ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ನೀರಾವರಿ ಇಲಾಖೆ ಆವರಣದಲ್ಲಿ ಇಂದು ವನಸಿರಿ ಫೌಂಡೇಶನ್(ರಿ.) ರಾಜ್ಯ ಘಟಕ ರಾಯಚೂರು ವತಿಯಿಂದ ಅಮರ ಶ್ರೀ ಆಲದ ಮರದ ವಾರ್ಷಿಕೋತ್ಸವ ಹಾಗೂ ಹುಟ್ಟು ಹಬ್ಬದ ಸಮಾರಂಭವನ್ನು ಪೂಜ್ಯ ಶ್ರೀ ಸದಾನಂದ ಶರಣರು ಹಾಗೂ ಅಮರೇಶ ಸ್ವಾಮಿ ಶರಣರು ಗೌಡನಬಾವಿ ಹಾಗೂ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರಾಜ್ಯ ಕಾರ್ಯದರ್ಶಿ ಶರಣೇಗೌಡ ಹಡಗಿನಾಳ ಅವರು ಮಾತನಾಡಿ ಪ್ರಕೃತಿಮಾತೆಯನ್ನು ನಾವು ಉಳಿಸಿ ಬೆಳಸಿದರೆ ಪ್ರಕೃತಿ ನಮ್ಮನ್ನು ಉಳಿಸುತ್ತಾಳೆ,ಗಿಡಮರಗಳಿಗೂ ಜೀವವಿದೆ ಎಂಬುದನ್ನು ನಮ್ಮ ವನಸಿರಿ ತಂಡ ಈ ಆಲದ ಮರವನ್ನು ಪೋಷಣೆ ಮಾಡುವ ಮೂಲಕ ತೋರಿಸಿದ್ದಾರೆ.ಇಂದಿಗೆ ಈ ಮರ ನೆಟ್ಟು ಒಂದು ವರ್ಷ ಕಳೆದಿದೆ ಅದರ ಸವಿನೆನಪಿಗಾಗಿ ವಾರ್ಷಿಕೋತ್ಸವ ಮಾಡುತ್ತಿದ್ದೇವೆ ನಮ್ಮ ಜೀವನದಲ್ಲಿ ಅತಿಮುಖ್ಯ,ನಾವು ಉಸಿರಾಡಬೇಕಾದರೆ ಗಾಳಿ ಅತಿಅವಶ್ಯಕ,ಗಿಡಮರಗಳನ್ನು ಬೆಳಸುವುದರಿಂದ ಮಾತ್ರ ನಾವು ಶುದ್ಧವಾದ ಗಾಳಿ ಪಡೆಯಲು ಸಾಧ್ಯ ಆದ್ದರಿಂದ ಪ್ರಕೃತಿಯನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ವನಸಿರಿ ಫೌಂಡೇಶನ್ ಜೊತೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಂಗಾರಿಕ್ಯಾಂಪ್ ಪರಮ ಪೂಜ್ಯ ಶ್ರೀ ಸದಾನಂದ ಶರಣರು ಮಾತನಾಡಿ ಈ ಜಗತ್ತಿನಲ್ಲಿ ಹುಟ್ಟು ಹಬ್ಬಗಳನ್ನು ಮನುಷ್ಯರಾದ ನಾವುಗಳು ಆಚರಿಸಿಕೊಳ್ಳುವುದೇ ಹೊರತು ಬೇರೇ ಯಾರೂ ಆಚರಿಸುಕೊಳ್ಳುವುದಿಲ್ಲ ಇಂತಹ ಸಂದರ್ಭದಲ್ಲಿ ನಮ್ಮ ಸಿಂಧನೂರು ನಗರದಲ್ಲಿ 30 ವರ್ಷದ ಹಿಂದಿನ ಬುಡಸಮೇತ ಕಿತ್ತು ಹಾಕಿದ ಆಲದ ಮರವನ್ನು ನೆಟ್ಟು ತನ್ನ ಮಗುವಿನಂತೆ ಪೋಷಿಸಿ ಅದಕ್ಕೆ ಪರಮ ಪೂಜ್ಯರ ಆರ್ಶೀವಾದ ಪಡೆಸಿ ಅದಕ್ಕೊಂದು ನಾಮಕರಣ ಮಾಡಿ ಇಂದು ಆ ಆಲದಮರಕ್ಕೆ ಹುಟ್ಟು ಹಬ್ಬವನ್ನು ಕೂಡಾ ಆಚರಣೆ ಮಾಡಲು ವನಸಿರಿ ಅಮರೇಗೌಡ ಮಲ್ಲಾಪೂರ ಅವರ ಪರಿಶ್ರಮವೇ ಕಾರಣ ಅವರಿಗೆ ಗುರುವಿನ ಆರ್ಶೀವಾದ ಇದ್ದದ್ದರಿಂದಲೇ ಈ ಕಾರ್ಯವನ್ನು ಕೈಗೊಳ್ಳಲು ಸಹಾಯವಾಗಿದೆ ಆ ಗುರುವಿನ ಮತ್ತು ಪ್ರಕೃತಿ ಮಾತೆಯ ಆರ್ಶೀವಾದ ಸದಾಕಾಲವೂ ಇರಲಿ ಈ ಕಾರ್ಯ ಹೀಗೇ ಮುಂದುವರೆಯಲಿ ಎಂದು ಆರ್ಶೀವದಿಸಿದರು.
ಈ ಸಂದರ್ಭದಲ್ಲಿ ಬೆಳಗ್ಗೆ ಆಲದ ಮರಕ್ಕೆ ಮಹಿಳಾ ಘಟಕದ ವತಿಯಿಂದ ರಂಗೋಲಿ ಹಾಗೂ ಹೂವಿನ ಮೂಲಕ ಅಲಂಕಾರ ಹಾಗೂ ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ನಂತರ ಪೂಜ್ಯರಿಂದ ಆಲದ ಮರಕ್ಕೆ ವಿಶೇಷ ಪೂಜೆ ಮಾಡಲಾಯಿತು ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಬ್ರಮಿಸಲಾಯಿತು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಪರಿಸರ ಪ್ರೇಮಿಗಳಿಗೆ ಬಾಳೆಹಣ್ಣುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಂಗಾರಿ ಕ್ಯಾಂಪ್ ಸದಾನಂದ ಶರಣರು,ವನಸಿರಿ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ,ಶಿವನಗೌಡ ಗೊರೆಬಾಳ, ಶಾರದ ಮಹಿಳಾ ಸಂಸ್ಥೆಯ ಅದ್ಯಕ್ಷರು ವಿಜಯಕುಮಾರ,ಶ್ರೀಮತಿ ದ್ರಾಕ್ಷಾಯಣಿ ಮಾಲಿ ಪಾಟೀಲ,ರಾಜ್ಯ ಕಾರ್ಯದರ್ಶಿ ಶರಣೇಗೌಡ ಹಡಗಿನಾಳ,ತಾಲೂಕ ಅದ್ಯಕ್ಷ ರಮೇಶ ಕುನ್ನಟಗಿ,ಜೀವಸ್ಪಂದನ ಟ್ರಸ್ಟ್ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ,ವನಸಿರಿ ಜಿಲ್ಲಾ ಮಹಿಳಾ ಘಟಕದ ಅದ್ಯಕ್ಷೆ ಸಂಗೀತ ಸಾರಂಗಮಠ,ಮಮತಾ ಹಿರೇಮಠ, ಓಂ ಶಾಂತಿ ಅಮ್ಮನವರು,ಮಾಜಿ ನಗರಸಭೆಯ ಅದ್ಯಕ್ಷರು ನದೀಮ್ ಮುಲ್ಲಾ,ವೀರೇಶ ವಕೀಲರು,ಸೈನಿಕರಾದ ಸುರೇಶ್ ಹಾಗೂ ಸನ್ ರೈಸ್ ಕಾಲೇಜು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು,ವನಸಿರಿ ಫೌಂಡೇಶನ್ ಸದಸ್ಯರಾದ ರಾಜುಬಳಗಾನೂರ, ಮುದಿಯಪ್ಪ,ಚನ್ನಪ್ಪ ಜಾಲತಾಣ ಅಧ್ಯಕ್ಷ,ರಾಜು ಮಲ್ಲಾಪುರ,ವೆಂಕಟರಡ್ಡಿ, ನಾಗರಾಜಗೌಡ,ಮುತ್ತು ಪಾಟೀಲ ಬೂತಲದಿನ್ನಿ,ಸರ್ವ ಸದಸ್ಯರು,ಪರಿಸರ ಪ್ರೇಮಿಗಳು,ಪತ್ರಿಕಾ ಮಿತ್ರರು ಭಾಗವಹಿಸಿ ಯಶಸ್ವಿಗೊಳಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.