ಯಾದಗಿರಿ ತಾಲೂಕಿನ ಸುಕ್ಷೇತ್ರ ಅಬ್ಬೆತುಮಕೂರಿನ ಮಠಾಧಿಪತಿ ಶ್ರೀ ಶ್ರೀ ಡಾ||ಗಂಗಾಧರ ಮಹಾಸ್ವಾಮಿಗಳ ನೇತೃತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ಪರಂಪರಾ ಪಾದಯಾತ್ರೆ ಈ ಅಮಾವಾಸ್ಯೆಗೆ ಅಲ್ಲ ಬರುವ ಆಗಸ್ಟ್ 14 ರಿಂದ 16 ರ ಅಮಾವಾಸ್ಯೆಗೆ ಸಂಪನ್ನಗೊಳ್ಳುತ್ತದೆ ಎಂದು ಮಠದ ವಕ್ತಾರ ಡಾ.ಸುಭಾಷಚಂದ್ರ ಕೌಲಗಿ ತಿಳಿಸಿದ್ದಾರೆ.ಪ್ರತಿ ವರ್ಷ ಕೂಡ ಪರಂಪರಾ ಪಾದಯಾತ್ರೆ ನಾಗರ ಅಮಾವಾಸ್ಯೆ ಮೂರು ದಿವಸ ಮುಂಚೆ ಜರಗುತ್ತಿತ್ತು,ಆದರೆ ಈ ಬಾರಿ ಅಧಿಕ ಶ್ರಾವಣ ಮಾಸ ಬಂದಿರುವುದರಿಂದ ಜುಲೈ 17 ರ ನಾಗರ ಅಮಾವಾಸ್ಯೆಯನ್ನು ಸುಳ್ಳು ಅಮಾವಾಸ್ಯೆ ಎಂದು ಪಂಚಾಂಗದ ಪ್ರಕಾರ ಪರಿಗಣಿಸಲಾಗುತ್ತದೆ.
ಹೀಗಾಗಿ ಪಾದಯಾತ್ರೆ ಈ ಅಮಾವಾಸ್ಯೆ ಜರುಗುವುದಿಲ್ಲ,ಮುಂಬರುವ ಅಧಿಕ ಶ್ರಾವಣ ಮಾಸದ ನಂತರ ಅಗಸ್ಟ್ 16 ಕ್ಕೆ ಬರುವ ಅಮಾವಾಸ್ಯೆ ನಿಜ ನಾಗರ ಅಮಾವಾಸ್ಯೆ ಎಂದು ತಿಳಿದು ಪರಂಪರಾ ಪಾದಯಾತ್ರೆ ಜರಗುತ್ತದೆ ಎಂದು ತಿಳಿಸಿದರು ಆಗಸ್ಟ್ 14ಕ್ಕೆ ಶ್ರೀ ವಿಶ್ವರಾಧ್ಯರ ಜನ್ಮ ಕ್ಷೇತ್ರ ಗಂವ್ಹಾರದಿಂದ ಪ್ರಾರಂಭವಾಗುವ ಈ ಪಾದಯಾತ್ರೆ ಆಗಸ್ಟ್ 16ಕ್ಕೆ ಅಮಾವಾಸ್ಯೆಯ ದಿವಸ ಅಬ್ಬೆತುಮಕೂರು ತಲುಪಿ ಸಂಪನ್ನಗೊಳ್ಳುತ್ತದೆ ಎಂದು ತಿಳಿಸಿದರು ಈ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ,ಈ ಪಾದಯಾತ್ರೆಯಲ್ಲಿ ಪಾಲ್ಗೊಂಡರೆ ತಮ್ಮ ಪಾಪ ಕರ್ಮಗಳು ತೊರೆದು ಪುಣ್ಯ ಪ್ರಾಪ್ತಿ ಆಗುತ್ತದೆ ಎಂದು ಈಗಲೂ ನಂಬಿಕೆ ಇದೆ ಇನ್ನೊಂದು ವಿಶೇಷ ಎಂದರೆ ಈ ಪರಂಪರಾ ಪಾದಯಾತ್ರೆಯಲ್ಲಿ ಪ್ರತಿ ವರ್ಷ ಶ್ರೀ ಅಬ್ಬೆತುಮಕೂರಿನ ನಡೆದಾಡುವ ದೇವರು ಶ್ರೀ ಗಂಗಾಧರ ಮಹಾಸ್ವಾಮಿಗಳು ಕೂಡಾ ಎಲ್ಲಾ ಜನರೊಡನೆ ಪಾದಯಾತ್ರೆ ಮಾಡುತ್ತಾರೆ ದೇವರೇ ನಮ್ಮ ಜೊತೆ ಹೆಜ್ಜೆ ಹಾಕುತ್ತಿದ್ದಾನೆ,ಕೈ ಹಿಡಿದು ಕರೆದುಕೊಂಡು ನಡೆಸುತ್ತಿದ್ದಾನೆ ಅಂತ ಜನರಲ್ಲಿ ಅತೀವ ನಂಬಿಕೆ.ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸು ಆದವರು ಮತ್ತು ಪುರುಷರು ಹಾಗೂ ಮಹಿಳೆಯರು ಕೂಡಾ ಸಹಸ್ರಾರು ಸಂಖ್ಯೆ ಯಲ್ಲಿ ಪಾಲ್ಗೊಂಡು ಈ ಪಾದಯಾತ್ರೆಯ ಪುಣ್ಯ ಪಡೆದುಕೊಳ್ಳುವುದು ವಿಶೇಷ.
ಈ ಪಾದಯಾತ್ರೆ ಉದ್ದಕ್ಕೂ ಉಪಹಾರ ವ್ಯವಸ್ಥೆ ಇದ್ದು ಯಾರಿಗೂ ಕೂಡ ಯಾವ ತೊಂದರೆ ಆಗದಂತೆ ಅಪ್ಪಾಜಿ ಶ್ರೀ ವಿಶ್ವರಾಧ್ಯರು ಮತ್ತು ನಡೆ ದಾಡುವ ದೇವರು ಈ ಲೋಕದ ಭಗವಂತ ಶ್ರೀ ಗಂಗಾಧರ ಅಪ್ಪಾಜಿ ಆಶೀರ್ವಾದ ಸದಾ ಭಕ್ತರ ಮೇಲೆ ಇರುತ್ತದೆ. ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳೋದೆ ನಮ್ಮ ಪೂರ್ವ ಜನ್ಮದ ಪುಣ್ಯ ಅಂತಾನೆ ಹೇಳಬಹುದು ಮತ್ತು ಈ ಪಾದಯಾತ್ರೆ ಯಾವ ಕೇದಾರನಾಥ ಯಾತ್ರೆಗೂ ಕಮ್ಮಿ ಇಲ್ಲ ಅಷ್ಟೊಂದು ಭಕ್ತರು ಸೇರಿ ಜಾತಿ,ಧರ್ಮ ಶ್ರೀಮಂತ, ಬಡವ ಎನ್ನದೆ ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳೋದು ಈ ಮಠದ ವಿಶೇಷ.
ಇದನ್ನು ಹೇಳುವುದಕ್ಕಿಂತ, ಕೇಳುವದಕ್ಕಿಂತ ಒಮ್ಮೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ಕಣ್ತುಂಬಿಕೊಂಡು ಪುನೀತರಾಗಿ.
ವರದಿ:ಪುನೀತಕುಮಾರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.