ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಕೈಗಾರಿಕಾ ಘಟಕ ಸ್ಥಾಪಿಸಬೇಕು ಜೇವರ್ಗಿ ತಾಲೂಕಿನ ಯುವಕರು ಬೇರೆ ಕಡೆಗೆ ಗುಳೆ ಹೋಗುವುದನ್ನು ತಪ್ಪಿಸಬೇಕು ಜೇವರ್ಗಿ ತಾಲೂಕಿನಲ್ಲಿ ಲಕ್ಷಾಂತರ ನಿರುದ್ಯೋಗಿಗಳು ಇದ್ದಾರೆ ಅವರಿಗೆ ಉದ್ಯೋಗ ನೀಡಬೇಕಾದರೆ ನಮ್ಮ ತಾಲೂಕಿನಲ್ಲಿ ಕೈಗಾರಿಕೆ ಘಟಕ ಸ್ಥಾಪಿಸಬೇಕು ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ ಉದ್ಯೋಗಸ್ಥರನ್ನಾಗಿ ಮಾಡಬಹುದು ಆದ್ದರಿಂದ ತಾಲೂಕಿನ ಪ್ರಭಾವಿ ಮುಖಂಡರು ಶಾಸಕರು ಪ್ರಜ್ಞಾವಂತ ನಾಗರಿಕರು ಸಮಾಜ ಚಿಂತಕರು ತಾಲೂಕಿನ ಅಭಿವೃದ್ಧಿ ಕಡೆ ಗಮನ ಕೊಡುವುದು ಸೂಕ್ತ ಇದುವರೆಗೂ ನಮ್ಮ ತಾಲೂಕಿನಿಂದ ಶಾಸಕರಾಗಿದ್ದಾರೆ,ಸಚಿವರಾಗಿದ್ದಾರೆ ಆದರೆ ನಮ್ಮ ತಾಲೂಕನ್ನು ಯಾವುದೇ ರೀತಿಯಿಂದ ಅಭಿವೃದ್ಧಿ ಆಗಿಲ್ಲ ನಮ್ಮ ತಾಲೂಕು ಅಭಿವೃದ್ಧಿ ಆಗಬೇಕಾದರೆ ಮೊದಲು ನಿರುದ್ಯೋಗ ನಿವಾರಣೆ ಮಾಡಬೇಕು ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಅದು ತಾಲೂಕಿನ ಶಾಸಕರು ಗಮನಹರಿಸಬೇಕು ನಮ್ಮ ಜೇವರ್ಗಿ ತಾಲೂಕು ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಅಳಿಸಿ ಹಾಕಬೇಕು ಎಂದು ಆರ್‌ಟಿಐ ಹೋರಾಟಗಾರ ಪರಶುರಾಮ್ ದಂಡಗುಲ್ಕರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
