ಹನೂರು:ಕಾಂಚಳ್ಳಿ ಗ್ರಾಮದ ಬಸವರಾಜು ಬಿನ್ ಇರಸೆಗೌಡರಿಗೆ ಸೇರಿದ ಸರ್ವೆ ನಂ 439 ರಲ್ಲಿ ಭಾರಿ ಮಳೆ ಬಿರುಗಾಳಿ ಸಹಿತ ಬಿದ್ದ ಕಾರಣ ಕೈಗೆ ಬಂದ ತುತ್ತು ಬಾಗಿಗೆ ಬರಲಿಲ್ಲವೆಂದು ರೈತ ಮುಖಂಡ ಬಸವರಾಜು ಕಾಂಚಳ್ಳಿ ರೈತರ ನೊವನ್ನು ತೋಡಿಕೊಂಡರು.
ಹನೂರು ತಾಲ್ಲೂಕಿನ ಸೂಳೆರಿ ಗ್ರಾಮ ಪಂಚಾಯತಿಯ ಕಾಂಚಳ್ಳಿಗ್ರಾಮದ ಜಮಿನೊಂದರಲ್ಲಿ ತಡ ರಾತ್ರಿ ಸುರಿದ ಭಾರಿ ಮಳೆಗೆ ಸುಮಾರು ಅಂದಾಜು ವೆಚ್ಚ ಎರಡು ಲಕ್ಷದ ಆದಾಯಕ್ಕೆ ಕೊಡಲಿ ಪೆಟ್ಟು ಬಿದ್ದಾಂತಾಗಿದೆ ಅಲ್ಲದೆ ನಾವು ಹಾಕಿದ್ದ ಅಸಲು ಸಹ ನಮ್ಮ ಕೈಗೆ ಸಿಗುವುದಿಲ್ಲ. ಸಂಬಂದಪಟ್ಟ ಅಧಿಕಾರಿಗಳು ಕೂಡಲೆ ಪರಿಹಾರ ನೀಡಬೇಕಾಗಿದೆ ಎಂದು ರೈತ ಮುಖಂಡ ಬಸವರಾಜು ಕಾಂಚಳ್ಳಿ ತಿಳಿಸಿದರು.
ವರದಿ:ಉಸ್ಮಾನ್ ಖಾನ್
