ಯಡ್ರಾಮಿ/ರಾಜ್ಯದಲ್ಲಿ ಇದುವರೆಗೂ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ ಅದೇ ರೀತಿಯಾಗಿ ಸರ್ಕಾರ ಪ್ರತಿಯೊಂದು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕರಾಟೆ ಶಿಕ್ಷಕರನ್ನು ಅತಿಥಿ ಶಿಕ್ಷಕರನಾಗಿ ಪರಿಗಣಿಸಿ ನೇಮಿಸಿಕೊಳ್ಳಬೇಕು ಇದರಿಂದ ಇತರ ಚಟುವಟಿಕೆ ಜೊತೆ ಮಕ್ಕಳಲ್ಲಿ ಆತ್ಮಬಲ ಹೆಚ್ಚಿಸುವುದರ ಜೊತೆ ಕರಾಟೆ ಕಲೆಯನ್ನು ಕೂಡ ಸಮರ್ಥವಾಗಿ ಕಲಿಸಿದಂತಾಗುತ್ತದೆ ಅಲ್ಲದೆ ಮಕ್ಕಳಲ್ಲಿ ಆತ್ಮಬಲ ಸಾಮಾಜಿಕ ಪ್ರಜ್ಞೆ ಕಲಿಸಿಕೊಟ್ಟಂತಾಗುತ್ತದೆ ಆದ್ದರಿಂದ ವಿದ್ಯಾರ್ಹತೆಯ ಆಧಾರದ ಮೇಲೆ ಅನುಭವಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು ಎಂದು ಯಡ್ರಾಮಿ ತಾಲೂಕಿನ ಗ್ರಾಮೀಣ ಅಭಿವೃದ್ಧಿ ಹೋರಾಟಗಾರ ಮಾಳಪ್ಪ ಪೂಜಾರಿ ಅವರು ಕರಾಟೆ ಶಿಕ್ಷಕರೊಂದಿಗೆ ಸಮಾಲೋಚಿಸಿ ಆದಷ್ಟು ಶೀಘ್ರದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವದಾಗಿ ತಿಳಿಸಿದ್ದಾರೆ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಅಪರಾಧ ಪ್ರಕಾರಣಗಳು ಹೇಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಹಾಗೂ ಕಾಲೇಜುಗಳಲ್ಲಿ ಕರಾಟೆ ಕಲೆಯನ್ನು ಕಲಿಸುವುದರಿಂದ ಅಪಾಯಕಾರಿಕ ಸನ್ನಿವೇಶದಲ್ಲಿ ಮಕ್ಕಳು ರಕ್ಷಣೆ ಮಾಡಿಕೊಳ್ಳಲಿದ್ದಾರೆ ಆದ್ದರಿಂದ ಸರಕಾರ ಕುಲಂಕುಶವಾಗಿ ಪರಿಶೀಲಿನೆ ಮಾಡಿ ಕರಾಟೆ ಶಿಕ್ಷಕರನ್ನು ಆದಷ್ಟು ಶೀಘ್ರದಲ್ಲಿ ನೇಮಿಸಿಕೊಳ್ಳಬೇಕು ಇದರಿಂದ ಪ್ರತಿಯೊಂದು ಶಾಲೆಯ ಹೆಣ್ಣು ಮಕ್ಕಳು ಸಮರ್ಥ ರೀತಿಯಲ್ಲಿ ಸದೃಢವಾಗಿ ಧೈರ್ಯವಂತರಾಗಿ ಬೆಳೆಯಲಿದ್ದಾರೆ ಆದ್ದರಿಂದ ಸರ್ಕಾರ ಎಲ್ಲಾ ಶಿಕ್ಷಣದಂತೆ ಕರಾಟೆ ಶಿಕ್ಷಣಕ್ಕೂ ಆದ್ಯತೆ ಕೊಡಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.