ಸದರಿ ಪ್ರಕರಣವನ್ನು ಭೇದಿಸಲು ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಹಾಗೂ ಏಚ್ ಟಿ ಜಯಕುಮಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ ಗಣೇಶ್ ಕೆ ಎಲ್ ಡಿ ಎಸ್ ಪಿ ಶಿರಸಿರವರ ಮಾರ್ಗದರ್ಶನದಲ್ಲಿ ಶ್ರೀ ಸಿದ್ದಪ್ಪ ಸಿಮಾನಿರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು.ಈ ಪ್ರಕರಣದ ತನಿಖೆಯನ್ನು ಕೈಗೊಂಡು ಪತ್ತೆಯ ಕಾರ್ಯದಲ್ಲಿ ಇದ್ದಾಗ ಫಿರ್ಯಧಿಯ ಸುಮಾರು 22 ಗ್ರಾಂ ಬಂಗಾರದ ತಾಳಿಸರವನ್ನ ಕಿತ್ತುಕೊಂಡು ಹೋದ ಆರೋಪಿತರಾದ ಅಪ್ಜಲ್ ತಂದೆ ಖಾದರಸಾಬ್ ಗವಾರಿ ಪ್ರಾಯ 31 ವರ್ಷ, ವೃತ್ತಿ ನಿಂಬೆಹಣ್ಣಿನ ವ್ಯಾಪಾರಿ 2) ದಾದಪಿರ ಖಲಂದರ ಮಿರ್ಜಿ ಪ್ರಾಯ 23 ವರ್ಷ, ವೃತ್ತಿ ಆಟೋ ಚಾಲಕ ದಂಡಿನಪೇಟೆ ಸವಣೂರು ಇವರನ್ನು ದಿನಾಂಕ 17/07/2023 ರಂದು ಬೆಳಗಿನ ಜಾವ ದಸ್ತಗಿರಿ ಮಾಡಿ ವಶಕ್ಕೆ ತೆಗೆದುಕೊಂಡು ಆರೋಪಿತ ರಿಂದ ಬಂಗಾರದ ಸರ ವಶಕ್ಕೆ ತೆಗೆದುಕೊಂಡು ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣವನ್ನು ಭೇದಿಸಲು ಯಶಸ್ವಿಯಾದ ಸಿದ್ದಪ್ಪ ಸಿಮಾನಿ ಪಿಐ ಮುಂಡಗೋಡ ಪೊಲೀಸ್ ಠಾಣೆ, ಯಲ್ಲಾಲಿಂಗ ಕುನ್ನುರು psi, ಶ್ರೀ ಹನುಮಂತ ಗುಡಗಂಟಿ PSI, ಹಾಗೂ ಸಿಬ್ಬಂದಿಗಳಾದ ಮಹಮ್ಮದ್ ಸಲೀಂ, ಗಣಪತಿ ಹುನ್ನಲ್ಲಿ, ಅನ್ವರಖಾನ್,ಬಸವರಾಜ್ ಲಮಾಣಿ, ತಿರುಪತಿ ಚೌಡನ್ನನವರ, ಅಣ್ಣಪ್ಪ ಬಡಿಗೇರ್,ಕೊಟೇಶ್ ನಾಗರವಳ್ಳಿ, ಮಹಾಂತೇಶ್ ಮುಧೋಳ್, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.