ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಇಂದು ಕೂಲಿಕಾರರಿಗೆ ಗ್ರಾಮ ಆರೋಗ್ಯ ಯೋಜನೆ ಅಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು ಈ ಸಂಧರ್ಭದಲ್ಲಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಣಿಕ್ಯಂ ನೆರೆದಿದ್ದ ಜನರಿಗೆ ಸ್ವಾಗತ ಭಾಷಣ ಮಾಡಿದರು ನಂತರ ಗ್ರಾಮಪಂಚಾಯಿತಿ ಸದಸ್ಯರಾದ ಶಾಹುಲ್ ಅಹಮದ್ ಮಾತನಾಡಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇರಬೇಕು ಆರೋಗ್ಯವೇ ಭಾಗ್ಯ ಹಳೆಯ ಕಾಲದ ಜನರು ಸುಮಾರು 80 ವರ್ಷದ ವಯಸು ಇದ್ದರು ಸಹ ಯಾವುದೇ ರೀತಿಯಾದ ಮಧುಮೇಹ ರಕ್ತದೊತ್ತಡ ಮುಂದಾದ ಕಾಯಿಲೆಗಳು ಬರುತ್ತಿರಲಿಲ್ಲ ಆದರೆ ಇಂದಿನ ದಿನಗಳಲ್ಲಿ ಸಣ್ಣ ಸಣ್ಣ ವಯಸ್ಸಿನವರಿಗೂ ಸಹ ಮಧುಮೇಹ ಹಾಗೂ ರಕ್ತದೊತ್ತಡ ದಂತಹ ಕಾಯಿಲೆಗಳು ತಂಡವಾಡುತ್ತಿದೆ ಆದ್ದರಿಂದ ಗ್ರಾಮದ ಜನತೆ ಇಂತಹ ಉಚಿತ ತಪಾಸಣಾ ಶಿಬಿರಗಳಲ್ಲಿ ತಮ್ಮ ಆರೋಗ್ಯವನ್ನು ಪರಿಶೀಲಿಸಿಕೊಂಡು ಉತ್ತಮವಾದ ಜೀವನವನ್ನು ನಡೆಸಿಕೊಂಡು ಹೋಗಬೇಕು ಎಂದರು.
ನಂತರ ಮಾತನಾಡಿದ ಪಂಚಾಯತಿ ಸದಸ್ಯರಾದ ನಾಗರಾಜು ಇಲ್ಲಿ ಹಳ್ಳಿಗಳಲ್ಲಿ ಹೆಚ್ಚು ಹೆಚ್ಚು ಹಣವನ್ನು ಖರ್ಚು ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ತೋರಿಸಿಕೊಂಡು ಆರೋಗ್ಯವಾಗಿರಲು ಬಡತನದ ಕಾರಣ ಇರುವುದರಿಂದ ಪಂಚಾಯತಿ ವತಿಯಿಂದ ಇಂತಹ ಉಚಿತ ತಪಾಸಣಾ ಶಿಬಿರಗಳಲ್ಲಿ ತಮ್ಮ ಆರೋಗ್ಯವನ್ನು ಪರಿಶೀಲಿಸಿಕೊಂಡು ಆರೋಗ್ಯವಾಗಿ ಸದೃಢವಾಗಿ ಗ್ರಾಮದ ಜನತೆ ಇರಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಾಹುಲ್ ಅಹಮದ್,ಗ್ರಾಮಪಂಚಾಯಿತಿ ಸದಸ್ಯ ನಾಗರಾಜು,ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಾಣಿಕ್ಯಂ,ಗ್ರಾಮದ ಜನತೆ ಹಿರಿಯರು ಮುಖಂಡರು ಉಪಸ್ಥಿತರಿದ್ದರು.
ವರದಿ-ಉಸ್ಮಾನ್ ಖಾನ್,ಬಂಡಳ್ಳಿ