ 70 ವರ್ಷ ಸುಳ್ಳು ಹೇಳತ್ತಾ ಬಂದಿದ್ದಾರೆ ಬಿಜೆಪಿ ದೇಶದಲ್ಲಿ ಜಾತಿ ಧರ್ಮಗಳ ಮಧ್ಯೆ ಜಗಳ ಹೆಚ್ಚುವ ಕೆಲಸ ಮಾಡುತ್ತಾ ಬಂದಿದ್ದಾರೆ.
ರಾಜ್ಯದಲ್ಲಿ ಬಡತನ ಹೆಚ್ಚುತ್ತಿದೆ ದಿನನಿತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ನಮ್ಮ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಅವಶ್ಯಕವಾಗಿದೆ. ಸರ್ಕಾರ ರಚನೆ ಅಗತ್ಯವಾಗಿದೆ.
ಮಣ್ಣಿನ ಮಗ ಎಚ್,ಡಿ,ಕುಮಾರಸ್ವಾಮಿಯವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾದಲ್ಲಿ ರಾಜ್ಯದಲ್ಲಿನ 6 ಸಾವಿರ ಗ್ರಾಮ ಪಂಚಾಯಿತಿ ಗಳಲ್ಲಿ 30 ಹಾಸಿಗೆಗಳ ಆಸ್ಪತ್ರೆ ವಯೋವೃದ್ಧರಿಗೆ ಮಾಸಿಕ 5 ಸಾವಿರ ಮಾಸಾಶನ.10 ಎಕರೆ ರೈತರಿಗೆ ಒಂದು ಲಕ್ಷ ರೂಪಾಯಿ ಸಹಾಯಧನ 20 ಲಕ್ಷ ಆರೋಗ್ಯ ವಿಮೆ. ವರ್ಷಕ್ಕೆ 6 ಸಿಲೆಂಡರ್ ಗ್ಯಾಸ್ ಉಚಿತ ನೀಡಲಾಗುವುದು ಮತ್ತು ಸ್ತ್ರೀ ಶಕ್ತಿ ಸಂಘಗಳ ಮೇಲಿನ ಸಾಲ ಮನ್ನಾ, ಹೆರಿಗೆ ತಾಯಂದಿರಿಗೆ ಮಾಸಿಕ 6 ಸಾವಿರ ರೂಪಾಯಿ.ಆರು ತಿಂಗಳವರೆಗೆ ನೀಡಿ, ತಾಯಿ ಮಕ್ಕಳ ಆರೋಗ್ಯ ಕಾಪಾಡುವ ಸದುದ್ದೇಶ ಹೊಂದಲಾಗಿದೆ ಎಂದು ರಾಜ್ಯ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಸಿ,ಎಂ,ಇಬ್ರಾಹಿಂ ರವರು ಪಕ್ಷದ ಪ್ರನ್ನಾಳಿಕೆ ಕುರಿತು ಘೋಷಣೆ ಮಾಡಿದರು.
ಮುಂದುವರೆದು ಮಾತನಾಡಿದ ಅವರು ಮಾಹಾತ್ಮ ಬಸವಣ್ಣನವರ, ಡಾ||ಅಂಬೇಡ್ಕರವರ ತತ್ವ ಸಿದ್ದಾಂತಗಳ ಅಡಿಯಲ್ಲಿ ಜೆಡಿಎಸ್ ಪಕ್ಷ ಕಾರ್ಯನಿರ್ವಹಣೆ ಮಾಡುತ್ತಿದೆ ಬೇಡಜಂಗಮ ಕುರಿತು ಚರ್ಚಿಸಿದಾಗ ಅವರಿಗೆ
ಪ್ರತ್ಯೇಕ ನಿಗಮ ಸ್ಥಾಪನೆ ಮಾಡಿದ್ದು ಅಲ್ಲದೆ ಟಿಪ್ಪು ವಿಶ್ವವಿದ್ಯಾಲಯ ಸ್ಥಾಪನೆ ಮಾಡಿ ಅಭಿವೃದ್ಧಿ ಪೂರಕವಾಗಿ ಸ್ಥಾಪನೆ ನೀಡಲಾಗುವುದು ಎಂದು ಹೇಳಿದರು.
ಪ್ರಧಾನಿ ಮೋದಿ, ಯು.ಪಿ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಕಾಂಗ್ರೆಸ್ ನಾಯಕ ಜಮೀರ್ ಅಹಮದ್,
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪರನ್ನು ತರಾಟೆಗೆ ತೆಗೆದುಕೊಂಡ ಸಿ.ಎಂ.ಇಬ್ರಾಹಿಂ ಇವರ ಕಾರ್ಯವೈಖರಿಗಳ ಮತ್ತು ಆರೋಪಗಳ ಕುರಿತು ಹಾಸ್ಯ ಚಟಾಕಿಗೈದರು. ಜೆಡಿಎಸ್ ಪಕ್ಷದ ಅಭ್ಯರ್ಥಿ ಗುರು ಪಾಟೀಲ್ ಶಿರವಾಳ ಚನ್ನಪ್ಪಗೌಡ ಮೋಸಂಬಿ. ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ. ಜೆಡಿಎಸ್ ಹಿರಿಯ ಮುಂಡರಾದ ಮಲ್ಲಣ್ಣ ಮಡ್ಡಿ, ಪಿಡಪ್ಪ ನಂದಿಕೊಲ್, ನ್ಯಾಯವಾದಿ ರಾಮಣ್ಣ ಗೌಡ ಕೊಲ್ಲೂರು, ಸಾಲೋಮನ್ ಅಲ್ಪಡ್, ಕಾಂತು ಪಾಟೀಲ್, ಮಾಪಣ್ಣ ಮುದ್ದರ್ಕಿ, ಶೇಖರ್ ದೊರಿ, ವಾಸುದೇವ ಕಟ್ಟಿಮನಿ, ಸೇರಿದಂತೆ ಅನೇಕ ಗಣ್ಯರು ಹಿರಿಯರು ಹಾಗೂ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತರ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ