ಕಲಬುರ್ಗಿ:ಯಡ್ರಾಮಿ ಪಟ್ಟಣದಲ್ಲಿ ನಡೆದ ಗಂಗಯ್ಯ ಗುತ್ತೇದಾರ್ ಹೊಲದಲ್ಲಿ ಶುಕ್ರವಾರ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಆಡಳಿತದಲ್ಲಿ ಇರುವ ಬಿಜೆಪಿ ಸರಕಾರ ಭ್ರಷ್ಟಾಚಾರದಿಂದ ಜನತೆ ರೋಸಿ ಹೋಗಿದ್ದಾರೆ. ಇದು 40 ಪರ್ಸೆಂಟ್ ಕಮಿಷನ್ ಸರ್ಕಾರ. ರಾಜ್ಯದಲ್ಲಿ ಅಭಿವೃದ್ಧಿ ಆಗು ಎಂದರೆ ಹೇಗೆ ಆಗುತ್ತದೆ ಮೀಸಲಿಟ್ಟ ಹಣ ದುರ್ಬಳಕೆಯಾಗುತ್ತಿದೆ ಎಂದು ಹೇಳಿದರು. ಮೋದಿ ನೀಡುತ್ತಿರುವ ಗ್ಯಾರೆಂಟಿ ಬೋಗಸ್ ಆಗುತ್ತಿವೆ. ಅವರು ಹೇಳಿದ ಗ್ಯಾರಂಟಿಗಳು ನಿಮಗೆ ಸಿಕ್ಕಿದೆಯೇ? ಎಂದು ಪ್ರಶ್ನಿಸಿದ ಅವರು ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳಿದರು.
ನನ್ನ ಆತ್ಮೀಯ ಗೆಳೆಯನ ಮಗ ನನ್ನ ಮಗ ಇದ್ದಂತೆ. ನಾವು ಎಲ್ಲರೂ ಒಂದಾಗಿ ಅಜೇಯ್ ಸಿಂಗ್ ಅವರನ್ನು ಆರಿಸಿ ತರಬೇಕು. ದೇಶದ ಭವಿಷ್ಯದ ಹಿತದೃಷ್ಟಿಯಿಂದ ಚುಣಾವಣೆ. ದಲಿತ, ರೈತ, ಬಡವರ ಉಳಿವಿನ ಪ್ರಶ್ನೆಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಅಜೇಯ್ ಸಿಂಗ್ ಮಾತನಾಡಿ. ಕಾಂಗ್ರೆಸ್ ಪಕ್ಷ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸಾಗಿದೆ. ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ. ತಮ್ಮೆಲ್ಲರ ಅರ್ಶಿವಾದ ನಮ್ಮ ಮೇಲೆ ಇರಬೇಕು. ಕಾಂಗ್ರೆಸ್ ಪಕ್ಷ ಗೆಲ್ಲಿಸಿ ಖರ್ಗೆ ಅವರಿಗೆ ಶಕ್ತಿ ತುಂಬಬೇಕು ಎಂದರು.
ನಗರದ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಿಂದ ಕಾರ್ಯಕ್ರಮದ ವೇದಿಕೆವರೆಗೂ ಡೊಳ್ಳು ಕುಣಿತ, ತಮಟೆ ನಗಾರಿ ಮೇಳೆ ದೊಂದಿಗೆ ಮೆರವಣಿಗೆ ನಡೆಯಿತು.
ಈ ಸಮಾರಂಭದಲ್ಲಿ ಕೇದರಲಿಂಗಯ್ಯ ಹೀರೆಮಠ, ಅಜೇಯ್ ಸಿಂಗ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈದ್ದಲಿಂಗರಡ್ಡಿ, ರಾಜಶೇಖರ ಸಿರಿ, ಹಾಗೂ ಹಿರಿಯ ಮುಖಂಡರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಕಲಬುರ್ಗಿ