ಇಂಡಿ :ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿ ತಲೆ ತಲಾಂತರದಿಂದ ಬಂದಿರುವ ಮೌಖಿಕ ಪರಂಪರೆಯಲ್ಲಿ ಸಂಬಂಧ ಜ್ಞಾನವೇ ಜಾನಪದವಾಗಿದ್ದು ಅಂತಹ ಜಾನಪದವನ್ನು ಉಳಿಸಿ ಬೆಳೆಸ ಬೇಕಾಗಿರುವ ಕರ್ತವ್ಯ ನಮ್ಮ ಯುವ ಪೀಳಿಗೆ ಮೇಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಶಂಕರ ಪಾರ್ವತಿ ಸಬಾಭವನದಲ್ಲಿ ವಿಶ್ವಚೇತನ ಶೈಕ್ಷಣಕ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವಾ ಅಭಿವೃದ್ಧಿ ಸಂಸ್ಥೆ ಶಾಖೆ ಇಂಡಿ ಮತ್ತು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಇಂಡಿ ಇವರ ಸಹಯೋಗದಲ್ಲಿ ಜಾನಪದ ಝೇಂಕಾರ ಹಾಡಿನ ಸಂಭ್ರಮ ಮತ್ತು ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಹಂತಿ ಹಾಡು,ಗೀಗೀ ಪದ,ಡೊಳ್ಳಿನ ಪದ,ಲಾವಣ, ಬೀಸುವ ಹಾಡುಗಳು ಸೇರಿದಂತೆ ಅನೇಕ ಜನಪದ ಹಾಡುಗಳು ಸಾಹಿತ್ಯ ಆಧುನಿಕ ಪರಂಪರೆಯ ಭರಾಟೆಯಲ್ಲಿ ನಶಿಸಿ ಹೋಗುತ್ತಿದ್ದು ಮುಂದಿನ ಪೀಳಿಗೆಗೆ ಪ್ರೋತ್ಸಾಹ ನೀಡಬೇಕಾಗಿದೆ ಜನಪದ ಪ್ರತಿಭೆಗಳನ್ನು ಗುರುತಿಸಿ ಅವರಲ್ಲಿರುವ ಪ್ರತಿಭೆ ಹೊರತರುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ವಿಜಯಪುರ ಜಿಲ್ಲೆ,ಇಂಡಿ ತಾಲೂಕು ಜನಪದಕ್ಕೆ ಪ್ರಸಿದ್ಧಿಯಾಗಿದ್ದು ಈ ಭಾಗದ ಸಿಂಪಿ ಲಿಂಗಣ್ಣ,ಮಧುರಚೆನ್ನ, ಧೂಲಾಸಾಬರಂತಹ ಶ್ರೇಷ್ಠ ಜನಪದ ಸಾಹಿತಿಗಳಂತೆ ನಮ್ಮ ಯುವ ಪೀಳಿಗೆ ಬೆಳೆಯಬೇಕಾಗಿದೆ.ಈ ದಿಶೆಯಲ್ಲಿ ಜನಪದಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ಆಗಬೇಕಿಗೆ ಎಂದರು.
ನಿತ್ಯ ಬದುಕಿನಲ್ಲಿ ಜನಪದ ಕುರಿತು ಖ್ಯಾತ ಅಂಕಣಕಾರ ಮಂಜುನಾಥ ಜುನಗೊಂಡ ಮಾತನಾಡಿ ಆಧುನಿಕ ಸ್ಪರ್ಶದಿಂದ ಜನಪದ ನಶಿಸುತ್ತಿದ್ದು ಅದರಿಂದ ಹೊರಬಂದು ಜನಪದದಲ್ಲಿ ಆಸಕ್ತಿವಹಿಸಬೇಕಾಗಿದೆ, ಜನಪದ ನಮಗೆ ಬದುಕನ್ನು ಕಲ್ಪಸಿ ಕೊಟ್ಟಿದೆ ಎಂದರು.
ಅಧ್ಯಕ್ಷತೆ ವಹಿಸಿದ ಸಂಶೋಧಕ ಡಿ.ಎನ್.ಅಕ್ಕಿ,ವೇದಿಕೆ ಅಧ್ಯಕ್ಷ ಕಾಂತು ಇಂಡಿ,ಎಂ.ಆರ್.ಪಾಟೀಲ,ಬಸಯ್ಯ ಹಿರೇಮಠ,ಬಸವರಾಜ ಗೊರನಾಳ ಮಾತನಾಡಿದರು.
ಸಂತೋಷ ವಾಲಿಕಾರ,ಶಿಕ್ಷಕಿ ಎಂ.ಎಸ್.ತಳವಾರ,ಪರಶುರಾಮ ನಾರಾಯಣಪುರ,ರಮೇಶ ನಾಯಕ ತಮ್ಮ ಜಾನಪದ ಹಾಡುಗಳಿಂದ ರಂಜಿಸಿದರು.
ವೇದಿಕೆಯ ಮೇಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೇದ ಮೋಮಿನ,ಕದಳಿ ವೇದಿಕೆಯ ಅಧ್ಯಕ್ಷೆ ಗಂಗಾಬಾಯಿ ಗಲಗಲಿ,ಭದ್ರೀಶ ಮಹೇಶಿ,ಜೀತಪ್ಪ ಕಲ್ಯಾಣ,ಚಂದ್ರಶೇಖರ ರೂಗಿ,ಸಂತೋಷ ಕೋಟಿ,ಶಾಂತು ಶಿರಕನಹಳ್ಳಿ,ಶೇಖರ ನಾಯಕ,ಪ್ರಶಾಂತ ಕಾಳೆ,ಅಶೋಕ ಮಿರ್ಜಿ,ಶಂಕರ ಚವ್ಹಾಣ,ಮಲ್ಲನಗೌಡ ಪಾಟೀಲ,ಗಿರೀಶ್ ಚಾಂದಕವಟೆ,ಪ್ರಭುಗೌಡ ಬಿರಾದಾರ,ರಾಜೇಶ್ವರಿ ಕ್ಷತ್ರಿ,ದ್ರಾಕ್ಷಾಯಣ ಮೈದರಗಿ,ಶಶಿಕಲಾ ಆಳೂರ, ಆರ್.ವಿ.ಪಾಟಿಲ,ಪ್ರಭು ಹೊಸಮನಿ,ರಾಜು ಕುಲಕರ್ಣಿ ಶರಣು ಕಾಂಬಳೆ, ಜಿ.ಜಿ.ಬರಡೋಲ ಮತ್ತಿತರಿದ್ದರು.
ವರದಿ:ಅರವಿಂದ್ ಕಾಂಬಳೆ,ಇಂಡಿ