ದಿನಾಂಕ 19=6=23ರಂದು ಕೊಪ್ಪಳ ನಗರಸಭೆ ಪೌರಾಯುಕ್ತರಿಗೂ ಮತ್ತು ನಗರಾಭಿವೃದ್ಧಿಕೋಶದ ಜಿಲ್ಲಾ ಅಧಿಕಾರಿಗಳಿಗೂ ಕರ್ನಾಟಕ ರಾಜ್ಯ sc st ಅಲೆಮಾರಿ ಬುಡಕಟ್ಟು ಮಹಾಸಭಾ (ರಿ.)ಬೆಂಗಳೂರು ಜಿಲ್ಲಾ ಘಟಕ ಕೊಪ್ಪಳ, ಜಿಲ್ಲಾ ಅಧ್ಯಕ್ಷರ ವತಿಯಿಂದ ಜಿಲ್ಲಾ ಅಧ್ಯಕ್ಷರು ಸಂಜಯ್ ದಾಸ್ ಕೌಜಗೇರಿ ಮತ್ತು ಈ ಸಮಯದಲ್ಲಿ ಭೀಮ್ ಸೇನಾ ಜಿಲ್ಲಾ ಅಧ್ಯಕ್ಷರು ಮತ್ತು ಆಶೀಪ್ ಖಾನ್ ಮತ್ತು ರಫಿಕ್ ಸಾಭ ಕಪಾಲಿಮತ್ತು ಪಠದಯ್ಯಜ್ಜ ಹಮ್ಮಿಗಿ ಮತ್ತು ಪ್ರಕಾಶ್ ಹೊಟ್ಟಿ ಹಾಗೂ ಕುವೆಂಪು ನಗರದಲ್ಲಿ ಈ ನೀರಿನ ಅವ್ಯವಸ್ಥೆಯಿಂದ ನೊಂದ ಕುಟುಂಬದ ತಾಯoದಿರು ಸೇರಿ ಮನವಿಯನ್ನು ನೀಡಿದರು.ನಗರಸಭೆಯ ಬಹುತೇಕ ವಾರ್ಡುಗಳಲ್ಲಿ ನೀರಿನ ಸಮಸ್ಯೆ ಚರಂಡಿ ಮತ್ತು ರಸ್ತೆ,ಮಳೆಯಾದಾಗ ಮಳೆ ನೀರಿನ ಸಮಸ್ಯೆ ಮತ್ತು ಸಿಂದೊಗಿ ರಸ್ತೆಯಲ್ಲಿ ನಿರ್ಮಾಣ ಆಗಿರುವ 2000ಮನೆಗಳಿಗೆ ನೀರಿನ ವ್ಯವಸ್ಥೆ ಇಲ್ಲ ಮತ್ತು ರಸ್ತೆ ಇಲ್ಲ ಹಾಗೂ ಚರಂಡಿ ವ್ಯವಸ್ಥೆ ಇಲ್ಲಾ ಇಂತಹ ಕಷ್ಟ ಕರ ಸಂದರ್ಭದಲ್ಲಿ 2ಕೋಟಿ ರೂ ಖರ್ಚಿನಲ್ಲಿ ನಗರಸಭೆಯಲ್ಲಿನ ಆಫೀಸಗಳನ್ನು ನವಿಕರಣಗೊಳಿಸಲು 2ಕೋಟಿ ರೂ ಖರ್ಚು ಮಾಡುವ ಅವಶ್ಯಕತೆ ಇದೆಯೇ? ಮುಖ್ಯವಾಗಿ ಆ ಎರಡು ಕೋಟಿ ಖರ್ಚು ಮಾಡುವದು ನಿಲ್ಲಿಸಬೇಕು,
ಮತ್ತು ಕುವೆಂಪು ನಗರದಲ್ಲಿ ರಾಜಕಾಲುವೆ ಮಾರ್ಗ ಬದಲಿಸಿ ಬೇರೆ ಮಾರ್ಗದಿಂದ ನೀರು ಹರಿಸುತ್ತಿರುವುದರಿಂದ,ಸುಮಾರು ನೂರಾರು ಕುಟುಂಬ ಗಳ ಮನೆಗಳಿಗೆ ನೀರು ನುಗ್ಗಿ ಮನೆಯ ಸಾಮಗ್ರಿ ಮತ್ತು ದಿನನಿತ್ಯ ಬಳಸುವ ದಿನಸಿ ಸಾಮಾನು ಮತ್ತು ಮಕ್ಕಳು ಓದುವ ಪುಸ್ತಕ ಮತ್ತು ಮನೆ ಮಂದಿಯ ಸರಕಾರೇತರ ರ್ದಾಖಲೆಗಳು ಎಲ್ಲವು ಕೂಡಾ ನೀರಿನಲ್ಲಿ ತೊಯ್ದು ಜೀವಹಾನಿ ಸಂಭವಿಸುವಷ್ಟರ ಮಟ್ಟಿಗೆ ಅಲ್ಲಿನ ನೀರಿನ ರಭಸ ಇರುವುದರಿಂದ,ಮಾರ್ಗ ಬದಲಿಸಿದ ಕಡೆ ನೀರನ್ನು ಹರಿಸದೆ ಮೂಲ ನಕ್ಷೆಯ ಪ್ರಕಾರ ಕೊಪ್ಪಳ ಗವಿಶ್ರೀ ನಗರದಿಂದ ಹಿಡಿದುಕೊಂಡು ಗವಿ ಮಠದ ಗುಡ್ಡದ ಪಕ್ಕದಿಂದ ಹಾಯ್ದು ಹಾಲವರ್ತಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿಯೂ ಕೂಡಾ ನೀರಿನ ನಿಲ್ಲುವಿಕೆಯಿಂದ ಹಾಲವರ್ತಿ ಗ್ರಾಮಕ್ಕೆ ತಿರುಗಾಡುವ ವಾಹನ ಮತ್ತು ಆ ಮಾರ್ಗದಿಂದ ತಿರುಗಾಡುವ ರೈತರಿಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಮಳೆಗಾಲ ಬಂತು ಎಂದರೆ ಸಾಕು ಜೀವ ಕೈಯಲ್ಲಿ ಹಿಡಿದುಕೊಂಡು ತಿರುಗಾಡುವ ಚಿಂತಾಜನಕ ಪರಸ್ಥಿತಿ ಇಲ್ಲಿನ ಸಾರ್ವಜನಿಕರದ್ದಾಗಿದೆ, ಹಾಗಾಗಿ ಮೂಲ ನಕ್ಷೆಯ ಪ್ರಕಾರ ನೀರನ್ನು ಹರಿಸುವದು ಸೂಕ್ತ ಎನ್ನುವದು ಇಲ್ಲಿನ ಸಾರ್ವಜನಿಕ ವಲಯದ ಮಾತಾಗಿದೆ
ಒಂದು ವೇಳೆ ಇದನ್ನು ಸಂಬಂಧ ಪಟ್ಟ ಅಧಿಕಾರಿಗಳು 8-10ದಿನದಲ್ಲಿ ಇದನ್ನು ಬಗೆಹರಿಸದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಸಾರ್ವಜನಿಕರಿಂದ ಮತ್ತು ಸಂಘಟನೆಗಳ ಹೋರಾಟಗಾರರಿಂದ ಹಮ್ಮಿಕೊಳ್ಳಲಾಗುತ್ತದೆ ಎಂದು ಈ ಮೂಲಕ ಮುಖ್ಯ ಅಧಿಕಾರಿಗಳಿಗೂ ಮತ್ತು ಸಂಭಂದ ಪಟ್ಟವರಿಗೂ ಮನವರಿಕೆ ಮಾಡಿದ್ದೇವೆ ಎಂದು ಅಲೆಮಾರಿ ಜಿಲ್ಲಾ ಅಧ್ಯಕ್ಷರಾದ
ಸಂಜಯ್ ದಾಸ್ ಕೌಜಗೇರಿ,ಭಾ.ಭೀಮ್ ಸೇನಾ ಜಿಲ್ಲಾ ಅಧ್ಯಕ್ಷರು,ಹಾಗೂ
ಕಾಶಪ್ಪ ಚಲವಾದಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.