ಧಾರವಾಡ:ಇಂದು ಜಯ ಕರ್ನಾಟಕ ಜನಪರ ವೇದಿಕೆಯಿಂದ,
ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಕ್ರೀಡೆಗಳಲ್ಲಿ ಜಗತ್ತಿನ ಇತಿಹಾಸ ಬರೆದ ಮೊದಲ ಹೆಮ್ಮೆಯ ಪುತ್ರ ಬಿಜಾಪುರ ಜಿಲ್ಲೆಯವರಾದ ಶ್ರೀಪ್ರಶಾಂತ್ ಹಿಪ್ಪರಗಿಯರು ಖಾಸಗಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಇತ್ತೀಚಿಗೆ ಬ್ರೆಜಿಲ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ 38 ಕೀ ಮೀ ಈಜು,422 ಕೀ ಮೀ, ಓಟ,1800 ಕೀ ಮೀ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಮಹಾ ಸಾಧನೆ ಮಾಡಿ “ಡೆಕಾ ಮನ್”ಬಿರುದಿಗೆ ಪಾತ್ರರಾದ ಕನ್ನಡದ ಮೊದಲನೆಯ ವ್ಯಕ್ತಿಯಾಗಿದ್ದಾರೆ,ಇವರು ಇನ್ನೂ ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿ ಮಹಾ ಸಾಧನೆ ಮಾಡಿರುತ್ತಾರೆ.
ಹಾಗೆಯೇ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಪಂಚಾಯತ್ ಕಛೇರಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಸದಾನಂದ್ ಅಮರಾಪುರ ಇವರು ಇತ್ತೀಚಿಗೆ ಕಜಕಿಸ್ಥಾನ ದೇಶದ ರಾಜಧಾನಿಯಾದ ಆಸ್ತಾನದಲ್ಲಿ ನಡೆದ ಅಂತರಾಷ್ಟ್ರೀಯ “ಐರನ್ ಮ್ಯಾನ್” ಸ್ಪರ್ಧೆಯಲ್ಲಿ ಭಾಗವಹಿಸಿ 3,9,ಕೀ ಮೀ, ಈಜು,180 ಕಿ ಮೀ ಸೈಕ್ಲಿಂಗ್,13 ಗಂಟೆ 27 ನಿಮಿಷದಲ್ಲಿ ಪೂರ್ಣಗೊಳಿಸಿ ಅಂತರರಾಷ್ಟ್ರೀಯ
” ಐರನ್ ಮ್ಯಾನ್ ” ಸಾಧನೆ ಮಾಡುವ ಮೂಲಕ ಭಾರತದ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ,ಈ ಮಹಾನ್ ಸಾಧಕರ ಸಾಧನೆಯನ್ನು ಗುರುತಿಸಿ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಅಭಿನಂದಿಸಲಾಯಿತು,
ಕಾರ್ಯಕ್ರಮದಲ್ಲಿ ವೇದಿಕೆಯ ಜಿಲ್ಲಾ ಮುಖಂಡರಾದ ಜಗದೀಶ್ ಜಾದವ್,ಮಲ್ಲಿಕಾರ್ಜನ್ ಅಸುಂಡಿ, ಮಂಜುನಾಥ್ ಅಂಗಡಿ,ಹರ್ಷದ ಪಠಾಣ,ಅನ್ವರ್ ನದಾಫ್,ಪ್ರಮೋದ್ ಶೆಟ್ಟಿ,ರಾಜು ತಾಳಿಕೋಟೆ, ನಾಗರಾಜ ಶೆಟ್ಟಿ,ಅರುಣ್ ಸುತಾರೆ,ಮಹಮ್ಮದ್ ನೀಲಿ, ಮಕಬುಲ್ ಪೆಂಡಾರಿ,ಕಹೀಮ ಮುಲ್ಲಾ,ಬಸವರಾಜ, ಕಟ್ಟೀಮನಿ,ಕಿರಣ್ ಚಂದರಗಿ,ಉಮೇಶ್ ಶಿಂಧೆ, ಪ್ರಕಾಶ್ ಪಾಟೀಲ್,ಕೃಷ್ಣಾ ಅಂಕಲಕೋಟಿ,ಅರ್ಜುನ್ ಪವಾರ್,ರಾಜು ಆಲೂರು,ವೆಂಕಟರಾಯ ಕುಲಕರ್ಣಿ
ಇನ್ನಿತರರು ಉಪಸ್ಥಿತರಿದ್ದರು.
ವರದಿ-ಸದಾಶಿವ ಭೀ ಮುಡೆಮ್ಮನವರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.