ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಂಧರಾಗದಿರಿ ! ಎಚ್ಚರವಹಿಸಿ ಮತ ಚಲಾಯಿಸಿ

ಮುಂದಾಳು ಎಂದರೆ ಯಾವುದೇ ನಿರೀಕ್ಷೆ ಭಯಸದೆ, ಕಿಂಚಿತ್ತೂ ಲಂಚ ಮುಟ್ಟದೆ , ಜನರ ಕಷ್ಟ ಸಂಕಷ್ಟಗಳನ್ನು ನಿರಂತರವಾಗಿ ಬಗೆಹರಿಸುತ್ತ, ಹಾಗೂ ತನ್ನ ತಿಂಗಳ ಸಂಬಳಕ್ಕಾಗಿ ಕೊನೆಯಲ್ಲಿ ಕಾಯುವ ಒಬ್ಬ ಸಾಮಾನ್ಯ ವ್ಯಕ್ತಿಯೇ ನಮ್ಮ ನಾಯಕನಗಿರಬೇಕು.

ನಮಗೆ ಎಂತಹ ನಾಯಕನ ಅಗತ್ಯವಿದೆ ಎಂದು ಜನರಿಗೆ ತಿಳಿ ಹೇಳುವ ಅಗತ್ಯವಿಲ್ಲ.
ಜನರಲ್ಲಿನ ಪ್ರತಿ ಭಾವನೆಗಳನ್ನು ತಮ್ಮ ಕಾರ್ಯ, ಕುಶಲತೆ , ಬಾಂಧವ್ಯ ಗಳಲ್ಲಿ ತೋರ್ಪಡಿಸಬೇಕು ಹೊರತು ಪಡಿಸಿ ಅವರು ನೀಡುವ ಮತದಲ್ಲಿ ಅಲ್ಲ!
ಪ್ರತ್ಯೇಕವಾಗಿ ಯಾವುದೇ ಪಕ್ಷದ ಬಗ್ಗೆ ನಾನು ಇಲ್ಲಿ ಮಾತನಾಡುತ್ತಿಲ್ಲ. ಆಯಾ ಆಯಾ ಪಕ್ಷಕ್ಕೆ ಅದರದ್ದೇ ಆದ ವ್ಯಾಪ್ತಿ ಇದೆ; ಜನರ ಬೆಂಬಲವಿದೆ.
ಜನರ ಆಯ್ಕೆ ಸರಿ, ನಮ್ಮವರು ಆಡಳಿತಕ್ಕೆ ಬರಬೇಕು ಎಂಬುದು ಆದರೆ ಎಲ್ಲಿ ಬರಬೇಕು, ಯಾಕೆ ಬರಬೇಕು , ಬಂದರೆ ಏನು ಸುಧಾರಣೆ ತರುತ್ತಾರೆ, ಯಾವ ಜಾಗದಲ್ಲಿ ಬರಬೇಕು ಎಂಬುದರ ಬಗ್ಗೆಯೂ ಅರಿವಿರಬೇಕು.

ವರ್ಷವೂ ಅದೇ ಮತ ಪ್ರಣಾಳಿಕೆ ಬಂದು ಮತ ಯಾಚಿಸಿ ತೆರಳುವಾಗ , ತವರಿಗೆ ಬಂದ ಮಗಳ ಕೂಡುವ ರೀತಿಯಲ್ಲಿ ಬೊಗಸೆ ತುಂಬಾ ಕುಕ್ಕರ್ , ಬಾಡೂಟ , ಒಂದಿಷ್ಟು ದುಡ್ಡು ಕೊಟ್ಟು ಜನರನ್ನು ಕುಶಿಪಡಿಸಿ ಹೊರಡುವರು ಅಂಧ ಭಕ್ತರು ಅವರ ಮಾಯಾಜಲಕ್ಕೆ ಬಲಿಯಾಗಿ 5 ವರ್ಷದ ತನಕ ಕಷ್ಟ ಅನುಭವಿಸುತ್ತಾರೆ.

ನಮ್ಮ ನಾಯಕನ ಆಯ್ಕೆ ಎಷ್ಟು ಮುಖ್ಯ ಪಾತ್ರವಹಿಸುತ್ತದೆ ಎಂದರೆ ಅದು ನಮ್ಮ ಮುಂದಿನ ದೇಶದ ಪಿಳಿಗೆಯನ್ನೆ ಬದಲಾಹಿಸುವ ಶಕ್ತಿ ಹೊಂದಿರುತ್ತದೆ .
ಒಬ್ಬ ಉತ್ತಮ ನಾಯಕನ ಆಯ್ಕೆ ನಮ್ಮ ಕೈ ಅಲ್ಲೇ ಇರುತ್ತದೆ .
ನಾಯಕನಲ್ಲಿರುವ ಗುಣ ಲಕ್ಷಣ, ಆ ಹೆಸರಿನ ಮುಂದಿರುವ ಉಪನಾಮ, ಯಾವ ಧರ್ಮ , ಜಾತಿ , ಎಲ್ಲವ ತಿಳಿಯುವ ಮುನ್ನ ಅಭ್ಯರ್ಥಿ ವಿದ್ಯವಂತನೆ, ಜನರ ಸಮಸ್ಯೆಗೆ ಪರಿಹಾರ ನೀಡುವನೆ ? ನಮ್ಮ ಸುತ್ತ ಮುತ್ತಲಿನ ಪರಿಸರದ ಬಗ್ಗೆ ಹೇಗೆ ಕಾಳಜಿ ವಹಿಸುವನು ಎಂದು ತಿಳಿಯೋಣ ನಾಯಕನ ಆಯ್ಕೆಯಲ್ಲಿ ಎಸ್ಟು ಸೂಕ್ಷ್ಮ ವಿದ್ದರು ಸಾಲದು.

ಯಾಕೆ ನಮಗೆ ಉತ್ತಮ ನಾಯಕನನ್ನು ಆರಿಸಲು ಸಾಧ್ಯವಾಗುತ್ತಿಲ್ಲ ?

45 % ಅಷ್ಟು ಜನರು ತನ್ನ ಮತವನ್ನು ಮಾರಿಕೊಂಡರೆ ಇನ್ನೂ ಉಳಿದ 55% ಮತದಾರರಿಗೆ ಸಮಾಜಕ್ಕೆ ಉತ್ತಮ ನಾಯಕನನ್ನು ಆರಿಸುವ ಜವಾಬ್ದಾರಿ ಇರುತ್ತದೆ.
ಆದರೆ ಬಡವರು ಅನಕ್ಷರಸ್ಥರು ಜಾತಿವಾದಿಗಳು ಇಂತವರು ತಮ್ಮ ಮತವನ್ನು ಮಾರಾಟ ಮಾಡುತ್ತಾರೆ. ಇದು ಸಮಾಜದ ದೃಷ್ಠಿಯಿಂದ ಒಳ್ಳೆಯ ನಾಯಕನನ್ನ ಆರಿಸಲು ಸಾಧ್ಯವಾಗದು.

ಎಲ್ಲರಿಗು ಅಧಿಕಾರ ಬೇಕು ಆದರೆ ಯಾರಿಗೂ ಸಮಾಜ ಅಥವಾ ದೇಶದ ಉದ್ದಾರದ ಬಗ್ಗೆ ಆಸಕ್ತಿ ಇಲ್ಲ ಜನರಿಗೆ ದುಡ್ಡು ಬೇಕು ನಾಯಕರಿಗೆ ಅಧಿಕಾರ ಬೇಕು.

ಇದು ಒಂದು ರೀತಿಯ ಸಮಸ್ಯೆ –
ಹತ್ತಾರು ರಾಜಕೀಯ ಪಕ್ಷಗಳ ಬೆಳೆದು ನಿಂತಿರುವಾಗ ಜನರಿಗೆ ಯಾರು ಒಳ್ಳೆಯವರು ಯಾರು ಕೇಟ್ಟವರು ಎoದು ಊಹಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ.

ಈತ ಒಳ್ಳೆಯ ವ್ಯಕ್ತಿ ಎoದು ವೋಟು ಹಾಕಿದ್ದಾರೆ ಅವನ್ನು ಕೊನೆಯಲ್ಲಿ ಸಮಾಜವನ್ನು ಕೊಳ್ಳೆ ಹೂಡೆಯದೆ ಬಿಡಲಾರ.
ಹೀಗಿರುವಾಗ ತಮ್ಮ ಮತವನ್ನು ಹಾಕಿದರೇನು ಬಿಟ್ಟರೇನು ಅನ್ನುವ ಹಾಗಾಗಿದೆ
.
ದುಡ್ಡಿಗಾಗಿ ಮತವನ್ನು ಹಾಕದೆ ಇದ್ದರು ನಮ್ಮ ಒಂದು ಓಟಿನಿಂದ ಕೆಟ್ಟವನನ್ನು ನಮ್ಮಿಂದ ಸೋಲಿಸಲು ಹಾದಿತೆ. ಎಂಬ ಕಲ್ಪನೆ ಜನರಲ್ಲಿ ಮೂಡುತ್ತದೆ.

ಕೊನೆಯದಾಗಿ
ಕೊಡೋರು ಕೊಡುತ್ತಾರೆ ತಗೊಂಡ್ರೆ ಆಯ್ತು ಎಂಬ ಮನಸ್ಥಿತಿ.

ನಮ್ಮ ಮುಂದಾಳು ಹೆಂಗೆರಬೇಕು ಆದರೆ –

  • ಮೊದಲಾಗಿ ನಾಯಕ ಮನುಷ್ಯನಾಗಿರಬೇಕು, ಹೆಚ್ಚಾಗಿ ಪ್ರಜೆಗಳ ಮನವಿ ಕೇಳುವ ಮನುಷ್ಯತ್ವ ಉಳ್ಳವನಾಗಿರಬೇಕು.
  • ಮತ ಪ್ರಣಾಳಿಕೆಗೆ ಬಂದು ನಾಯಕ ನಿಮ್ಮ ಮತ ನಮಗೆ ಹಾಕಿ ಎನ್ನುವ ಬದಲು ಅವರು ಮಾಡಿರುವ ಕೆಲಸವೇ ಪ್ರತಿ ಮನೆ ಮನೆಗಳಲ್ಲಿ ಮತಯಾಚಿಸಲಿ.
  • ಚುನಾವಣೆಯ ಹಿಂದಿನ ದಿವಸಗಳಲ್ಲಿ ರೋಡಿಗೆ ಟಾರು ಹಾಕಿಸಿ ಅಭಿವೃದ್ದಿ ಎನ್ನುವ ಹೆಸರಿಗೆ ನಾವೇ ಕಾರಣ ಎಂದು ತೋರುವ ನಾಯಕ ನಮಗೆ ಬೇಡ, ಬದಲಾಗಿ ನಿರುದ್ಯೋಗಿಗಳಿಗೆ ಉದ್ಯೋಗವಾಕಾಶ ತೊಡಗಿಸಿ ಜೀವನಕ್ಕೊಂದು ದಾರಿ ಮಾಡಿ ಕೊಡಲಿ.
  • ಸಾಲಮನ್ನ ಮಾಡುವ ನಾಯಕನಿಗಿಂತ, ರೈತರಿಗೆ ಯಾವುದೇ ಬೆಳೆದರೆ ಬೆಲೆ ಸಿಗುವುದು, ಬೆಳೆದ ಬೆಳೆಯನ್ನು ಎಲ್ಲಿ ಕೊಡಬೇಕು ಬೆಳೆಗಳನ್ನು ಪೋಷಿಸುವ ಹೊಸ ಹೊಸ ರೀತಿಯನ್ನು ಸೂಕ್ತ ಮಾರ್ಗದಲ್ಲಿ ಹೇಳಿಕೊಡಲಿ.
    ಯುವ ಜನತೆಗೆ, ಪದವಿದರಿಗೆ, ವಿದ್ಯಾವಂತರಿಗೆ ಕಡಿಮೆ ಬಡ್ತಿಯಲ್ಲಿ ಸಾಲ ನೀಡಿ ಮುಂದೆ ಬರಲು ಅವಕಾಶ ಕಲ್ಪಿಸಿ ಕೊಡಲಿ ಈ ರೀತಿ ಮಾಡಿದಲ್ಲಿ ನಮ್ಮ ದೇಶ ಅಮೆರಿಕಾ ಆಗುವಲ್ಲಿ ಯಾವುದೇ ಸಂಶಯವಿಲ್ಲ.
  • ಪೋಸ್ಟರ್ ಆಗಲಿ ಬ್ಯಾನರ್ ಆಗಲಿ ಜನರ ಮನಸನ್ನು ಬದಲಾಯಿಸಲಾಗದು ನಾಯಕ ಮಾತು ಮತ್ತು ಅವರ ಕೆಲಸ ಜನರ ಕಣ್ಣಲ್ಲಿ ಬಿಂಬಿಸಬೇಕು.
  • ಜಾತಿ ಧರ್ಮವನ್ನು ಪ್ರೀತಿಸದೇ ಮಾನವ ಧರ್ಮ, ಕರ್ಮಗಳನ್ನು ಪ್ರೀತಿಸುವ ಸಮಾನರಾಗಿ ಕಾಣುವ ಸಾಮಾನ್ಯ ಅಭ್ಯರ್ಥಿಯಾಗಿರಲಿ.
  • ಕೊನೆಯದಾಗಿ ಮತ ಗೆಲ್ಲದೇ ಜನರ ಮನ ಗೆಲ್ಲುವ ನಾಯಕ ನಮಗಿರಲಿ.

ಪ್ರತಿಯೊಂದು ಮತಕ್ಕೂ ನಮ್ಮ ಮುಂದಿನ ಭವಿಷ್ಯವನ್ನು ನಿರ್ಧರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ನಮ್ಮ ಒಂದೊಂದು ಮತವು ಅತಿ ಅಮೂಲ್ಯವಾದದ್ದು ಪೋಲು ಮಾಡದೆ,
ಯೋಚಿಸಿ ಮತ ಚಲಾಯಿಸಿ.

  • ರಕ್ಷಿತ್ ಆರ್.ಪಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ