ಸಿಂಧನೂರಿನ ನ್ಯಾಷನಲ್ ಕಾಲೇಜ್ ಹಾಗೂ ಪತ್ರಿಕಾ ಮಿತ್ರರ ಬಳಗ ವತಿಯಿಂದ ಕರ್ನಾಟಕ ಸರ್ಕಾರದ “ಕರ್ನಾಟಕ ಪರಿಸರ ಪ್ರಶಸ್ತಿ 2023″ರ ಪುರಸ್ಕೃತರು ಪರಿಸರ ಪ್ರೇಮಿಗಳು,ವನಸಿರಿ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಅಮರೇಗೌಡ ಮಲ್ಲಾಪೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ವನಸಿರಿ ಅಮರೇಗೌಡ ಕರ್ನಾಟಕ ಸರ್ಕಾರದ ಕರ್ನಾಟಕ ಪರಿಸರ ಪ್ರಶಸ್ತಿ ಪಡೆಯುವಲ್ಲಿ ಸಹಕರಿಸಿದವರು ಪತ್ರಿಕಾ ಮಿತ್ರರು.ನನ್ನ ಪರಿಸರ ಸೇವೆಗೆ ಸದಾಕಾಲ ರಕ್ಷಣೆಯಾಗಿ ಬೆಂಬಲವಾಗಿ ನಿಂತು ಪ್ರೋತ್ಸಾಹ ಮಾಡಿ ಇನ್ನಷ್ಟು ಕಾರ್ಯಗಳನ್ನು ಕೈಗೊಳ್ಳಲು ಸಹಾಕಾರಿಯಾದವರು ಪತ್ರಿಕಾ ಮಿತ್ರರು. ಈ ಎಲ್ಲ ಪತ್ರಿಕಾ ಮಿತ್ರರಿಗೆ ವನಸಿರಿ ಫೌಂಡೇಶನ್ ವತಿಯಿಂದ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮತ್ತು ನಿಮ್ಮೆಲ್ಲರ ಸಹಕಾರದಿಂದ ಈ ಮಟ್ಟದಲ್ಲಿ ಬೆಳೆಯಲು ಕಾರಣವಾಯಿತು. ಒಂದು ಕಲ್ಲನ್ನು ಶಿಲ್ಪಿ ಕೈಯಲ್ಲಿ ಕೊಟ್ಟರೆ ಅದರಲ್ಲಿ ಹೇಗೆ ಆತ ತನ್ನ ಶ್ರಮದಿಂದ ಕಲೆಯನ್ನು ಅರಳಿಸುತ್ತಾನೋ ಹಾಗೆ ನನ್ನ ತಂದೆ ತಾಯಿಗಳನ್ನು ಕಳೆದುಕೊಂಡಾಗ ನಿರಾಸೆಯಾಗದೆ ಅವರ ಸ್ಮರಣೆಗಾಗಿ ಪರಿಸರ ಸೇವೆಯಲ್ಲಿ ತೊಡಗಿದಾಗ ಪತ್ರಿಕೆಗಳ ಬರವಣಿಗೆ ಮೂಲಕ ನನ್ನನ್ನು ಇವತ್ತು ಪರಿಸಕ್ಕಾಗಿ ಮೀಸಲು ಮಾಡುವಂತೆ ಶಿಲೆಯಾಗಿ ಕೆತ್ತನೆ ಮಾಡಿದ್ದಾರೆ. ಅದಕ್ಕೆ ನಾನು ಯಾವಾಗಲೂ ಆಭಾರಿಯಾಗಿರುತ್ತೇನೆ ನನ್ನ ಈ ಪರಿಶ್ರಮಕ್ಕೆ ಮಾದ್ಯಮ ಮಿತ್ರರೇ ಕಾರಣ ನನ್ನ ಕಲ್ಲಿನ ಮನಸ್ಸಿಗೆ ಶಿಲ್ಪಿಗಳಾಗಿ ಕೆತ್ತನೆ ಮಾಡಿ ಇಂದು ಪರಿಸರ ಮೂರ್ತಿಯಾಗಿ ಮಾಡಿದ್ದಾರೆ. ನನಗೆ ಪತ್ರಿಕಾ ಮಿತ್ರರೆ ಶಿಲ್ಪಿಗಳು.ಪತ್ರಿಕಾ ಮಿತ್ರರು ಸಮಾಜ ತಿದ್ದುವ ಶಿಲ್ಲಿಗಳಾಗಿದ್ದಾರೆ ಎಂದು ತಮ್ಮ ಮನದಾಳದ ಮಾತುಗಳನ್ನು ತಿಳಿಸಿದರು
ಈ ಸಂದರ್ಭದಲ್ಲಿ ಪತ್ರಿಕಾ ಮಿತ್ರರಾದ ಚಂದ್ರಶೇಖರ ಬೆನ್ನೂರು,ಅಶೋಕ ಬೆನ್ನೂರು,ರವಿಕುಮಾರ ಇನ್ನಿತರರು ಇದ್ದರು.