ಕೊಪ್ಪಳದಲ್ಲಿ: ಜಿಂಕೆ ಪಾರ್ಕ್ ಮಾಡಲು ಏನೆಲ್ಲಾ ಹರಸಾಹಸ ಪಟ್ಟು ರೈತ ಸಂಘದಿಂದ 2005 ರಿಂದ ಹೋರಾಟ ಮಾಡುತ್ತಾ ಬಂದರೂ ಕೂಡಾ ಯಾರೊಬ್ಬರು ಮುಖ್ಯಮಂತ್ರಿಗಳು ಜನಪ್ರತಿನಿಧಿಗಳು ಯಾವುದೇ ರೀತಿಯಿಂದಲೂ ಕೊಪ್ಪಳ ಜಿಲ್ಲೆಯ ರೈತರಿಗೆ ಒಂದು ಜಿಂಕೆ ಪಾರ್ಕ್ ನಿರ್ಮಾಣ ಮಾಡಿಲ್ಲ ಈಗಲಾದರೂ ಕಾಲಮಿಂಚಿಲ್ಲ ಈಗ ರಚನೆಯಾಗುವ ಸರ್ಕಾರವಾದರೂ
ಜಿಂಕೆ ಪಾರ್ಕ್ ನಿರ್ಮಿಸಿಕೊಡಲಿ
2023ನೇ ವಿಧಾನಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ನೂತನ ಮುಖ್ಯಮಂತ್ರಿ ರಚನೆಯಾಗುವ ಯಾರೆ ಇರಲಿ ಕೊಪ್ಪಳ ಜಿಲ್ಲೆಯಲ್ಲಿ ಒಂದು ಜಿಂಕೆ ಪಾರ್ಕ್ ನಿರ್ಮಾಣ ಮಾಡಿಕೊಡಬೇಕೆಂದು
ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರು ಆಗ್ರಹಿಸಿದರು
ಹೌದು ಉತ್ತರ ಕರ್ನಾಟಕದಲ್ಲಿ ಜಿಂಕೆ ಹಾವಳಿ ಇರೋದು ಕೊಪ್ಪಳ,ರಾಯಚೂರು,ಗದಗ,ಬಳ್ಳಾರಿ,ಹಾವೇರಿ, ಧಾರವಾಡ,ಬಾಗಲಕೋಟೆ,ಬೀದರ್ ಎಂಟು ಜಿಲ್ಲೆಗಳಲ್ಲಿ ರೈತರು ಜಿಂಕೆ ಕಾಟಕ್ಕೆ ಬೇಸತ್ತು 18 ವರ್ಷ ಕಳೆದರೂ ಕೂಡಾ ಯಾವ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ಜಿಂಕೆ ಪಾರ್ಕ್ ನಿರ್ಮಾಣ ಮಾಡಿಕೊಡಲು ಯಾರು ಮುಂದೆ ಬರಲಿಲ್ಲ ಈಗಲಾದರೂ ಕಾಲಮಿಂಚಿಲ್ಲ ಈಗ ನೂತನ ಮುಖ್ಯಮಂತ್ರಿ ರಚನೆಯಾಗುವ ಸರ್ಕಾರ ಕೊಪ್ಪಳದಲ್ಲಿ ಜಿಂಕೆ ಪಾರ್ಕ್ ನಿರ್ಮಾಣ ಮಾಡಿಕೊಡಬೇಕೆಂದು
ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಬಸವರಾಜ ಹೂಗಾರ ಇವರು ಆಗ್ರಹಿಸಿದರು
ಈ ವೇಳೆಯಲ್ಲಿ ರೈತರಿಗೆ ಜಿಂಕೆ ಹಾವಳಿ ತಪ್ಪಿಸಲು ಈ ಹಿಂದಿನ ಚುಣಾವಣೆಯಲ್ಲಿ ತಟ್ಟಸ್ಥ ಮತದಾನ ಮಾಡಿದ್ದೇವೆ
2010ರಲ್ಲಿ ಗದಗ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮೂಲಕ ಜಿಂಕೆ ಬುಕ್ಕು ಬಿಡುಗಡೆ ಮಾಡಿದ್ದೇವೆ
ನಂತರ 2016.ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಹಾಗೂ ಸಚಿವ ಬಸವರಾಜ ರಾಯರಡ್ಡಿ ಹಾಗೂ ಅರಣ್ಯ ಸಚಿವರಿಗೆ.2016. ಜುಲೈ 15ರಿಂದ.ಆಗಸ್ಟ್ 15.ರವರಿಗೆ ಒಂದು ತಿಂಗಳಕಾಲ ಜಿಂಕೆ ಪಾರ್ಕ್ ಮಾಡಲು ಪತ್ರ ಚಳುವಳಿ ಮಾಡಿದ್ದು ಅಲ್ಲದೇ ಜೊತೆಗೆ ಎಸ್ಎಂಎಸ್ ಚಳವಳಿ ಮಾಡಿದ್ದೇವೆ
ನಂತರ 2017ರಲ್ಲಿ ಜಿಂಕೆ ಕಾಟ ರೈತರ ಪರದಾಟ ಎಂಬ 21.ನಿಮಿಷದ ಸಾಕ್ಷ್ಯ ಚಿತ್ರದ ಸಿಡಿ ಬಿಡುಗಡೆ ಮಾಡಿ ವಿಧಾನ ಸೌಧದಲ್ಲಿ ಜನಪ್ರತಿನಿಧಿಗಳ ಗಮನ ಸೆಳೆದರೂ ಕೂಡಾ ಯಾವ ಸರ್ಕಾರನೂ ಜಿಂಕೆ ಪಾರ್ಕ್ ನಿರ್ಮಾಣ ಮಾಡಿ ಕೊಡಲಿಲ್ಲ ಎಂದು ರೈತ ಮುಖಂಡ ಮಹೇಶಪ್ಪ ಹಡಪದ್ ಇವರು ಆಗ್ರಸಿದರು
ಈ ಸಂದರ್ಭದಲ್ಲಿ ರೈತ ಸಂಘದ
ಪದಾಧಿಕಾರಿಗಳಾದ ಗದಗ ಜಿಲ್ಲೆಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಯಲ್ಲಪ್ಪ ಬಾಬರಿ ಯರೇಹಂಚಿನಾಳ ಗ್ರಾಮ ಘಟಕ ಅಧ್ಯಕ್ಷ ಬಸವರಾಜ ಕಮತರ.ರವಿ.ಕಮತರ.ಚನ್ನಪ್ಪ ನಾಲವಾಡ.ರವಿ.ಹೊಸಮನಿ.ಕಿರಣ ಸೀಳಿನ್. ರಾಜಪ್ಪ ಮಡಿವಾಳರ.ಫಕ್ಕಿರಪ್ಪ ಸೋಂಪೂರ.ಬಸವಣ್ಣಪ್ಪ ಕುರಿ.ಮಾರುತಿ ನೆರಗಲ್.ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.