ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದ ಜ್ಞಾನ ಭಾರತಿ ಪ್ರೌಢ ಶಾಲೆ ಪ್ರತಿ ಶತ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಪಡೆದಿದ್ದು ಅದೇ ರೀತಿ ಇಡೀ ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿಗೆ ಶಾಲೆಯ ವಿದ್ಯಾರ್ಥಿನಿ ಕುಮಾರಿ ರಜಿಯಾ ಸುಲ್ತಾನ್ ಹಾಜಿಮಲಂಗ ಎನ್ನುವ ವಿದ್ಯಾರ್ಥಿನಿ 625 ಅಂಕಗಳಿಗೆ 621 ಅಂಕಗಳನ್ನು ಪಡೆದು ಪ್ರತಿಶತ 100% ಕ್ಕೆ 99.36% ಗಳಿಸಿ ಶಾಲೆಗೆ ಮತ್ತು ತಂದೆ- ತಾಯಿಗೆ ಹಾಗೂ ಸಮಸ್ತ ಯಡ್ರಾಮಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾಳೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಜಿ ಎಸ್ ಬಿರೆದಾರ ಮತ್ತು ಮುಖ್ಯ ಶಿಕ್ಷಕಿಯರಾದ ಅಕ್ಕ ಮಹಾದೇವಿ ಜಿ ಬಿರೆದಾರ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಹರ್ಷವನ್ನು ವ್ಯಕ್ತಪಡಿಸಿದರು.
ವರದಿ:ಚಂದ್ರಶೇಖರ ಎಸ್ ಪಾಟೀಲ್ ಗುಡೂರ(ಎಸ್.ಎನ್)