ಇಂಡಿ:ತಾಲೂಕಿನ್ಯಾದಂತ ಗೊಬ್ಬರದ ಅಂಗಡಿಗಳಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ರಸಗೊಬ್ಬರ ಅಂಗಡಿ ಪರಿಶೀಲನೆ ನಡೆಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ಮಾತನಾಡಿ ಎಲ್ಲ ಗೊಬ್ಬರದ ಅಂಗಡಿ ಮಾಲಿಕರ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಲ್ಲದೆ ತಾಲೂಕಿನ ೭೫ ಅಂಗಡಿಗಳನ್ನು ಪರಿಶೀಲನೆ ಮಾಡಿ ಅಂಗಡಿಯಲ್ಲಿಯ ಗೊಬ್ಬರಗಳ ಮಾಹಿತಿ ಪಡೆದು ಪರವಾನಿಕೆ ಇಲ್ಲದೆ ಯಾವುದೇ ಗೊಬ್ಬರಗಳನ್ನು ಮಾರಾಟ ಮಾಡದಂತೆ ಸೂಚಿಸಲಾಗಿದೆ ಎಂದರು.
ತಾಲೂಕಿನ ಪ್ರತಿಯೊಂದು ಗೊಬ್ಬರದ ಅಂಗಡಿಗಳ ಮುಂದೆ ಇರುವ ಗೊಬ್ಬರಗಳ ಮಾಹಿತಿ ಫಲಕ ಹಾಗೂ ಪ್ರತಿಯೊಂದರ ಬೆಲೆಯ ಫಲಕವನ್ನು ನಿತ್ಯ ಹಾಕಬೇಕೆಂದು ಸೂಚನೆ ನೀಡಲಾಗಿದೆ. ಅಲ್ಲದೆ ಯಾವದೇ ರೈತಗೊಬ್ಬರ ಖರೀದಿಸಿದ ನಂತರ ಅವರಿಗೆ ರಶೀದಿ ಕೊಡುವುದು ಕಡ್ಡಾಯವಾಗಿದೆ.ಬೇಕಾ ಬಿಟ್ಟಿ ಒಂದು ಪೇಪರನಲ್ಲಿ ಬಿಲ್ ನೀಡಿರುವದು ಕಂಡು ಬಂದರೆ ಅಂಗಡಿಯ ಪರವಾನಿಗಿ ರದ್ದು ಪಡಿಸಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ವರದಿ. ಅರವಿಂದ್ ಕಾಂಬಳೆ ಇಂಡಿ