ಬೆಳಗಾವಿ/ರಾಮದುರ್ಗ:ಪಟ್ಟಣದ ಬಾನಕಾರ್ ಪೇಟೆಯ ಶ್ರೀ ಬನಶಂಕರಿ ದೇವಸ್ಥಾನದಿಂದ ನೇಕಾರ ಪೇಟೆಯ ಪ್ರಮುಖ ಬೀದಿಗಳ ಮುಖಾಂತರ ಮಿನಿ ವಿಧಾನಸೌಧ ವರೆಗೂ ಹಲಿಗೆ ಬಾರಿಸುತ್ತಾ ಪಾದಯಾತ್ರೆ ಮುಖಾಂತರ ಸಾವಿರಾರು ಸಂಖ್ಯೆಯಲ್ಲಿ ನೇಕಾರರು ಪ್ರತಿಭಟನೆ ನಡೆಸಿದರು ತಾಲೂಕಿನ ದಂಡಾಧಿಕಾರಿಗಳಾದ ಬಸವರಾಜ್ ನಾಗರಳ್ ಇವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿದ್ಯುತ್ ದರ ಏರಿಕೆ ಕುರಿತು ಹಾಗೂ ನೇಕಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ರಾಮದುರ್ಗ ತಾಲೂಕಿನ ಕಟುಕೋಳ್ ಸುರೇಬಾನ್ ಮುದುಕವಿ ಹಲಗತ್ತಿ ಹಾಗೂ ರಾಮದುರ್ಗ ನಗರದ ಎಲ್ಲ ನೇಕಾರ ಬಂಧುಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ:ವಿರೇಶ್ ಬಳಿಗೇರ್
