ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಹಾಗೂ ಯಡ್ರಾಮಿ ತಾಲೂಕಿನ ಹಳ್ಳಿಗಳಲ್ಲಿ ಜನರಲ್ಲಿ ಮತದಾನ ಜಾಗೃತಿ ಮೂಡಿಸುವುದರ ಮೂಲಕ ಸಂವಿಧಾನದ ಆಶಯಗಳನ್ನು ತಿಳಿಸುವುದರ ಮೂಲಕ ಮತದಾನದ ಮಹತ್ವವನ್ನು ಸಾರಿ ಸಾರಿ ಪ್ರತಿ ಹಳ್ಳಿಯಲ್ಲೂ ಪ್ರಚಾರ ಕಾರ್ಯ ಆರಂಭಿಸಿದ ಏಕೈಕ ವಿಧಾನಸಭಾ ಚುನಾವಣಾ ಅಭ್ಯರ್ಥಿ ವಿಜಯಕುಮಾರ್ ಜೆ ಮಲೇದ ನನಗೆ ಮತದಾನ ಮಾಡಿ ನಾನು ನಿಮ್ಮ ಸೇವೆ ಮಾಡ್ತೀನಿ ನಿಮ್ಮ ಮತ ದುಡ್ಡಿಗೆ ಮಾರಿಕೊಳ್ಳಬೇಡಿ ಒಂದು ವೇಳೆ ದುಡ್ಡಿಗೆ ಮಾರಿಕೊಂಡರೆ ಐದು ವರ್ಷ ನಿಮ್ಮ ಮೇಲೆ ನಿಮ್ಮ ಹಕ್ಕುಗಳ ಮೇಲೆ ಸರ್ವಾಧಿಕಾರ ನಡೆಯಲಿದೆ ಎಂದು ಪ್ರತಿ ಹಳ್ಳಿಯಲ್ಲೂ ಅದರಲ್ಲೂ ವಿಶೇಷವಾಗಿ ಸೈದಾಪುರ್ ಆಲೂರ್ ಹರನಾಳ್ ಬಿಳ್ವಾರ ನಂದಿಹಳ್ಳಿ ಹಣಝಗಿ ಯಲಗೋಡ್ ಸೈದಾಪುರ್ ಸುಮಾರು 72 ಹಳ್ಳಿಗಳಲ್ಲಿ ತಮ್ಮದೇ ಶೈಲಿಯಲ್ಲಿ ಕಾಲ್ನಡಿಗೆ ಮುಖಾಂತರ ಪ್ರಚಾರ ಕಾರ್ಯ ಆರಂಬಿಸಿದ್ದಾರೆ ಅಲ್ಪಾ ಆಮಿಷಗಳಿಗೆ ಬಲಿಯಾಗಬೇಡಿ ಬಲಿಯಾಗಿ ನಿಮ್ಮ ಹಕ್ಕುಗಳು ಮಾರಿಕೊಂಡು ನಿರಾಶ್ರಿತರಾಗಬೇಡಿ ಸ್ವಾಭಿಮಾನದಿಂದ ಮತ ಚಲಾಯಿಸಿ ಯಾರಿಗೂ ಹೆದರಿಕೊಳ್ಳಬೇಡಿ ನಿಮ್ಮ ಜೊತೆ ಯಾವಾಗಲೂ ನಾವಿರುತ್ತೇವೆ ನಮ್ಮನ್ನು ಒಂದು ಬಾರಿ ವಿಧಾನಸಭೆ ಚುನಾವಣೆಗೆ ಆಯ್ಕೆ ಮಾಡಿ ಆಶೀರ್ವಾದ ಮಾಡಿ ಎಂದು ಪಕ್ಷೇತರ ಅಭ್ಯರ್ಥಿ ವಿಜಯಕುಮಾರ್ ಜೆ ಮಲೇದ ಅವರು ತಾಲೂಕಿನ ಜನತೆಯಲ್ಲಿ ಮನವಿ ಮಾಡಿದ್ದಾರೆ.
