ಯಾದಗಿರ:ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕ್ ಸಾಕಷ್ಟು ಅಭಿವೃದ್ಧಿಯಲ್ಲಿತ್ತು.
ಬ್ಯಾಂಕಿನ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಾ ಬಂದಿತ್ತು ಆದರೆ ಇತ್ತೀಚಿಗೆ 2-3 ವರ್ಷಗಳಲ್ಲಿ ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಹಗರಣಗಳು ಬಯಲಿಗೆ ಬಂದು ಈಗ ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಸಹಕಾರ ಇಲಾಖೆ ಅಧಿಕಾರಿಗಳಿಗೆ ದೂರು ಕೊಟ್ಟರೂ ಅಧಿಕಾರಿಗಳು ಒಬ್ಬೊಬ್ಬರು ಒಂದೊಂದು ವರದಿ ನೀಡಿ ಈ ಹಗರಣವನ್ನು ದಾರಿ ತಪ್ಪಿಸುತ್ತಿದ್ದಾರೆ.
ಈಗಿನ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ನಡುವೆ ಕೋಳಿ ಜಗಳ ನಡೆಯುತ್ತಿದೆ ಹೀಗಾದಾಗ ಗ್ರಾಹಕರು ಮತ್ತು ಠೇವಣಿದಾರರು,ಷೇರುದಾರರನ್ನು ರಕ್ಷಿಸುವವರು ಯಾರು ಮತ್ತು ಅವರು ಗತಿಯೇನು ಲೂಟಿ ಮಾಡಿದ ಹಣ ಯಾರು ವಸೂಲಿ ಮಾಡುವವರು ಯಾರು ಎಂಬುವುದು ಯಕ್ಷಪ್ರಶ್ನೆಯಾಗಿದೆ.
ಕೂಡಲೇ ಸಹಕಾರ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕು ಬ್ಯಾಂಕಿಗೆ ಆಡಳಿತಾಧಿಕಾರಿ ಗಳನ್ನು ನೇಮಕ ಮಾಡಿ ಸಾಲ ವಸೂಲಾತಿ ಮತ್ತು ವಹಿವಾಟು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು,ಕೂಡಲೇ ದಕ್ಷ ಅಧಿಕಾರಿಗಳ ಮೂಲಕ ಬ್ಯಾಂಕಿನಲ್ಲಿ ಆದ ಅವ್ಯವಹಾರ ಮತ್ತು ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಹಾಪುರ ಕೃಷ್ಣ ಪಟ್ಟಣ ಬ್ಯಾಂಕ ಉಳಿಸಿ ಹೋರಾಟ ಸಮಿತಿ ಯಲ್ಲಯ್ಯ ನಾಯಕ್ ವನದುರ್ಗ,ಸುಭಾಷ್ ತಳವಾರ,ಸಲಬಣ್ಣ ಸಾಹು ಆನೆಗುಂದಿ,ಮಹಾಂತೇಶ್ ಹುಲ್ಲೂರು,ಶರಣರಡ್ಡಿ ಹತ್ತಿಗೂಡೂರ,ಶರಣಪ್ಪ ಇಂಗಳಗಿ,ಗುರು ದೇಸಾಯಿ ಗಾಂಧಿ ಚೌಕ,ತಾಲೂಕ ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ವರದಿ-ರಾಜಶೇಖರ ಮಾಲಿ ಪಾಟೀಲ್