ಇಂಡಿ:ನೂತನ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆ ಸರಕಾರದ ಭರವಸೆಯಂತೆ ಅನುಷ್ಠಾನಗೊಳ್ಳುತ್ತಿದೆ, ಈ ಯೋಜನೆಯಡಿ ತಾಲೂಕಿನ ಅಂದಾಜು ೧೨ ಸಾವಿರ ಮಹಿಳೆಯರು, ವಿದ್ಯಾರ್ಥಿನಿಯರು ಪ್ರತಿದಿನ ಉಚಿತ ಪ್ರಯಾಣ ಮಾಡಲಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಇಂಡಿ ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆವರಣದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ಭಾನುವಾರ ಬೆಳಗ್ಗೆ ೧೧ ಗಂಟೆಗೆ ಚಾಲನೆ ನೀಡಿ ಮಾತನಾಡಿದರು.
ಈ ಯೋಜನೆಯಲ್ಲಿ ಮಹಿಳೆಯರು ಸಾಮಾನ್ಯ ಮತ್ತು ವೇಗದೂತ ಸರಕಾರಿ ವಾಹನಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು.
ಬಡವರು ಮತ್ತು ಕೆಳ ಮಧ್ಯಮ ವರ್ಗದ ದುಡಿಯುವ ಮಹಿಳೆಯರ ನಿತ್ಯದ ಖರ್ಚಿನ ಹೊರೆಯನ್ನು ಈ ಯೋಜನೆ ಇಳಿಸಲಿದ್ದು, ಮಹಿಳಾ ಸಬಲೀಕರಣ ಹಾಗೂ ಸ್ವಾವಲಂಬನೆಗೆ ಒತ್ತಾಸೆ ಸಿಗುವ ಭರವಸೆ ಮೂಡಿಸಿದೆ ಎಂದರು.
ಈ ಯೋಜನೆಯಡಿ ತಾಲೂಕಿನಲ್ಲಿರುವ ಮಹಿಳೆಯರು ರಾಜ್ಯದೊಳಗಿನ ಯಾವದೇ ಪ್ರದೇಶಕ್ಕೆ ಉಚಿತವಾಗಿ ಪ್ರಯಾಣ ಸಬಹುದು. ಮತ್ತು ರಾಜ್ಯದ ೪ ನಿಗಮಗಳ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ ಎಂದರು.
ರಾಜ್ಯ ಸರಕಾರದ ಈ ಐದು ಗ್ಯಾರಂಟಿಗಳಿಂದ ಒಂದು ಕುಟುಂಬಕ್ಕೆ ಪ್ರತಿ ವರ್ಷ ಒಂದು ಲಕ್ಷ ರೂ ಸಹಾಯ ಸಿಗಲಿದೆ ಎಂದರು.
ಇಲಾಖೆಯ ಜಿಲ್ಲಾ ತಾಂತ್ರಿಕ ಅಧಿಕಾರಿ ಅಬುಬಕರ ಮದಭಾವಿ, ಕಾಶಿನಾಥ ಹೊಸಮನಿ, ಪುಂಡಲೀಕ ಹೂಗಾರ, ಸಂತೋಷ ವಾಲಿಕಾರ ಮಾತನಾಡಿದರು.
ವೇದಿಕೆಯಲ್ಲಿ ಕಂದಾಯ ಉಪವಿಬಾಗಾಧಿಕಾರಿ ರಾಮಚಂದ್ರ ಗಡದೆ, ತಹಸೀಲ್ದಾರ ನಾಗಯ್ಯ ಹಿರೇಮಠ, ಘಟಕ ವ್ಯವಸ್ಥಾಪಕ ವಾಗೇಶ ಭಜಂತ್ರಿ, ಪುರಸಭೆ ಮಾಜಿ ಅಧ್ಯಕ್ಷ ಭೀಮನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್, ಡಿ.ಆರ್.ಶಹಾ ಮಂಜುನಾಥ ಕಾಮಗೊಂಡ, ಪ್ರಶಾಂತ ಕಾಳೆ, ಇಲಿಯಾಸ ಬೋರಾಮಣ , ಜಟ್ಟೆಪ್ಪ ರವಳಿ, ಧರ್ಮರಾಜ ವಾಲಿಕಾರ, ಶ್ರೀಕಾಂತ ಕೂಡಿಗನೂರ, ಸತೀಶ ಕುಂಬಾರ, ಇಲಾಖೆಯ ಸಾರಿಗೆ ಸಂಸ್ಥೆ ನೌಕರರ ಸಂಘದ ಅಧ್ಯಕ್ಷ ಎಂ.ಎಲ್.ಚೌಧರಿ, ನಿಂಗಪ್ಪ ಕವಲಗಿ, ಎಸ್.ಡಿ.ಪಟ್ಟಣಶೆಟ್ಟಿ, ಸುನೀಲ ಹೊನವಾಡ, ಅರವಿಂದ ತರಡಿ, ಬಸವರಾಜ ಆಲೂರ, ಸಂಜು ಚವ್ಹಾಣ ಇತರರು ಉಪಸ್ಥಿತರಿದ್ದರು.
ವರದಿ. ಅರವಿಂದ್ ಕಾಂಬಳೆ ಇಂಡಿ