ಕಾರಟಗಿ : ಪುರಸಭೆಯಲ್ಲಿ ಮರುಬಳಕೆ ವಸ್ತುಗಳ ಸಂಗ್ರಹಣ ಕೇಂದ್ರವನ್ನು ತೆರೆಲಾಗಿದ್ದು, ಮರುಬಳಕೆ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಆರ್.ಆರ್. ಆರ್ ಕೇಂದ್ರಕ್ಕೆ ನೀಡುವಂತೆ ಪುರಸಭೆಯ ಮುಖ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದಂತೆ ಪುರಸಭೆಯಲ್ಲಿ ಎಸ್ ಬಿ ಎಂ ಯೋಜನೆಯಡಿಯಲ್ಲಿ “ಮೇರಿ ಲೈಫ್ ಮೇರಿ ಸ್ವಚ್ಛ ಶೆಹರ್” ಅಂದರೆ ನನ್ನ ಜೀವನ ನಮ್ಮ ಸ್ವಚ್ಛ ಸುಂದರ ನಗರ ಕಾರ್ಯಕ್ರಮದಡಿ ಪಟ್ಟಣದ ಸಾರ್ವಜನಿಕರು ತಮ್ಮ ಮನೆ ಮತ್ತು ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಅಂದರೆ ಆರ್ ಆರ್ ಆರ್
(ರೀಡಸ್ ರಿಯೂಸ್ ಮತ್ತು ರೀಸೈಕಲ್) ಆಗುವಂತ ವಸ್ತುಗಳಾದ ಬಳಕೆಯಾದ ಪ್ಲಾಸ್ಟಿಕ್ ಹಳೆಬುಕ್ ಎಲೆಕ್ಟ್ರಿಕ್ ಸಾಮಾನುಗಳನ್ನು, ಹಳೆಬಟ್ಟೆ,ಗೊಂಬೆಗಳನ್ನು,ನ್ಯೂಸ್ ಪೇಪರ್ ಮತ್ತು ಉಪಯೋಗಕ್ಕೆ ಬಾರದ ಚಪ್ಪಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು.
ಇವುಗಳ ಕಲಕ್ಷನ್ ಸಂಗ್ರಹ ಕೇಂದ್ರವನ್ನು 15ನೇ ವಾರ್ಡ್ ವಾಸವಿ ನಗರ ಮತ್ತು 20ನೇ ವಾರ್ಡ್ ಶಿವನಗರ ಯಲ್ಲಿ ತೆರೆಯಲಾಗಿದೆ.
ಎಲ್ಲಾ ಸಾರ್ವಜನಿಕರು ಮರುಬಳಕೆ ವಸ್ತುಗಳನ್ನು ಪುರಸಭೆ ಕಚೇರಿಯಲ್ಲಿನ ಆರ್ ಆರ್ ಆರ್ ಸಂಗ್ರಹಣ ಕೇಂದ್ರಕ್ಕೆ ತಂದು ಕೊಡಬೇಕು ಹೆಚ್ಚಿನ ಮಾಹಿತಿಗಾಗಿ ಈ ಕಚೇರಿಯ ಆರೋಗ್ಯ ನಿರೀಕ್ಷಕರನ್ನು ಸಂಪರ್ಕಿಸುವಹುದಾಗಿದೆ ಎಂದು ಕಾರಟಗಿ ಪುರಸಭೆಯ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.