ರಾಯಚೂರು/ಲಿಂಗಸಗೂರು:ತಾಲೂಕಿನ ಸರ್ಜಾಪುರ ಗ್ರಾಮ ಪಂಚಾಯಿತಿಯಲ್ಲಿ 100 ಪ್ರತಿಶತ ಮತದಾನದ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಸರ್ಜಾಪೂರ ಗ್ರಾಮ ಪಂಚಾಯತಿಯಲ್ಲಿ ಸಾರ್ವತ್ರಿಕ ವಿಧಾನಭೆ ಚುನಾವಣೆ 2023ರ ಮತದಾನ
ಪ್ರಮಾಣವನ್ನು ಹೆಚ್ಚಿಸಲು ಮತದಾನ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಸದರಿ
ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಸರ್ಜಾಪೂರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಶೋಭಾರಾಣಿಯವರು ಹಾಗೂ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲಾ ಗ್ರಾಮಗಳ
ಸರಕಾರಿ ಕಿರಿಯ/ಹಿರಿಯ ಅನುದಾನಿತ ಪ್ರಾಥಮಿಕ ಶಾಲೆಯ ಬಿ.ಎಲ್.ಓ,ಅಂಗನವಾಡಿ ಕಾರ್ಯಕರ್ತೆಯರು,
ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಭಾಗವಹಿಸಿ ಗ್ರಾಮದ ಬೀದಿಗಳಲ್ಲಿ,
ಓಣಿಗಳಲ್ಲಿ ಮತದಾರರ ಪ್ರತಿಜ್ಞಾವಿಧಿಯೊಂದಿಗೆ ವಿವಿಧ ಘೋಷಣೆಗಳೊಂದಿಗೆ ಪಥ ಸಂಚಲನ ಮಾಡಿ ಬಿ.ಎಲ್.ಓ.
ರವರಿಂದ ಮತದಾನದ ಚೀಟಿಯನ್ನು ವಿತರಿಸಲಾಯಿತು ಹಾಗೂ ಮತದಾನದಿಂದ ಯಾರೂ ಹೊರಗಡೆ
ಉಳಿಯಬಾರದೆಂದು ತಿಳಿಸಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
ವರದಿ:ಶಿವದೇವಪ್ಪ.ಎಂ.ಹಟ್ಟಿ