ಕಲ್ಬುರ್ಗಿ: ಕಲ್ಯಾಣ ಕರ್ನಾಟಕ ಭಾಗದ ಏಳು ಶಾಸಕರಲ್ಲಿ ಯಾರಿಗೆ ಸಿಗಲಿದೆ ಸಚಿವ ಸ್ಥಾನ ಜಿಲ್ಲೆಗೆ ಕನಿಷ್ಠ ಅಂದ್ರು 2 ರಿಂದ 3 ಸ್ಥಾನಗಳು ಸಿಗಬಹುದು. ಸಿಕ್ಕರೂ ಯಾರಿಗೆ ಸಿಗಲಿದೆ ಎಂಬುವುದೇ ಯಕ್ಷಪ್ರಶ್ನೆ ಯಾಗಿದೆ.
ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾಗ ಆರಂಭದಲ್ಲಿ ದಿ.ಖಮರುಲ್ ಇಸ್ಲಾಂ, ಬಾಬುರಾವ್ ಚಿಂಚನಸೂರ್,ಅವರಿಗೆ ಸಚಿವ ಸ್ಥಾನ ಕೊಟ್ಟಿದರು ನಂತರ ಅವರ ಇಬ್ಬರಿಗೂ ತೆಗೆದು ಹಾಕಿ ಮಲ್ಲಿಕಾರ್ಜುನ ಖರ್ಗೆಯವರ ಮಗ ಪ್ರಿಯಾಂಕ್ ಖರ್ಗೆ ಮತ್ತು ಶರಣಪ್ರಕಾಶ ಪಾಟೀಲ್ ಇವರಿಗೆ ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು ಆರಂಭದಲ್ಲೇ ಸಾಕಷ್ಟು ಅಸಮಾಧಾನ ವ್ಯಕ್ತವಾಯಿತು.ಆ ಪರಿಣಾಮದಿಂದಲೇ ಬಾಬುರಾವ್ ಚಿಂಚನಸೂರ್,ಮಾಲಿಕಯ್ಯ ಗುತ್ತೇದಾರ್, ಡಾ|| ಎಂ.ಬಿ.ಮಲಕರಡ್ಡಿ ಮುಂತಾದವರು ಕಾಂಗ್ರೆಸ್ ಪಕ್ಷ ತೊರೆದು ಹೊಸ ಮುಖಗಳನ್ನು
ಸಂಪುಟಕ್ಕೆ ಸೇರಿಸಿಕೊಂಡಾಗಲೇ ಸಿದ್ದರಾಮಯ್ಯ ಹಿಂದೆ ಆದ ಅವಮಾನಗಳೇ ಮತ್ತೇ ಎದುರಿಸಬೇಕಾಗುತ್ತದೆ.
ಈಗಿನ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಜನವಿರೋಧಿ ಕೆಲಸ ಮಾಡಿದ್ದರಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಗನಿಗೆ ಸಂಪುಟಕ್ಕೆ ಸೇರಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಕಂಡು ಬರುತ್ತವೆ ಆದರೆ ಅವರ ಆತ್ಮೀಯ ಗೆಳೆಯ ಧರ್ಮಸಿಂಗ್ ಮಗನಿಗೆ ಕೊಡುತ್ತಾರೋ ಇಲ್ಲವೇ ಅವರ ಮಗ ಪ್ರಿಯಾಂಕ್ ಖರ್ಗೆ ಕೊಡಿಸುತ್ತಾರೆಯೇ ಕಾದು ನೋಡಬೇಕಾಗಿದೆ. ಅದೇ ರೀತಿ ಲಿಂಗಾಯತ ಸಮುದಾಯದವರು ಪೈಪೋಟಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿದೆ.ಸೇಡಂ ತಾಲೂಕಿನ ಡಾ|| ಶರಣಪ್ರಕಾಶ ಪಾಟೀಲ್,ಆಳಂದದ ಬಿ.ಆರ್.ಪಾಟೀಲ್, ಅಫಜಲಪುರದ ಎಂ.ವೈ.ಪಾಟೀಲ್, ದಕ್ಷಿಣ ವಿಧಾನಸಭಾ ಕ್ಷೇತ್ರದ ಅಲ್ಲಮಪ್ರಭು ಪಾಟೀಲ್, ಇವರು ಸಹ ಸಂಪುಟಕ್ಕೆ ಸೇರಲು ಪ್ರಯತ್ನಿಸುತ್ತಿದ್ದಾರೆ. ಭಾಲ್ಕಿ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಇವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕರೆ ಜಿಲ್ಲೆಯ ಲಿಂಗಾಯತ ಸಮುದಾಯದವರಿಗೆ ಪ್ರಾತಿನಿಧ್ಯ ಸಿಗುವುದು ಅನುಮಾನವೆಂದು ಹೇಳಲಾಗುತ್ತದೆ.
ಜೇವರ್ಗಿ ಕ್ಷೇತ್ರದ ಶಾಸಕ ಅಜೇಯ್ ಸಿಂಗ್ ಅವರು ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿನ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಬೇಕಿತ್ತು. ಆದಾಗ್ಯೂ ಅವರಿಗೆ ಸಂಪುಟದಲ್ಲಿ ಸೇರಿಸಿಕೊಳ್ಳಲ್ಲಿಲ್ಲ.
ಕಲ್ಬುರ್ಗಿ ಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ ಅವರಗೂ ಸಹ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯ ಕೇಳಿಬರುತ್ತಿದೆ.ಒಂದು ವೇಳೆ ಬೀದರ್ ನ ಕೆ.ರಹೀಮಾನಖಾನ್ ಅವರಿಗೆ ಸಚಿವ ಸ್ಥಾನ ಕೊಟ್ಟರೆ ಖನೀಜ್ ಫಾತಿಮಾ ಅವರು ಸಂಪುಟಕ್ಕೆ ಸೇರುವುದು ಕಷ್ಟವಾಗುತ್ತದೆ ಎಂದು ಹೇಳಲಾಗುತ್ತಿದೆ.
ಆಳಂದ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ಬಿ.ಆರ್.ಪಾಟಿಲ್ ಹಾಗೂ ಅಫಜಲಪುರದ ಕ್ಷೇತ್ರದಿಂದ ಆಯ್ಕೆಯಾಗಿರುವ ಹಿರಿಯ ಶಾಸಕ ಎಂ.ವೈ. ಪಾಟೀಲ್ ಅವರಿಗೂ ಸಹ ಸಚಿವ ಸ್ಥಾನ ಕೊಡಬೇಕೆಂಬ ಕೂಗು ಕೇಳಿ ಬರುತ್ತಿದೆ.ಹಾಗೆ ನೋಡಿದರೆ ಅಫಜಲಪುರ ಕ್ಷೇತ್ರದಲ್ಲಿ ಸ್ಪರ್ಧಿಸಲು ಎಂ.ವೈ.ಪಾಟೀಲ್ ಅವರು ನಿರಾಕರಿಸಿದ್ದಾರೆ ಹೊಸಬರಿಗೆ ಟಿಕೆಟ್ ಕೊಡಬೇಕು ಎಂದು ಹೇಳಿದರು.
ಹಾಗಾಗಿ ಅರ್ಜಿ ಸಹ ಅವರು ಹಾಕಿರಲಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಇಚ್ಚಾಶಕ್ತಿಯಿಂದಾಗಿ ಎಂ.ವೈ.ಪಾಟೀಲ್ ಅವರು ಸ್ಪರ್ಧಿಸಬೇಕಾಯಿತ್ತು ಅದರಂತೆ ಆಯ್ಕೆಯೂ ಸಹ ಆಗಿದ್ದಾರೆ. ಹೀಗಾಗಿ ಹಿರಿಯ ಶಾಸಕನಿಗೆ ಕೊನೆಯ ಅವಧಿಯಲ್ಲಿ ಸಚಿವ ಸ್ಥಾನ ಕೊಟ್ಟರೂ ಸಹ ಅಚ್ಚರಿಯೇನಿಲ್ಲ.
ಆಳಂದ ಶಾಸಕ ಸಿ.ಆರ್.ಪಾಟೀಲ್ ಅವರು ಈ ಹಿಂದೆ ಉಪ ಸಭಾಪತಿಯಾಗಿ ಕಾರ್ಯನಿರ್ವಹಿಸಿದರು. ಹಾಗೂ ಮೂರು ಬಾರಿ ಶಾಸಕರಾದವರು ಈಗ ಅವರಿಗೆ ಸಚಿವ ಸಂಪುಟದೂ ಸೇರಿಸಿಕೊಳ್ಳಬೇಕು ಎಂಬ ಬಹುದೊಡ್ಡ ಬೇಡಿಕೆಯೂ ಸಹ ಕಾಂಗ್ರೆಸ್ ವರಿಷ್ಠರಿಗೆದೆ. ಹೀಗಾಗಿ ಇಬ್ಬರಲ್ಲಿ ಒಬ್ಬರಿಗೆ ಸಂಪುಟಕ್ಕೆ ಸೇರಿಸಿಕೊಳ್ಳವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಗೆಲುವು ಅತ್ಯಂತ ಐತಿಹಾಸಿಕ ಗೆಲುವು ಬಿಜೆಪಿ ಪ್ರಬಲ ಎದುರಾಳಿ ದತ್ತಾತ್ರೇಯ ಪಾಟೀಲ್ ರೇವೂರ ಕುಟುಂಬದ ಹಿಡಿತವನ್ನು ತಪ್ಪಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೇಲೆ ಒಲವು ಹೊಂದಿದ್ದಾರೆ.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ